ಪ್ರೇಮವೈಫಲ್ಯದಿಂದ ಮನನೊಂದು ಪ್ರಿಯಕರನ ಫೋಟೊಗಳಿಗೆ ಬೆಂಕಿ ಹಚ್ಚಿದ್ದರು ಈ ನಾಯಕಿ...!

ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚಕೊಡಿ ಮನಸಿನ ಇವತ್ತಿನ ಅನೇಕ ಯುವಕ ಮತ್ತು ಯುವತಿಯರಿಗಂತೂ ಲವ್ ಅನ್ನೋದು ಶೋಕಿ. ಅದರಲ್ಲಿಯೂ ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಮಾಮೂಲಿ. ಇಲ್ಲಿ ಇವತ್ತು ಒಬ್ಬರ ಜೊತೆ ಇದ್ದವರು, ಮರು ದಿನ ಇನ್ಯಾರದ್ದೋ ಜೊತೆಯಲ್ಲಿ ಇರುತ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಚಿತ್ರರಂಗದಲ್ಲಿವೆ.ಇದಕ್ಕೆ ಪೂರಕವಾಗಿ ಬಾಲಿವುಡ್ ಹೀರೋಯಿನ್ ಅನನ್ಯಾ ಪಾಂಡೆ ತಮ್ಮ ಬದುಕಿನ ಲವ್ ಮತ್ತು ಬ್ರೇಕ್‌ ಅಪ್ ಕಥೆಯನ್ನು ಈಗ ಹಂಚಿಕೊಂಡಿದ್ದಾರೆ.

ಹೌದು, ಅನನ್ಯಾ ಪಾಂಡೆ, ಬಾಲಿವುಡ್‌ನ ಹಿರಿಯ ಕಲಾವಿದ ಚಂಕಿ ಪಾಂಡೆಯ ಮಗಳು. ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅನನ್ಯಾ ಪಾಂಡೆ ಸಂದರ್ಶನವೊಂದರಲ್ಲಿ ಪ್ರೀತಿಯಲ್ಲಿ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ. ನೊಂದು ಬೆಂದು ಕಣ್ಣೀರು ಹಾಕಿ ಪ್ರಿಯಕರನ ಭಾವ ಚಿತ್ರವನ್ನು ಸುಟ್ಟು ಹಾಕಿರುವುದಾಗಿ ಹೇಳಿದ್ದಾರೆ.

Ananya Panday revealed that she used to burn photographs of her ex to cope with her breakup

ಹೌದು, ಗಲಾಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನನ್ಯಾ ಪಾಂಡೆ, ಬಾಯ್‌ಫ್ರೆಂಡ್‌ ಜೊತೆ ಸಂಬಂಧ ಮುರಿದು ಬಿದ್ದಾಗ ನಾನು ಆತನ ಫೋಟೋಗಳಿಗೆ ಬೆಂಕಿ ಹಚ್ಚಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ನನ್ನ ನೋವು ಮತ್ತು ಹತಾಶೆಯನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದೇ ಎಂದು ಹೇಳಿದ್ದಾರೆ. ಮುಂದುವರೆದು ಈ ತರಹದ ಕೆಲಸವನ್ನೂ ಜಗತ್ತಿನಲ್ಲಿ ಮಾಡಿದ ಏಕೈಕ ಹೆಣ್ಣು ನಾನು ಎಂದು ನಾನು ಹೇಳಲಾರೆ ಯಾಕೆಂದರೆ ಅನೇಕರು ಪ್ರೀತಿಯಲ್ಲಿ ಮೋಸ ಹೋದಾಗ, ನೋವು ಆದಾಗ ಈ ರೀತಿ ಮಾಡಿರುತ್ತಾರೆ ಎಂದು ಹೇಳಿದ್ದಾರೆ. ಹೀಗೆ ಫೋಟೋಗಳನ್ನು ಸುಡುವ ಮೂಲಕ ಮೊದಲು ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದೆ ಆದರೆ ಈಗ ಆ ತರಹ ಮಾಡುವುದಿಲ್ಲ ಎಂದು ಕೂಡ ಅನನ್ಯಾ ಪಾಂಡೆ ಹೇಳಿದ್ದಾರೆ.

ಅಂದ್ಹಾಗೇ ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕಿಳಿಯದ ಅನನ್ಯಾ ಪಾಂಡೆಯ ಹೆಸರು ಈ ಹಿಂದೆ ಆಶಿಕಿ 2 ಚಿತ್ರದ ಹೀರೋ ಆದಿತ್ಯ ರಾಯ್ ಕಪೂರ್ ಜೊತೆ ಥಳುಕು ಹಾಕಿಕೊಂಡಿತ್ತು. ನಿಜಾ.. ಈ ಕುರಿತು ಆದಿತ್ಯ ರಾಯ್ ಕಪೂರ್ ಆಗಲಿ ಅನನ್ಯಾ ಪಾಂಡೆಯಾಗಲಿ ಬಹಿರಂಗವಾಗಿ ಹೇಳದೇ ಇದ್ದರೂ ಅನೇಕರಿಗೆ ಇಬ್ಬರ ಮೇಲೆ ಅನುಮಾನ ಇದ್ದೇ ಇತ್ತು, ಇದಕ್ಕೆ ಪೂರಕವಾಗಿ ಇಬ್ಬರು ಕೈ ಹಿಡಿದು ಕೇವಲ ಮುಂಬೈ ಮಾತ್ರ ಅಲ್ಲ ದೇಶದ ನಾನಾ ಭಾಗಗಳಲ್ಲಿ ಜೊತೆಯಾಗಿ ಓಡಾಡಿದ್ದರು. ಆದರೆ, ಆ ನಂತರ ಅದೇನಾಯ್ತೋ ಎರಡು ವರ್ಷ ಪ್ರೇಮ ಗೀತೆಯನ್ನೂ ಹಾಡಿದ ಇಬ್ಬರು ಈ ವರ್ಷದ ಆರಂಭದಲ್ಲಿ ದೂರವಾದರು. ಮನದ ನೋವುಗಳಿಗೆ ಜಾಗ ಎಲ್ಲಿದೆ ಎಂದು ವಿರಹ ಗೀತೆ ಹಾಡಲು ಶುರುಮಾಡಿದರು.

Ananya Panday revealed that she used to burn photographs of her ex to cope with her breakup

ಸದ್ಯ ಅನನ್ಯಾ ಪಾಂಡೆ ತಮ್ಮ ಈ ಬ್ರೇಕ್‌ಪ್ ಕಥೆ ಹಂಚಿಕೊಂಡ ಬೆನ್ನಲ್ಲಿಯೇ ಆದಿತ್ಯ ರಾಯ್ ಕಪೂರ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಆದಿತ್ಯ ರಾಯ್ ಕಪೂರ್ ಅವರಿಂದ ದೂರವಾದ ನಂತರ ಅನನ್ಯಾ ಪಾಂಡೆ ಅವರ ಫೋಟೋಗಳನ್ನು ತಾವು ಸುಟ್ಟು ಹಾಕಿರುವುದಾಗಿ ಈ ಮೂಲಕ ಹೇಳುತ್ತಿದ್ದಾರಾ ಎನ್ನುವ ಅನುಮಾನವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರು ದೂರವಾಗಲು ನಿಜವಾದ ಕಾರಣವೇನು ಎನ್ನುವುದನ್ನು ಹುಡುಕುತ್ತಿದ್ದಾರೆ. ಉಳಿದಂತೆ ಆದಿತ್ಯ ರಾಯ್ ಕಪೂರ್ ಅವರಿಂದ ದೂರವಾದ ಅನನ್ಯಾ ಪಾಂಡೆ ಸದ್ಯಕ್ಕೆ ಅನಂತ್ ಅಂಬಾನಿ ಬಳಿ ಕೆಲಸಕ್ಕೆ ಇರುವ ಅಮೆರಿಕಾದ ಮಾಡೆಲ್ ವಾಕರ್ ಬ್ಲಾಂಕೋ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಇದೆ. ಇವರಿಬ್ಬರ ನಡಾವಳಿ ಕೂಡ ಹರಿದಾಡುತ್ತಿರುವ ಸುದ್ದಿಗಳಿಗೆ ಪೂರಕವಾಗಿ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X