twitter
    For Quick Alerts
    ALLOW NOTIFICATIONS  
    For Daily Alerts

    ಕಂಗನಾ ಮತ್ತು ಸಹೋದರಿಗೆ ಮತ್ತೊಂದು ಕಂಟಕ: ಮತ್ತೊಂದು ತನಿಖೆಗೆ ಕೋರ್ಟ್ ಆದೇಶ

    |

    ಪ್ರಚೋದನಕಾರಿ ಟ್ವೀಟ್‌ಗಳ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬ ಆರೋಪದಲ್ಲಿ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿಗೆ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಿ ಎಂದು ಬಾಂಬೆ ಕೋರ್ಟ್ ಈ ಹಿಂದೆಯೇ ಆದೇಶಿಸಿದೆ.

    ಇದೀಗ, ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಭಗವತ್ ಟಿ ಜಿರಾಪೆ ಸಹ ಮತ್ತೊಂದು ಪ್ರಕರಣದಲ್ಲಿ ಕಂಗನಾ ಹಾಗೂ ಸಹೋದರಿ ವಿರುದ್ಧ ತನಿಖೆ ಮಾಡಿ ಎಂದು ಮುಂಬೈ ಪೊಲೀಸರಿಗೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡನೇ ಪ್ರಕರಣ ಯಾವುದು? ಕಂಗನಾ ವಿರುದ್ಧ ದಾಖಲಾದ ಮತ್ತೊಂದು ಕೇಸ್ ಯಾವುದು? ಮುಂದೆ ಓದಿ....

    ಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

    ಅಲಿ ಕಾಶಿಫ್ ಖಾನ್ ದೇಶ್ಮುಖ್ ದೂರು

    ಅಲಿ ಕಾಶಿಫ್ ಖಾನ್ ದೇಶ್ಮುಖ್ ದೂರು

    ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಅವರು ಕಂಗನಾ ಮತ್ತು ರಂಗೋಲಿ ವಿರುದ್ಧ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಕಂಪ್ಲೆಂಟ್ ನೀಡಿದರೂ ಅಂಬೋಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೋರ್ಟ್‌ನಲ್ಲಿ ದೂರಿದ್ದಾರೆ.

    ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದಾರೆ

    ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದಾರೆ

    ''ಆರೋಪಿತರು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದುರುದ್ದೇಶಪೂರಿತವಾಗಿ ದ್ವೇಷವನ್ನು ಹರಡುವುದರ ಮೂಲಕ ಕಾನೂನುಬಾಹಿರ ಮತ್ತು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದಾರೆ. ಹಗೆತನದಿಂದ ಪೋಸ್ಟ್ ಮಾಡುವ ಮೂಲಕ ದೇಶದಲ್ಲಿ ಸಾಮರಸ್ಯ ಕದಡುವ ಕೃತ್ಯಗಳನ್ನು ಮಾಡಿದ್ದಾರೆ. ಒಂದು ವರ್ಗದ ಧರ್ಮ ಅಥವಾ ಧಾರ್ಮಿಕ ಭಾವನೆಗಳನ್ನು ಅವಮಾನಿಸುತ್ತಿದ್ದಾರೆ. ಧಾರ್ಮಿಕ ಭಾವನೆಗಳ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿ ಮಾಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.

    ರಾಜಕೀಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ

    ರಾಜಕೀಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ

    ''ಕಂಗನಾ ಮತ್ತು ರಂಗೋಲಿ ಇಬ್ಬರು ಅನಗತ್ಯ ವಿವಾದಗಳನ್ನು ಹುಟ್ಟುಹಾಕಲು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಉದ್ಯಮದಿಂದ ನಟ ಹೃತಿಕ್ ರೋಷನ್, ಆದಿತ್ಯ ಪಾಂಚೋಲಿ ವಿರುದ್ಧ ಅಥವಾ ಗೌರವಾನ್ವಿತ ಪತ್ರಕರ್ತ ಸೇರಿದಂತೆ ದೊಡ್ಡ ಸಮುದಾಯಗಳ ವಿರುದ್ಧವೂ ಆರೋಪಗಳನ್ನ ಮಾಡಿ ಸುದ್ದಿಯಾಗಿದ್ದಾರೆ. ರಂಗೋಲಿ ಮತ್ತು ಕಂಗನಾ ಹೆಚ್ಚು ಪ್ರಭಾವಶಾಲಿ, ಶಕ್ತಿಶಾಲಿ, ವಿಶ್ವದಾದ್ಯಂತ ಲಕ್ಷಾಂತರ ಅನುಯಾಯಿಗಳು ಹೊಂದಿದ್ದಾರೆ. ಉನ್ನತ ಮಟ್ಟದ ರಾಜಕೀಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ'' ಎಂದು ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    Recommended Video

    ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
    ಎಫ್‌ಐಆರ್ ದಾಖಲಿಸಲು ಸೂಚಿಸಿದ್ದ ಬಾಂದ್ರಾ ಕೋರ್ಟ್‌

    ಎಫ್‌ಐಆರ್ ದಾಖಲಿಸಲು ಸೂಚಿಸಿದ್ದ ಬಾಂದ್ರಾ ಕೋರ್ಟ್‌

    ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಮತ್ತು ರಂಗೋಲಿ ಇಬ್ಬರು ಸಮುದಾಯಗಳ ನಡುವೆ ಸಾಮರಸ್ಯ ಕದಡುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಬಾಂದ್ರಾ ಕೋರ್ಟ್ ಕಂಗನಾ ಮತ್ತು ಸಹೋದರಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿದೆ. ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಸಮನ್ಸ್ ಸಹ ನೀಡಿದ್ದಾರೆ. ಸಹೋರನ ಮದುವೆ ಕಾರಣ ಹೇಳಿ ಇನ್ನು ವಿಚಾರಣಗೆ ಹಾಜರಾಗಿಲ್ಲ.

    English summary
    Andheri's Metropolitan magistrate Bhagawat T Zirape has ordered Section 202 CrPC inquiry against Kangana and Rangoli.
    Friday, October 30, 2020, 11:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X