ಪ್ರಿಯಾಂಕಾ ಚೋಪ್ರಾಳ ಫಾರಿನ್ ಗಂಡನನ್ನೇ ಪಕ್ಕಕ್ಕೆ ತಳ್ಳಿದ ಅನನ್ಯಾ ಪಾಂಡೆ..!

ಲೋಕಲ್ To ಗ್ಲೋಬಲ್ ಎಂಬ ಕಾನ್ಸೆಪ್ಟ್‌ನ ಅತ್ಯುತ್ತಮವಾಗಿ ಮಾರ್ಕೆಟಿಂಗ್ ಮಾಡಿದವರು ಯಾರು, ಸಂದರ್ಭ ಸಹಿತ ವಿವರಿಸಿ ಎಂದು ಮಕ್ಕಳಿಗೆ ಯಾರಾದರೂ ಕೇಳಿದರೆ, ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಭವ್ಯ ವಿವಾಹವನ್ನು ಉತ್ತರವನ್ನಾಗಿ ನೀಡುವ ಸಾಧ್ಯತೆ ಇದೆ. ಅಷ್ಟರ ಮಟ್ಟಿಗೆ ಅಂಬಾನಿ ಮಗನ ಮದುವೆ ವಿಷಯ ಸಾಮಾನ್ಯರ ಜನಜೀವನದಲ್ಲಿ ಹಾಸು ಹೊಕ್ಕಿದೆ.ಆ ಆಡಂಬರ.. ಸಡಗರ.. ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂಬ ವಾತಾವರಣ ನಿರ್ಮಾಣವಾಗಿದೆ.

ಇನ್ನೂ ಅಂಬಾನಿ ಮಗನನ್ನು ಖುಷಿ ಪಡಿಸಲು ರಜಿ‌ನಿಕಾಂತ್ ಅವರಿಂದ ಹಿಡಿದು ಸಲ್ಮಾನ್ ಖಾನ್ ವರೆಗೆ ಅನೇಕರು ಥೈ ಥಕ ಕುಣಿದಿದ್ದಾರೆ. ತಾಳಕ್ಕೆ ತಕ್ಕಂತೆ ನವ ಜೋಡಿಯ ಮುಂದೆ ತಮ್ಮ ಪ್ರತಿಷ್ಠೆಯನ್ನೆಲ್ಲ ಪಣಕಿಟ್ಟು ಕುಣಿ..ಕುಣಿ..ಕುಣಿದಾಡಿದ್ದಾರೆ.‌ಆದರೆ. ಇವರೆಲ್ಲರ ಡ್ಯಾನ್ಸ್ ಹುಟ್ಟು ಹಾಕದ ಚರ್ಚೆಯನ್ನು ಅನನ್ಯ ಪಾಂಡೆ ಅವರ ವೀಡಿಯೋವೊಂದು ಹುಟ್ಟು ಹಾಕಿದೆ.

Ananya Pandey Faces Backlash Over Alleged Incident at Anant Ambani s Wedding Video Goes Viral

ಹೌದು, ಅಸಲಿಗೆ ಕೋಟ್ಯಾಧಿಪತಿಯ ಕೂಸಿನ ಮದುವೆಯನ್ನು ಕಣ್ತುಂಬಿಕೊಳ್ಳಲು, ಪಾಪ, ಪ್ರಿಯಾಂಕ ಚೋಪ್ರಾ ಸಪ್ತಸಾಗರವನ್ನು ದಾಟಿಕೊಂಡು ಮುಂಬೈಗೆ ಬಂದಿದ್ದಾರೆ. ತಮ್ಮದೇ ಮದ್ವೆ ಎಂಬಂತೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಆದರೆ, ಇದೇ ಸಮಯದಲ್ಲಿ ಚಂಕಿ ಪಾಂಡೆಯ ಮಗಳು ಅನನ್ಯ ಪಾಂಡೆ, ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್‌ ಅವರನ್ನು ತಳ್ಳಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ

ಹಾಗೇ ನೋಡಿದ್ರೆ ಪ್ರಿಯಾಂಕ ಗಂಡ ನಿಕ್ ಜೋನಾಸ್‌ ಅವರನ್ನು ಅನನ್ಯ ಪಾಂಡೆ ಉದ್ದೇಶಪೂರ್ವಕವಾಗಿ ತಳ್ಳಿಲ್ಲ ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತೆ. ಆದರೆ.. ಪ್ರಿಯಾಂಕ ಚೋಪ್ರಾ ಅವರನ್ನು ಹತ್ತಿರದಿಂದ ನೋಡುವ ಬಯಕೆ ಅನನ್ಯಾ ಪಾಂಡೆ ಅವರಿಗೆ ಪ್ರೇರೆಪಿಸಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರಿಯಾಂಕಾ ಪತಿ ನಿಕ್‌ ಜತೆ ಡ್ಯಾನ್ಸ್‌ ಮಾಡುವಾಗ, ಏಕಾಏಕಿ ಅನನ್ಯಾ ಪಾಂಡೆ ಅವರು ಬಂದು ನಿಕ್‌ ಅವರನ್ನು ತಳ್ಳಿ ಪ್ರಿಯಾಂಕ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪರ-ವಿರೋಧ ಚರ್ಚೆಯನ್ನು ಈ ವಿಡಿಯೋ ಹುಟ್ಟು ಹಾಕಿದೆ.

ವಿಡಿಯೋ ನೋಡಿದ ನಂತರ ಕೆಲವರು ʻ'ಶಿಷ್ಟಾಚಾರವಿಲ್ಲದ ಹುಡುಗಿʼಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻನಿಕ್‌ಗೆ ಮುಜುಗರ ಆಗಿರಬೇಕುʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಉಳಿದವರು ಸಭ್ಯತೆಯ ಪಾಠವನ್ನೂ ಅನನ್ಯ ಪಾಂಡೆಗೆ ಮಾಡುತ್ತಿದ್ದಾರೆ. ಕಿಡಿಯನ್ನೂ ಕಾರುತ್ತಿದ್ದಾರೆ.

ಉಳಿದಂತೆ ನಿಕ್‌ ಅವರನ್ನು ತಳ್ಳಿದ ಕೂಡಲೇ ರಣವೀರ್‌ ಸಿಂಗ್‌ ಅವರು ನಿಕ್‌ ಅವರನ್ನು ಅಪ್ಪಿಕೊಂಡ ವಿಡಿಯೊ ಕೂಡ ವೈರಲ್‌ ಆಗಿದೆ. ಹೀಗಾಗಿ ಅನನ್ಯಾ ಅವರ ನಡವಳಿಕೆಗೆ ತೆಗಳಿ, ರಣವೀರ್‌ ಅವರನ್ನು ಅವರನ್ನು ಅನೇಕರು ಹೊಗಳುತ್ತಿದ್ದಾರೆ. ಅಂದ್ಹಾಗೇ ನಿನ್ನೆ ಶುಕ್ರವಾರ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ನೆರವೇರಿದ್ದು,ಇಂದು 'ಶುಭ್ ಆಶೀರ್ವಾದ' ಮತ್ತು ನಾಳೆ 'ಮಂಗಲ್ ಉತ್ಸವ' ಅಥವಾ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X