ಇನ್ಸ್ಟಾಗ್ರಾಮ್ ಗೆ ಹಾಕಲು ಫೋಟೋ ಬೇಕು, ಟ್ರೋಲ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದ ನಟಿ ಅನನ್ಯಾ
ಸೆಲೆಬ್ರಿಟಿಗಳು ಅದರಲ್ಲೂ ಹೆಚ್ಚಾಗಿ ಸಿನಿಮಾತಾರೆಯರು ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಫೋಟೋಶೂಟ್, ಬಟ್ಟೆಯ ವಿಚಾರ ಸೇರಿದಂತೆ ಸದಾ ಟ್ರೋಲ್ ಆಗುತ್ತಿರುತ್ತಾರೆ. ಟ್ರೋಲಿಗರಿಗೆ ಸೆಲೆಬ್ರಿಟಿಗಳು ಆಗಾಗ ಖಡಕ್ ಉತ್ತರವನ್ನು ನೀಡುತ್ತಿರುತ್ತಾರೆ. ಇತ್ತೀಚಿಗೆ ಬಟ್ಟೆಯ ವಿಚಾರಕ್ಕೆ ಟ್ರೋಲ್ ಆಗಿದ್ದ ಬಾಲಿವುಡ್ ನಟಿ ಅನನ್ಯಾ ಪಾಂಡೆ ಖಡಕ್ ಉತ್ತರ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯವಾಗಿರುವ ಅನನ್ಯಾ ಪಾಂಡೆ ಇನ್ಸ್ಟಾಗ್ರಾಮ್ ನಲ್ಲಿ ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ 15ಮಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ ಅನನ್ಯಾ ಮುದ್ದಾದ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತವೆ. ಆದರೆ ಕೆಲವೊಮ್ಮೆ ಟೀಕೆಗಳು ವ್ಯಕ್ತವಾಗುತ್ತಿರುತ್ತವೆ.
ಈ ಬಗ್ಗೆ ಅನನ್ಯಾ, ನಟಿ ಕರೀನಾ ಕಪೂರ್ ನಡೆಸಿಕೊಡುವ 'ವಾಟ್ ವಿಮೆನ್ ವಾಂಟ್' ಶೋನಲ್ಲಿ ಮಾತನಾಡಿದ್ದಾರೆ. 'ನಾನು ಯಾವುದೇ ಬಟ್ಟೆ ಹಾಕಿದರೂ ಜನ ಟ್ರೋಲ್ ಮಾಡುವುದನ್ನು ಬಿಡಲ್ಲ. ಎಲ್ಲಿಯ ವರೆಗೆ ಈ ಬಟ್ಟೆಗಳು ಕಂಫರ್ಟ್ ಎನಿಸುತ್ತವೆಯೋ ಅಲ್ಲಿಯವರೆಗೂ ಅವುಗಳನ್ನೇ ಧರಿಸುತ್ತೇನೆ. ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಲು ಒಳ್ಳೆಯ ಫೋಟೋಗಳು ಸಿಗುತ್ತವೆಯೋ ಅಲ್ಲಿಯವರೆಗೆ ಬಟ್ಟೆಗಳ ಕುರಿತು ಟ್ರೋಲ್ ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ.

ನಟಿ ಅನನ್ಯಾ ಪಾಂಡೆ ಬಾಲಿವುಡ್ ನ ಖ್ಯಾತ ನಟ ಚಂಕಿ ಪಾಂಡೆ ಪುತ್ರಿ. 'ಸ್ಟೂಡೆಂಟ್ ಆಫ್ ದಿ ಇಯರ್', ಪತಿ ಔರ್ ವೋ', ಖಾಲಿ ಪೀಲಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಡಿಮೆ ಸಿನಿಮಾ ಮಾಡಿದರೂ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ. ಸದ್ಯ ಬಾಲಿವುಡ್ ನಿಂದ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅನನ್ಯಾ ವಿಜಯ್ ದೇವರಕೊಂಡ ನಟನೆಯ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಪುರಿ ಜನನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











