ಮುದ್ದು ಮಗಳಿಗೆ ನಟಿ ನೇಹಾ ಧೂಪಿಯಾ ಏನಂತ ಹೆಸರಿಟ್ಟಿದ್ದಾರೆ.?

ನವೆಂಬರ್ 18, 2018 (ಭಾನುವಾರ) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ನಟಿ ನೇಹಾ ಧೂಪಿಯಾ ಜನ್ಮ ನೀಡಿದರು. ಮೊದಲ ಮಗುವನ್ನು ಬರಮಾಡಿಕೊಂಡ ನಟ ಅಂಗದ್ ಬೇಡಿ ಮೊಗದಲ್ಲಿ ಮಂದಹಾಸ ಮೂಡಿದೆ.

ತಮ್ಮ ಪುತ್ರಿಗೆ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ 'ಮೆಹರ್ ಧೂಪಿಯಾ ಬೇಡಿ' ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ನೇಹಾ ಧೂಪಿಯಾ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ನೇಹಾ ಧೂಪಿಯಾ ಮತ್ತು ಅಂಗಡ್ ಬೇಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೇ ವರ್ಷದ ಮೇ ತಿಂಗಳಲ್ಲಿ. ದಿಢೀರ್ ಅಂತ ಈ ಜೋಡಿ ಮದುವೆ ಆಗಿದ್ದರಿಂದ ಹಲವಾರು ಗಾಸಿಪ್ ಗಳು ಹರಿದಾಡಿದವು. ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆದ ಕಾರಣ ಆತುರಾತುರವಾಗಿ ಮದುವೆ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂತು.

Angad Bedi and Neha Dhupia name their daughter Mehr

ಇದಕ್ಕೆ ಪುಷ್ಟಿ ನೀಡುವಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಆರು ತಿಂಗಳಲ್ಲೇ ಹೆಣ್ಣು ಮಗುವಿಗೆ ನೇಹಾ ಧೂಪಿಯಾ ತಾಯಿ ಆಗಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಪ್ರೀತಿಸಿ ಮದುವೆ ಆದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಸಂಸಾರ ಖುಷಿ ಖುಷಿಯಾಗಿ ಸಾಗುತ್ತಿದೆ.

More from Filmibeat

English summary
Angad Bedi and Neha Dhupia name their daughter Mehr.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X