ಬಿಕಿನಿ ತೊಟ್ಟ ಮಾಡೆಲ್‌ ಗೆ ಅತ್ಯಾಚಾರ ಬೆದರಿಕೆ ಹಾಕಿದ ಮಹಿಳೆ!

ಸಾಮಾಜಿಕ ಜಾಲತಾಣದಲ್ಲಿ ನಟಿಯರ ಬಗ್ಗೆ ಅವಹೇಳನ ಮಾಡುವ ಪೋಸ್ಟ್‌ಗಳಿಗೆ ಅಂಕೆಯೇ ಇಲ್ಲ. ಪ್ರತಿದಿನವೂ ನಟಿಯರನ್ನು ಇದನ್ನು ಎದುರಿಸುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಟಿ ನಟಿ ಮೀರಾ ಚೋಪ್ರಾ, ಜೂ.ಎನ್‌ಟಿಆರ್ ಅಭಿಮಾನಿಗಳಿಂದ ಅತ್ಯಾಚಾರ ಬೆದರಿಕೆಗಳನ್ನು ಎದುರಿಸಿದ್ದರು.

Recommended Video

ಯಾರ ಮೇಲೆ ಯುದ್ಧಕ್ಕೆ ನಿಂತರು ಅರ್ಜುನ್ ಸರ್ಜಾ..? | Arjun Sarja on Social Media

ತಮಗೆ ಬಂದ ಬೆದರಿಕೆಗಳನ್ನು ಧೈರ್ಯವಾಗಿ ಎದುರಿಸಿದ ನಟಿ ಮಿರಾ ಚೋಪ್ರಾ, ತಮಗೆ ಬೆದರಿಕೆ ಹಾಕಿದ, ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಗಳ ವಿರುದ್ಧ ದೂರು ಸಹ ದಾಖಲಿಸಿದರು. ಈಗ ಮತ್ತೊಂದು ಪ್ರಕರಣದಲ್ಲಿ ಮತ್ತೊಬ್ಬ ಮಾಡೆಲ್ ಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಹೀಗೆ ಅತ್ಯಾಚಾರ ಬೆದರಿಕೆ ಹಾಕಿರುವುದು ಒಬ್ಬ ಮಹಿಳೆ!

ಮಹಿಳೆಯೊಬ್ಬರು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ!

ಮಹಿಳೆಯೊಬ್ಬರು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ!

ನಟಿ ಅನನ್ಯಾ ಪಾಂಡೆ ಅವರ ಸಹೋದರ ಸಂಬಂಧಿ ನಟಿ, ಮಾಡೆಲ್ ಅಲನ್ನಾ ಪಾಂಡೆ ಅವರು ಬಿಕಿನಿ ಧರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಚಿತ್ರ ನೋಡಿದ ಮಹಿಳೆಯೊಬ್ಬರು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ.

'ನಿನ್ನನ್ನು ಸಾಮೂಹಿಕ ಅತ್ಯಾಚಾರ ಮಾಡಬೇಕು'

'ನಿನ್ನನ್ನು ಸಾಮೂಹಿಕ ಅತ್ಯಾಚಾರ ಮಾಡಬೇಕು'

ಚಿತ್ರವನ್ನು ನೋಡಿದ ಮಹಿಳೆಯೊಬ್ಬರು, 'ನಿನ್ನನ್ನು ಸಾಮೂಹಿಕ ಅತ್ಯಾಚಾರ ಮಾಡಬೇಕು, ಸಾಮೂಹಿಕ ಅತ್ಯಾಚಾರ ಮಾಡಲು ನೀನು ಲಾಯಕ್ಕು' ಎಂಬರ್ಥದ ಕಮೆಂಟ್ ಮಾಡಿದ್ದರಂತೆ. ಈ ಬಗ್ಗೆ ಅಲನಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಿಕಿನಿ ಪೋಸ್ಟ್‌ಗೆ ಪೋಷಕರನ್ನು ಟ್ಯಾಗ್ ಮಾಡಿದ್ದಾರೆ

ಬಿಕಿನಿ ಪೋಸ್ಟ್‌ಗೆ ಪೋಷಕರನ್ನು ಟ್ಯಾಗ್ ಮಾಡಿದ್ದಾರೆ

ಅಷ್ಟಕ್ಕೇ ಸುಮ್ಮನಾಗದ ಆ ಮಹಿಳೆ ಅಲನಾ ಪಾಂಡೆಯ ಪೋಷಕರನ್ನು ಸಹ ಬಿಕಿನಿ ಪೋಸ್ಟ್‌ನ ಕಮೆಂಟ್‌ ನಲ್ಲಿ ಟ್ಯಾಗ್ ಮಾಡಿದ್ದಾಳೆ. ನಂತರ ಆ ಕಮೆಂಟ್ ಅನ್ನು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿತಂತೆ. ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಆಗಲಿಲ್ಲ ಎಂದಿದ್ದಾರೆ ಅಲನಾ.

ಪ್ರತಿದಿನ ಇಂಥಹವು ಓದುತ್ತಿರುತ್ತೇನೆ: ಅಲನಾ

ಪ್ರತಿದಿನ ಇಂಥಹವು ಓದುತ್ತಿರುತ್ತೇನೆ: ಅಲನಾ

ಈ ಘಟನೆ ನಡೆದು ತಿಂಗಳಾಯಿತಂತೆ. ಆದರೆ ಈ ರೀತಿಯ ಕಮೆಂಟ್‌ಗಳನ್ನು ನಾನು ಪ್ರತಿದಿನ ಓದುತ್ತೇನೆ. ಪ್ರತಿದಿನ ನನಗೆ ಇಂಥಹಾ ಕಮೆಂಟ್‌ಗಳು ಬರುತ್ತವೆ. ಈ ಬಗ್ಗೆ ನಾನು ಇದಕ್ಕೆ ಮುನ್ನವೇ ಮಾತನಾಡಬೇಕಿತ್ತು ಎಂದಿದ್ದಾರೆ ಮಾಡೆಲ್ ಅಲನಾ.

ಅಸಹ್ಯಕರ ಕಮೆಂಟ್‌ಗಳು ಬರುತ್ತಲೇ ಇರುತ್ತವೆ: ಅಲನಾ

ಅಸಹ್ಯಕರ ಕಮೆಂಟ್‌ಗಳು ಬರುತ್ತಲೇ ಇರುತ್ತವೆ: ಅಲನಾ

ಬೆಳಿಗ್ಗೆ ಎದ್ದ ಕೂಡಲೇ ಈ ರೀತಿಯ ಕೆಟ್ಟ, ಅಸಹ್ಯ ಕಮೆಂಟ್‌ಗಳನ್ನು ಓದುವುದು ನನ್ನ ಪ್ರತಿದಿನದ ಕೆಲಸವಾಗಿಬಿಟ್ಟಿದೆ ಎಂದು ನೊಂದುಕೊಂಡಿರುವ ಅಲನಾ, ಇಲ್ಲಿ ನಾನು ಪೋಸ್ಟ್ ಮಾಡಿರುವುದು ಕೇವಲ 1% ಅಷ್ಟೆ ಇಂಥಹವನ್ನು ನಾನು ಸಾಕಷ್ಟು ನೋಡುತ್ತಲೇ ಇರುತ್ತೇನೆ ಎಂದಿದ್ದಾರೆ.

ಮಾದಕ ಚಿತ್ರಗಳಿಂದ ಖ್ಯಾತವಾಗಿರುವ ಅಲನಾ

ಮಾದಕ ಚಿತ್ರಗಳಿಂದ ಖ್ಯಾತವಾಗಿರುವ ಅಲನಾ

ಮಾಡೆಲ್ ಆಗಿರುವ ಅಲನಾ ಪಾಂಡೆ ತಮ್ಮ ಮಾದಕ ಚಿತ್ರಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಯಾವ ಸಿನಿಮಾದಲ್ಲೂ ಇನ್ನೂ ನಟಿಸದಿದ್ದರೂ ಅಲನಾ ಬಾಲಿವುಡ್‌ನಲ್ಲಿ ಸಖತ್ ಫೇಮಸ್. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ರಾಯಭಾರಿ ಸಹ.

More from Filmibeat

English summary
Ananya Panday's cousin model Alanna Panday got abuse in Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X