ಅಲೋಕ್ ನಾಥ್ ಮೇಲೆ ಮತ್ತೊಂದು ಬಾಂಬ್ : ಅತ್ಯಾಚಾರಕ್ಕೆ ಪ್ರಯತ್ನ ಎಂದು ನಟಿ ಆರೋಪ

ಕಳೆದ ಎರಡ್ಮೂರು ದಿನಗಳಿಂದ ಶುರುವಾಗಿರುವ Metoo ಅಭಿಮಾನಕ್ಕೆ ಈಗ ದೊಡ್ಡ ಬೆಂಬಲ ಸಿಕ್ಕಿದೆ. ಅನೇಕ ನಟಿಯರು ತಮ್ಮ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ.

Metoo ಅಭಿಯಾನದಲ್ಲಿ ಹೆಚ್ಚು ಕೇಳಿ ಬರುತ್ತಿರುವ ಹೆಸರು ಬಾಲಿವುಡ್ ನಟ ಅಲೋಕ್ ನಾಥ್ ಅವರದ್ದು. 62ನೇ ವಯಸ್ಸಿನಲ್ಲಿ ಈ ನಟ ತನ್ನ ಹೆಸರಿಗೆ ತಾನೇ ಮಸಿ ಬಳಿದುಕೊಳ್ಳುತ್ತಿದ್ದಾರೋ, ಅಥವಾ ಈ ಘಟನೆ ಆರೋಪ ಮಾತ್ರವೋ ಗೊತ್ತಿಲ್ಲ. ಆದರೆ, ಅಲೋಕ್ ನಾಥ್ ಹೆಸರು ದೊಡ್ಡ ಚರ್ಚೆ ಆಗುತ್ತಿದೆ.

ಈ ವಿಷಯ ಕೇಳಿ ಸುಧಾರಿಸಿಕೊಳ್ಳುವ ಮೊದಲೇ ಈಗ ಇನ್ನೊಬ್ಬ ನಟಿ ಅಲೋಕ್ ನಾಥ್ ವಿರುದ್ಧ ಧ್ವನಿ ಎತ್ತಿದ್ದಾರೆ. ಕುಡಿದ ಮತ್ತಿನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದ ಎಂದು ನಟಿ ಸಂಧ್ಯಾ ಮೃದುಲ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ವಿಸ್ತಾರವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಸಂಧ್ಯಾ ಮೃದುಲ್ ಗಂಭೀರ ಆರೋಪ

ಸಂಧ್ಯಾ ಮೃದುಲ್ ಗಂಭೀರ ಆರೋಪ

''ನನ್ನ ನಟನಾ ವೃತ್ತಿಯ ಆರಂಭದಲ್ಲಿ ಟೆಲಿಫಿಲ್ಮ್ ಗಾಗಿ ಕೊಡೈಕೆನಾಲ್ ನಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ನನ್ನ ತಂದೆ ಪಾತ್ರದಲ್ಲಿ ಅಲೋಕ್ ನಾಥ್ ಮತ್ತು ತಾಯಿಯ ಪಾತ್ರದಲ್ಲಿ ರೀಮಾ ಲಾಗು ಅವರು ಪಾತ್ರವಹಿಸಿದ್ದರು. ನನ್ನ ನಟನೆ ನೋಡಿ, ಹಾಡಿ ಹೊಗಳಿದ್ದೇ ಹೊಗಳಿದ್ದು. ನಾನು ನೆಲದ ಮೇಲೆಯೇ ಇರಲಿಲ್ಲ.''

ರೂಂನಲ್ಲಿದ್ದಾಗ ಬಾಗಿಲು ಬಡಿದು ಒಳಗೆ ನುಗ್ಗಿದರು

ರೂಂನಲ್ಲಿದ್ದಾಗ ಬಾಗಿಲು ಬಡಿದು ಒಳಗೆ ನುಗ್ಗಿದರು

''ಅಂಥ ಮಹಾನ್ ನಟರಿಂದ ಹೊಗಳಿಸಿಕೊಳ್ಳುವುದು ಸುಮ್ಮನೆಯಾ? ಒಂದು ಸಂಜೆ ಬೇಗನೆ ಶೂಟಿಂಗ್ ಮುಗಿದು ಪ್ಯಾಕಪ್ ಆದ ಮೇಲೆ, ಕಂಠಪೂರ್ತಿ ಕುಡಿದಿದ್ದ ಅಲೋಕ್, ತಮ್ಮ ಹತ್ತಿರ ಕೂರೆಂದು ದುಂಬಾಲು ಬಿದ್ದಿದ್ದರು. ಇದ್ಯಾಕೋ ಸರಿಯಿಲ್ಲ ಎಂದು ನನ್ನ ಸ್ನೇಹಿತೆ ನನ್ನನ್ನು ಆಚೆ ಕರೆದುಕೊಂಡು ಹೋದರು. ಊಟವೂ ಮಾಡದೆ ನಾನು ರೂಂನಲ್ಲಿದ್ದಾಗ ಬಾಗಿಲು ಬಡಿದ ಅಲೋಕ್ ಒಳನುಗ್ಗಲು ಯತ್ನಿಸಿದರು''.

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದರು

ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದರು

''ಬಾಗಿಲು ಮುಚ್ಚಲು ಯತ್ನಿಸಿ, ಆಗದೆ ಬಾಗಿಲು ತೆರೆದಾಗ ಅಲೋಕ್ ಧಪ್ಪನೆ ನೆಲದ ಮೇಲೆ ಬಿದ್ದರು. ಬಾತ್ ರೂಂ ಬಳಿ ಬಿದ್ದ ನನ್ನ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದರು. ಹೇಗೋ ಪರಾರಿಯಾದೆ. ಆತ ನಂತರ ನನ್ನ ಕ್ಷಮೆ ಕೇಳಿದರೂ ಮುಂಬೈಗೆ ಹೋದ ಮೇಲೆ ನಾನು ದುರಹಂಕಾರಿ ಇತ್ಯಾದಿಯಾಗಿ ಎಲ್ಲರ ಬಳಿ ಹೇಳಿ ಮಾನ ತೆಗೆದಿದ್ದರು.''

ಬಾಂಬ್ ಹಾಕಿದ ವಿನ್ತಾ ನಂದಾ

ಬಾಂಬ್ ಹಾಕಿದ ವಿನ್ತಾ ನಂದಾ

ಈ ಬಗ್ಗೆ ಮಾತನಾಡಿರುವ ವಿನ್ತಾ ನಂದಾ ''ಒಂದು ದಿನ ಆತನ ಮನೆಗೆ ಪಾರ್ಟಿಗಾಗಿ ಆಹ್ವಾನ ಬಂದಿತ್ತು. ಆ ದಿನ ಪಾರ್ಟಿ ಮುಗಿಸಿಕೊಂಡು ರಾತ್ರಿ 2 ಗಂಟೆಗೆ ಮನೆಗೆ ಹೋಗುತ್ತಿದೆ. ನನ್ನ ಡ್ರಿಕ್ಸ್ ನಲ್ಲಿ ಏನೋ ಮಿಕ್ಸ್ ಆಗಿತ್ತು ಅನಿಸುತ್ತದೆ. ಕುಡಿದ ಮತ್ತಿನಲ್ಲಿ ಅಲ್ಲಿ ಇರುವುದು ಬೇಡ ಎಂದು ನಡೆದುಕೊಂಡೆ ನನ್ನ ಮನೆಗೆ ಹೋಗುತ್ತಿದೆ. ದಾರಿಯ ಮಧ್ಯೆ ಕಾರಿನಲ್ಲಿ ಬಂದ ಆತ ಮನೆಗೆ ಬಿಡುವುದಾಗಿ ಹೇಳಿದ. ನಾನು ಅವನನ್ನು ನಂಬಿ ಕುಳಿತೆ. ಆ ನಂತರ ನನಗೆ ಏನಾಯಿತು ಎನ್ನುವುದು ನೆನಪಿಗೆ ಬರಲಿಲ್ಲ. ಮರು ದಿನ ಮಧ್ಯಾಹ್ನ ಏಳುವಾಗ ನೋವಾಗುತ್ತಿತ್ತು. ಹಾಸಿಗೆಯಿಂದ ಮೇಲೆ ಬರಲು ಸಾಧ್ಯ ಆಗಲಿಲ್ಲ.'' ಎಂದು ಘಟನೆಯನ್ನ ವಿವರಿಸಿದರು.

More from Filmibeat

English summary
Me too : Bolllywood actress Andhya Mridul has accused actor Alok Nath for sexual harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X