Just In
Don't Miss!
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್ 2021: ಸಂಪೂರ್ಣ ವೇಳಾಪಟ್ಟಿ, ಪಂದ್ಯದ ಸ್ಥಳ ಹಾಗೂ ತಂಡ
- News
ಕೊರೊನಾ ಲಸಿಕೆ ಪಡೆದ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್
- Automobiles
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬೇಬಿಮೂನ್ ಎಂದರೇನು? ಇದು ಏಕೆ ಒಳ್ಳೆಯದು?
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆತ ಅದ್ಭುತ ಕಿಸ್ಸರ್': ಚೊಚ್ಚಲ ಚುಂಬನದ ಬಗ್ಗೆ ಸ್ಟಾರ್ ನಟನ ಪುತ್ರಿ ಹೇಳಿದ್ದೇನು?
ಬಾಲಿವುಡ್ ಯುವನಟ ಟೈಗರ್ ಶ್ರಾಫ್ ಒಳ್ಳೆಯ ಡ್ಯಾನ್ಸರ್, ಸಖತ್ ಆಗಿ ಆಕ್ಷನ್ ಮಾಡ್ತಾರೆ ಎಂಬ ಟಾಕ್ ಇದೆ. ಅಷ್ಟೇ ಅಲ್ಲ ಅವರೊಬ್ಬರ ಗ್ರೇಟ್ ಕಿಸ್ಸರ್ ಎಂಬುದು ಈಗ ಬಹಿರಂಗವಾಗಿದೆ.
'ಟೈಗರ್ ಶ್ರಾಫ್ ಓರ್ವ ಗ್ರೇಟ್ ಕಿಸ್ಸರ್' ಎಂದು ಬಾಲಿವುಡ್ ನಟ ಚುಂಕಿ ಪಾಂಡೆ ಅವರ ಮಗಳ ಅನನ್ಯ ಪಾಂಡೆ ಹೇಳಿದ್ದಾರೆ. ಟೈಗರ್ ಶ್ರಾಫ್ ಅಭಿನಯದ 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದಲ್ಲಿ ಅನನ್ಯ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾಗ ನಟಿ ಈ ಹೀಗೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅನನ್ಯ ಪಾಂಡೆಗೆ ಇದು ಮೊದಲ ಸಿನಿಮಾ. ಮೇ 10 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಚಿತ್ರದಲ್ಲಿ ಅನನ್ಯ ಪಾಂಡೆ ಜೊತೆ ಮತ್ತೊಬ್ಬ ನಟಿ ತಾರಾ ಸುತಾರಿಯ ಕೂಡ ನಟಿಸಿದ್ದಾರೆ. ಟೈಗರ್ ಶ್ರಾಪ್ ಗ್ರೇಟ್ ಕಿಸ್ಸರ್ ಎಂದು ಹೇಳಿದ ಅನನ್ಯ ಪಾಂಡೆ ಮಾತಿಗೆ ನಟಿ ತಾರಾ ಸುತಾರಿಯಾ ಕೂಡ ಹೌದು ಎಂದಿದ್ದಾರೆ.
ಚಿತ್ರದಲ್ಲಿ ಟೈಗರ್ ಶ್ರಾಫ್ ಗೆ ಕಿಸ್ ಮಾಡಿರುವ ಬಗ್ಗೆ ಮಾತನಾಡಿದ ಅನನ್ಯ ಪಾಂಡೆ 'ಇದು ನನಗೆ ಮೊದಲ ಕಿಸ್, ಇದುವರೆಗೂ ನಾನು ಯಾರಿಗೂ ಕಿಸ್ ಮಾಡಿಲ್ಲ. ಹಾಗಾಗಿ, ಇದು ಅದ್ಭುತ ಅನುಭವ' ಎಂದಿದ್ದಾರೆ.
ಇನ್ನುಳಿದಂತೆ 2012ರಲ್ಲಿ ತೆರೆಕಂಡಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಸೀಕ್ವೆಲ್ ಇದಾಗಿದ್ದು, ಪುನೀತ್ ಮಲ್ಹೋತ್ರ ನಿರ್ದೇಶನ ಮಾಡಿದ್ದಾರೆ. ಮೇ 10 ರಂದು ಈ ಸಿನಿಮಾ ತೆರೆಕಾಣುತ್ತಿದೆ.