ಶ್ರೀದೇವಿಯ ಸಾವಿನ ಬಳಿಕ ಕೋಪಗೊಂಡ ರಿಷಿ ಕಪೂರ್.!

By Bharath Kumar

ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ಇನ್ನಿಲ್ಲ ಎಂಬುದನ್ನ ಇನ್ನು ಕೆಲವು ಅಭಿಮಾನಿಗಳು ನಂಬುತ್ತಿಲ್ಲ. ಇದು ಸುಳ್ಳಾಗಿರಬಾರದೇ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡವರು ಇದ್ದಾರೆ. ಆದ್ರೆ, ವಿಧಿಯ ಆಟದ ಮುಂದೆ ಇದ್ಯಾವುದು ನಡೆಯಲ್ಲ ಅನ್ಸುತ್ತೆ. ಯಾಕಂದ್ರೆ, ಶ್ರೀದೇವಿ ಬಾರದ ಲೋಕಕ್ಕೆ ಹೋಗಿದ್ದಾಗಿದೆ. ಇನ್ನೇನಿದ್ರು ದೇವಕನ್ಯೆಯಂತಿದ್ದ ನಟಿ ನೆನಪು ಮಾತ್ರ.

ದುಬೈನಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ಶ್ರೀದೇವಿ ಹೃದಯಾಘಾತದಿಂದ ನಿಧನರಾಗಿದ್ದರು. ಈಗ ಶ್ರೀದೇವಿಯ ಪಾರ್ಥೀವ ಶರೀರವನ್ನ ಮುಂಬೈಗೆ ತರಲಾಗುತ್ತಿದೆ. ಇದಕ್ಕಾಗಿ ಅನಿಲ್ ಅಂಬಾನಿ ವಿಶೇಷವಾದ ಜೆಟ್ ವ್ಯವಸ್ಥೆ ಮಾಡಿದ್ದಾರೆ. ಇದರ ಮೂಲಕ ಶ್ರೀದೇವಿಯ ದೇಹವನ್ನ ರವಾನಿಸಲಾಗುತ್ತಿದೆ.

ಬಾಲಿವುಡ್ ಸೇರಿದಂತೆ ಇಡೀ ಚಿತ್ರೋಧ್ಯಮ ಶ್ರೀದೇವಿಯ ಸಾವಿಗೆ ಮರುಗುತ್ತಿದೆ. ಈ ಮಧ್ಯೆ ಶ್ರೀದೇವಿಯ ಸಹನಟ ರಿಷಿ ಕಪೂರ್ ಕೋಪಗೊಂಡಿದ್ದಾರೆ. ತನ್ನ ಗೆಳತಿಯನ್ನ ಕಳೆದುಕೊಂಡ ನೋವಿನಲ್ಲಿರುವ ರಿಷಿ ಕಪೂರ್, ಮಾಧ್ಯಮಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ? ಮುಂದೆ ಓದಿ.....

'ಪಾರ್ಥಿವ ಶರೀರ' ಎಂದಿದ್ದಕ್ಕೆ ಆಕ್ರೋಶ

ಬಾಲಿವುಡ್ ನಟಿ ಶ್ರೀದೇವಿ ಅವರನ್ನ 'ಪಾರ್ಥಿವ ಶರೀರ' ಎಂದಿದ್ದಕ್ಕೆ ನಟ ರಿಷಿ ಕಪೂರ್ ಮಾಧ್ಯಮಗಳನ್ನ ವಿರುದ್ಧ ಹರಿಹಾಯ್ದಿದ್ದಾರೆ. ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ನೋವನ್ನ ಹೊರಹಾಕಿದ್ದಾರೆ.

ಶ್ರೀದೇವಿ ಪ್ರತಿಭೆಗೆ ಕೊಡುವ ಬೆಲೆ ಇದೆನಾ.?

''ಶ್ರೀದೇವಿ ಇದ್ದಕ್ಕಿದ್ದಂತೆ 'ಪಾರ್ಥಿವ ಶರೀರ'ವಾಗಿಬಿಟ್ಟಿದ್ದು ಹೇಗೆ? ಎಲ್ಲ ಟಿವಿ ಚಾನೆಲ್ ಗಳೂ, 'ಶ್ರೀದೇವಿ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗುತ್ತಿದೆ' ಎನ್ನುತ್ತಿವೆ. ಶ್ರೀದೇವಿ ಎಂಬ ದೈತ್ಯ ಪ್ರತಿಭೆ, ಇದ್ದಕ್ಕಿದ್ದಂತೆ ಕೇವಲ 'ದೇಹ' ವಷ್ಟೇ ಎಂದುಕೊಂಡರೆ ಅದು ಸರಿಯೇ? ಎಂದು ಅವರು ಭಾವುಕರಾಗಿ ಪ್ರಶ್ನಿಸಿದ್ದಾರೆ.

ಇನ್ಮುಂದೆ ಬೆಳದಿಂಗಳಿರುವುದಿಲ್ಲ

ಇನ್ಮುಂದೆ ಬೆಳದಿಂಗಳಿರುವುದಿಲ್ಲ

''ಇನ್ನು ಮೇಲೆ ರಾತ್ರಿ ಆಕಾಶದಲ್ಲಿ ಬೆಳದಿಂಗಳಿರೋಲ್ಲ... ಯಾಕಂದ್ರೆ ಚಾಂದಿನಿ ನಮ್ಮನ್ನೆಲ್ಲ ಬಿಟ್ಟು ಹಿಂತಿರುಗಿ ಬರಲಾರದ ಲೋಕಕ್ಕೆ ಹೋಗಿದ್ದಾರೆ'' ಎಂದು ಸಹ ರಿಷಿ ಕಪೂರ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.

ರಿಷಿ ಕಪೂರ್ ಮತ್ತು ಶ್ರೀದೇವಿ

ರಿಷಿ ಕಪೂರ್ ಮತ್ತು ಶ್ರೀದೇವಿ

ರಿಷಿ ಕಪೂರ್ ಅವರು ಶ್ರೀದೇವಿಯೊಂದಿಗೆ 'ಚಾಂದಿನಿ', 'ನಾಗಿನ', 'ಗುರುದೇವ್', 'ಬಂಜರನ್', 'ಕೌನ್ ಸಚ್ಚಾ', 'ಕೌನ್ ಜೂಟಾ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

More from Filmibeat

English summary
The media coverage of actress Sridevi's death has provoked a furious tweet from her Chandni co-star Rishi Kapoor who has objected to the late star's remains being referred to as the 'body.' Sridevi, just 54, died suddenly in Dubai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X