ಕೇರ್ ಆಫ್ ಪುಟಪಾತ್ ನಾಯಕಿ ಜೊತೆ ಥಕ ಥೈ ಕುಣಿದ ಆಂಡ್ರೆ ರಸೆಲ್ ...!
ಭಾರತದ ಮಟ್ಟಿಗೆ ಕ್ರಿಕೆಟ್ ಅನ್ನೋದು ಎಂಟರ್ ಟೈನ್ಮೆಂಟ್ ಆಗಿ ಉಳಿದಿಲ್ಲ.. ಅದು ಪಕ್ಕಾ ಬ್ಯುಸಿನೆಸ್ ಆಗಿಬಿಟ್ಟಿದೆ. ಇದಕ್ಕೆ ಐಪಿಎಲ್ ಅತ್ಯುತ್ತಮ ಉದಾಹರಣೆ.
ದೇಶ-ವಿದೇಶದ ಪ್ಲೇಯರ್ಸ್‌ಗಳನ್ನೊಳಗೊಂಡ ಈ ಟೂರ್ನಾಮೆಂಟ್ ನಲ್ಲಿ ಮೊದಲಿಂದ ವೆಸ್ಟ್ ಇಂಡೀಸ್‌ನ ಆಟಗಾರರು ಆಯಸ್ಕಾಂತದಂತೆ ಎಲ್ಲರನ್ನೂ ಸೆಳಿಯುತ್ತಾನೇ ಬಂದಿದ್ದಾರೆ. ಯಾಕೆಂದರೆ ಇವರು ದೈತ್ಯರಷ್ಟೇ ಅಲ್ಲ ಎಲ್ಲದರಲ್ಲಿ ಕೂಡ ಇವರು ಮುಂದು. ಕ್ರಿಕೆಟ್ ಜೊತೆ ಜೊತೆಯಲ್ಲಿ ಹಾಡು-ಕುಣಿತ-ಮೋಜು-ಮಸ್ತಿ ಇವರ ಬದುಕಿನ ಬಹುದೊಡ್ಡ ಭಾಗವಾಗಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಇನ್ನೊಂದು ಉದಾಹರಣೆ ಲಡ್ಕಿ ತು ಕಮಾಲ್ ಕಿ ಹಾಡು

ಹೌದು, ಕೆರಿಬಿಯನ್ ಕ್ರಿಕೆಟ್ ಲೋಕದ ರಣಬೇಟೆಗಾರ ಆಂಡ್ರೆ ರೆಸಲ್, ಕ್ರಿಕೆಟ್ ಮೈದಾನದಲ್ಲಿ ಅಷ್ಟೇ ಅಲ್ಲ.. ಮೈದಾನದಾಚೆ ಕೂಡ ನಾನು ಕುಣಿಯುವುದರಲ್ಲಿ ಕೂಡ ನಾನು ಪಂಟರ್ ಅನ್ನುವುದನ್ನ ಸಾಬೀತು ಮಾಡಿದ್ದಾರೆ. ಬಾಲಿವುಡ್ ಹಾಡೊಂದಕ್ಕೆ ಥಕ ಥೈ ಕುಣಿದಿದ್ದಾರೆ. ಇಷ್ಟೇ ಅಲ್ಲ ಹೆಜ್ಜೆ ಹಾಕುವುದರ ಜೊತೆ ಹಾಡಿಗಾಗಿ ತಮ್ಮ ಚಿನ್ನದಂತಹ ಕಂಠವನ್ನ ಕುಣಿಸಿದ್ದಾರೆ ಆಂಡ್ರೆ ರೆಸಲ್
ಇನ್ನೂ.. ಆಂಡ್ರೆ ರೆಸಲ್ ಅವರ ಜೊತೆ ಇಲ್ಲಿ ಅವಿಕಾ ಗೌರ್ ಹೆಜ್ಜೆ ಹಾಕಿದ್ದಾರೆ. ಬೆಸಿಕಲಿ ಮುಂಬೈದವರಾದ ಅವಿಕಾ, ಒಂದ್ಕಾಲದಲ್ಲಿ ಕನ್ನಡದಲ್ಲಿ ಕೂಡ ಆಕ್ಟ್ ಮಾಡಿದ್ದರು. ಮಾಸ್ಟರ್ ಕಿಶನ್ ಯಾನೆ ಕಿಶನ್ ಶ್ರೀಕಾಂತ್ ನಿರ್ದೇಶನದಲ್ಲಿ ಒಂದು ದಶಕದ ಹಿಂದೆ ಬಂದ ಕೇರ್ ಆಫ್ ಪುಟಪಾತ್ 2 ಚಿತ್ರದಲ್ಲಿ ಆಕ್ಟ್ ಮಾಡಿದ್ದರು ಅನ್ನುವುದು ನಿಮಗೆ ಗೊತ್ತಿರಲಿ.

ಆಂಡ್ರೆ ರೆಸಲ್ ಅವರ ಈ ಲುಂಗಿ ಡ್ಯಾನ್ಸ್ ಜೊತೆ ಅವಿಕಾ ಅವರ ಅತ್ಯಾಕರ್ಷಕ ನೀಲಿ ಸೀರೆ ಸದ್ಯಕ್ಕೆ ಅನೇಕರ ಕಣ್ಮನೆ ಸೆಳೆಯುತ್ತಿದೆ. ಯುಟ್ಯೂಬ್ ನಲ್ಲಿ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೂ ಪಲಾಸ್ ಮುಚ್ಚಲ್ ಸಂಗೀತ-ಸಾಹಿತ್ಯ ಮತ್ತು ನಿರ್ದೇಶನ ಇರುವ ಈ ಹಾಡನ್ನ ಪಲಾಸ್ ಅವರ ಸಹೋದರಿ ಮತ್ತು ಖ್ಯಾತ ಗಾಯಕಿ ಪಾಲಕ್ ಮುಚ್ಚಲ್ ಹಾಡಿದ್ದಾರೆ. ಪವನ್ ಮತ್ತು ಬಾಬ್ ಈ ಹಾಡಿನ ಕೊರಿಯೋಗ್ರಾಫರ್ಸ್
ಉಳಿದಂತೆ ಆಂಡ್ರೆ ರೆಸಲ್ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ನಿಮ್ಮ ಬಾಯಲ್ಲಿ ಹಿಂದಿ ಭಾಷೆ ಕೇಳಿ ಜನ್ಮ ಪಾವನವಾಯಿತು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಇನ್ನೂ ಅನಿಕಾ ಗೋರ್ ಅವರ ವೃತ್ತಿ ಬದುಕಿಗೆ ಈ ಹಾಡು ಮಹತ್ತರವಾದ ತಿರುವು ನೀಡುವ ಸಾಧ್ಯತೆ ಇದೆ. ಯಾಕೆಂದರೆ 2009ರಿಂದ ಇಲ್ಲಿಯವರೆಗೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು, ಯಾವ ಚಿತ್ರವೂ ತಂದು ಕೊಡದ ಜನಪ್ರಿಯತೆ ಇದೊಂದೇ ಹಾಡು ಅನಿಕಾಗೆ ತಂದು ಕೊಡುತ್ತಿದೆ. ಅನಿಕಾ ಅವರ ಅಂದ-ಚೆಂದ ಮತ್ತು ವಯ್ಯಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಬಳಗ ಕೂಡ ಸೃಷ್ಟಿಯಾಗುತ್ತಿದೆ.
ಒಟ್ನಲ್ಲಿ ಸದ್ಯಕ್ಕೆ ಲಡ್ಕಿ ತು ಕಮಾಲ್ ಕಿ ಹಾಡು ಭಾಷೆಯ ಭೇದವಿಲ್ಲದೇ ಎಲ್ಲರನ್ನೂ ಸೆಳೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಆಂಡ್ರೆ ರಸೆಲ್ ಅವರ ಈ ಡ್ಯಾನ್ಸ್ ಸ್ಟೆಪ್‌ಗಳನ್ನ ನೋಡಿ ಏನಂತಾರೆ ಅನ್ನುವುದು ಸದ್ಯದ ಕುತೂಹಲ.


Click it and Unblock the Notifications











