ಹಣ ನೀಡಿ ತಮ್ಮ ಮಗನ ಮದ್ವೆಗೆ ಸ್ಟಾರ್‌ಗಳನ್ನು ಕರೆಸಿಕೊಂಡಿದ್ದರಾ ಮುಖೇಶ್ ಅಂಬಾನಿ, ನಟಿ ಬಿಚ್ಚಿಟ್ಟ ಸತ್ಯವೇನು..?
ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಚಿತ್ರರಂಗದವರು ಕೂರುವುದಕ್ಕೆ, ನಿಲ್ಲುವುದಕ್ಕೆ ಹಣ ಪಡೆಯುತ್ತಾರೆ. ಕೇಳಿದಷ್ಟು ದುಡ್ಡು ನೀಡಿದರೆ ಸಾಕು, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಸಭೆ-ಸಮಾರಂಭದಲ್ಲಿ ಡ್ಯಾನ್ಸ್ ಕೂಡ ಮಾಡಿ ಹೋಗುತ್ತಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಈ ಸಂಪ್ರದಾಯ ತುಸು ಹೆಚ್ಚೇ ಇದೆ.
ಈ ಕಾರಣಕ್ಕೆ ಅನಂತ್ ಅಂಬಾನಿಯ ಮದುವೆಯ ಆಸು ಪಾಸು ಹಿಂದಿ ಚಿತ್ರರಂಗದವರ ಮೇಲೆ ಅನೇಕರಿಗೆ ಅನುಮಾನ ಇತ್ತು. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಸ್ಟಾರ್‌ಗಳೆಲ್ಲ ಅಂಬಾನಿ ಕಡೆಯಿಂದ ಹಣ ಪಡೆದಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಈಗ ಆ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಅನನ್ಯಾ ಪಾಂಡೆಯ ಮಾತು.

ಹೌದು, ಅನನ್ಯಾ ಪಾಂಡೆ, ಬಾಲಿವುಡ್‌ನ ಹಿರಿಯ ಕಲಾವಿದ ಚಂಕಿ ಪಾಂಡೆಯ ಮಗಳು. ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಈ ಚೆಲುವೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವೈಭವೋಪೇತ ಮದುವೆಯ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿರುವ ಅನನ್ಯಾ ಪಾಂಡೆ, ಕುಣಿಯಲು ನಾನು ದುಡ್ಡು ಪಡೆದಿಲ್ಲ. ಜನ ಯಾಕೆ ಆ ರೀತಿ ಅಂದುಕೊಳ್ಳುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.
ಅವರಿಬ್ಬರು ನನ್ನ ಸ್ನೇಹಿತರು, ಸ್ನೇಹಿತರ ಮದುವೆಯಲ್ಲಿ ಖುಷಿ ಖುಷಿಯಾಗಿ ನಾನು ಭಾಗವಹಿಸಿದ್ದೆ, ಮನದುಂಬಿ ಡ್ಯಾನ್ಸ್ ಮಾಡಿದೆ, ಮದುವೆ ಸಮಾರಂಭದ ಪ್ರತಿಯೊಂದು ಕ್ಷಣಗಳನ್ನು ಸಂಭ್ರಮದಿಂದ ಕಣ್ತುಂಬಿಕೊಂಡೆ ಎಂದು ಹೇಳಿದ್ದಾರೆ. ಈ ಮೂಲಕ ಮದುವೆಯಲ್ಲಿ ಭಾಗಿಯಾಗಲು ಮುಖೇಶ್ ಅಂಬಾನಿ ಬಾಲಿವುಡ್‌ನವರಿಗೆ ಹಣ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಅನನ್ಯಾ ಪಾಂಡೆ.

ಇನ್ನೂ ಇದೇ ಸಂದರ್ಶನದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರದ್ದು ಪರಿಶುದ್ಧವಾದ ಪ್ರೀತಿ. ಅವರಿಬ್ಬರ ಕಣ್ಣಲ್ಲಿ ನನಗೆ ಗಾಢವಾದ ಪ್ರೀತಿ ಕಾಣಿಸಿತು ಎಂದಿರುವ ಅನನ್ಯಾ ನನಗೂ ನನ್ನ ಜೀವನದಲ್ಲಿ ಆ ತರಹದ ಪ್ರೀತಿ ಬೇಕು ಎಂದಿದ್ದಾರೆ. ಅಷ್ಟೊಂದು ಸಂಪ್ರದಾಯಗಳು ನಡೆಯುತ್ತಿದ್ದರು, ಇಡೀ ಮದುವೆಯ ಸ್ಥಳ ಅತಿಥಿಗಳಿಂದ ತುಂಬಿ ತುಳುಕುತ್ತಿದ್ದರೂ, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಮುಖೇಶ್ ಅಂಬಾನಿ ಅವರು ನೋಡಿಕೊಂಡರು ಎಂದು ಹೇಳಿರುವ ಅನನ್ಯಾ , ಪ್ರತಿಯೊಬ್ಬರನ್ನು ಅವರು ಗೌರವದಿಂದ ನಡೆಸಿಕೊಂಡ ರೀತಿ, ಪ್ರತಿಯೊಬ್ಬರಿಗೂ ನೀಡಿದ ಸತ್ಕಾರ ಅವರ ಆತಿಥ್ಯ ಎಲ್ಲವನ್ನೂ ಮರೆಯಲು ಸಾಧ್ಯವೇ ಇಲ್ಲ ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ಕೋಟ್ಯಾಧಿಪತಿ ಕೂಸಿನ ಮದುವೆ ಸಮಾರಂಭದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಾಮ್ ಚರಣ್ ತೇಜಾ, ರಣ್ ವೀರ್ ಸಿಂಗ್, ಪ್ರಿಯಾಂಕ ಚೋಪ್ರಾ, ಕೃತು ಸನೂನ್, ಆಲಿಯಾ ಭಟ್, ರಣ್‌ಬೀರ್ ಕಪೂರ್, ಹೀಗೆ ಬಾಲಿವುಡ್‌ನ ಹಳೆಯ ಮತ್ತು ಇಂದಿನ ಕಲಾವಿದರೆಲ್ಲರು ಭಾಗಿಯಾಗಿದ್ದರು. ತಾಳಕ್ಕೆ ತಕ್ಕಂತೆ ನವ ಜೋಡಿಯ ಮುಂದೆ ತಮ್ಮ ಪ್ರತಿಷ್ಠೆಯನ್ನೆಲ್ಲ ಪಣಕಿಟ್ಟು ಥೈ ಥಕ ಕುಣಿದಿದ್ದರು. ಕೇವಲ ಚಿತ್ರರಂಗದವರು ಮಾತ್ರವಲ್ಲದೇ ಹಾರ್ದಿಕ್ ಪಾಂಡ್ಯ ಸೇರಿ ಕ್ರಿಕೆಟ್ ಆಟಗಾರರು ಕೂಡ ಹೆಜ್ಜೆ ಹಾಕಿದ್ದರು.
ಇಷ್ಟೇ ಯಾಕೆ ಸಾಮಾನ್ಯವಾಗಿ ಆಡಂಬರ ಮದುವೆಗಳಿಂದ ಅಂತರ ಕಾಪಾಡಿಕೊಳ್ಳುವ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ 20ರ ಯುವಕನಂತೆ ಕ್ರೀಮ್ ಕಲರ್ ಪಂಚೆ, ಕುರ್ತಾ ತೊಟ್ಟು ಕುಣಿದಿದ್ದರು. ರಜಿನಿಯ ಈ ಡ್ಯಾನ್ಸ್ ನೋಡಿ ಅನೇಕರು ದುಡ್ಡಿನ ತಾಳಕ್ಕೆ ಯಾರು, ಎಲ್ಲಿ ಬೇಕಾದರೂ ಕುಣಿಯುತ್ತಾರೆ ಎಂದು ಇವರನ್ನು ಅನೇಕರು ಟ್ರೋಲ್ ಕೂಡ ಮಾಡಿದ್ದರು.


Click it and Unblock the Notifications











