Animal: ಅನಿಮಲ್ ಸಿನಿಮಾಗಾಗಿ ಅರ್ಧ ಸಂಭಾವನೆ ಪಡೆದ ರಣಬೀರ್ ಕಪೂರ್... ಕಾರಣವೇನು?

ಬಾಲಿವುಡ್‌ನಲ್ಲಿ ನಟರ ಸಂಭಾವನೆ ಸಿನಿಮಾದ ಅರ್ಧ ಬಜೆಟ್‌ನಷ್ಟಿರುತ್ತದೆ. ಇದು ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಿಗೂ ವ್ಯಾಪಿಸುತ್ತಿದೆ. ಆದರೆ, ಸಿನಿಮಾದ ಪ್ರಮುಖ ನಟರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿದರೆ ಅಥವಾ ಅರ್ಧಕ್ಕೆ ಇಳಿಸಿಕೊಂಡರೆ ನಿರ್ಮಾಪರಿಗಷ್ಟೇಯಲ್ಲ ಸಿನಿಮಾ ಕ್ವಾಲಿಟಿಗೂ ಸಹಾಯವಾಗುತ್ತದೆ.

ಈಗ ಯಾಕೆ ಈ ವಿಷಯವೆಂದರೆ, ಇತ್ತೀಚೆಗಷ್ಟೇ ನಟ ರಣಬೀರ್ ಕಪೂರ್ ಅವರ ಜನ್ಮದಿನದಂದು ಅವರ ಬಹುನಿರೀಕ್ಷಿತ ಅನಿಮಲ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಟನ ಮಾಸ್ ಲುಕ್ ಜನರಿಗೆ ಇಷ್ಟವಾಗಿದೆ. ಟೀಸರ್ ನೋಡಿದರೇ ಅದರ ರಿಚ್‌ನೆಸ್ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ನಾಯಕ ನಟ ರಣಬೀರ್ ಕಪೂರ್ ಎಂದರೆ ತಪ್ಪಾಗದು!

Animal: Actor Ranbir Kapoor reduced his acting fees by half

ಅರ್ಧ ಸಂಭಾವನೆ ಪಡೆದ ನಟ ರಣಬೀರ್ ಕಪೂರ್!?

ಹೌದು...ಇತ್ತೀಚೆಗೆ ಹೊರಬಿದ್ದ ರಣಬೀರ್ ಕಪೂರ್ ಅವರ ಅನಿಮಲ್ ಟೀಸರ್ ಸಿನಿಪ್ರೇಕ್ಷಕರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿತ್ತು. ವರದಿಯ ಪ್ರಕಾರ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಆಲೋಚನೆಗೆ ತಕ್ಕಂತೆ ಸಿನಿಮಾ ಮಾಡಲು ಮತ್ತು ಪೋಸ್ಟ್-ಪ್ರೊಡಕ್ಷನ್‌ನಲ್ಲಿನ ವಿಳಂಬದಿಂದಾಗಿ, ಚಿತ್ರದ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಿಂಕ್ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

ಇದೆ ಕಾರಣಕ್ಕೆ ಚಿತ್ರದ ನಿರ್ಮಾಣ ಗುಣಮಟ್ಟವನ್ನು ಸುಧಾರಿಸಲು ನಟ ರಣಬೀರ್ ಕಪೂರ್ ಅನಿಮಲ್ ಚಿತ್ರದ ನಟನೆಯ ಶುಲ್ಕವನ್ನು ಕಡಿಮೆ ಮಾಡಿದ್ದಾರೆ ಎಂದು ವರದಿಯಾಗಿದೆ. 70 ಕೋಟಿ ತೆಗೆದುಕೊಳ್ಳುವ ಅವರು ಈ ಸಿನಿಮಾಗಾಗಿ ಕೇವಲ 30 ರಿಂದ 35 ಕೋಟಿ ಪಡೆಯುತ್ತಿದ್ದಾರೆ ಎಂದು ವರದಿಗಳು ಬಂದಿವೆ.

ಶುಲ್ಕ ಕಡಿಮೆ ಮಾಡಿ ಲಾಭದ ಮೇಲೆ ಕಣ್ಣಿಟ್ಟ ರಣಬೀರ್!

ಪಿಂಕ್ವಿಲ್ಲಾ ಪೋರ್ಟಲ್ ಪ್ರಕಾರ, ರಣಬೀರ್ ಕಪೂರ್ ತಮ್ಮ ಪ್ರತಿ ಚಿತ್ರಕ್ಕೂ ಸದ್ಯಕ್ಕೆ ಸುಮಾರು 70 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಅನಿಮಲ್ ಸಿನಿಮಾಕ್ಕಾಗಿ ನಿರ್ಮಾಪಲ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರನ್ನು ಬೆಂಬಲಿಸಲು, ರಣಬೀರ್ ತಮ್ಮ ನಟನಾ ಶುಲ್ಕವನ್ನು ಶೇಕಡಾ 50 ಕ್ಕಿಂತ ಹೆಚ್ಚು ಕಡಿತ ಮಾಡಿದ್ದಾರೆ ಎಂದು ವರದಿಯಾಗಿದೆ.

Animal: Actor Ranbir Kapoor reduced his acting fees by half

ಈ ಸಿನಿಮಾಗೆ ರಣಬೀರ್ ಕಪೂರ್ ಮುಂಗಡ ಶುಲ್ಕ 30 ರಿಂದ 35 ಕೋಟಿ ತೆಗೆದುಕೊಳ್ಳುತ್ತಿದ್ದಾರೆ. ಇವರು ಕಡಿಮೆ ಹಣ ಪಡೆದ ಕಾರಣ ಉಳಿದ ಮೊತ್ತವನ್ನು 'ನಿರ್ಮಾಣ ಮೌಲ್ಯವನ್ನು ಸುಧಾರಿಸಲು ಖರ್ಚು ಮಾಡಲಾಗಿದೆ' ಎಂದು ವರದಿಯಾಗಿದೆ. ಆದರೆ, ನಟ ರಣಬೀರ್ ಕಪೂರ್ ಸಿನಿಮಾದ ಲಾಭದಲ್ಲಿ ಪಾಲು ಹೊಂದಿರುತ್ತಾರೆ. ಚಿತ್ರಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡರೇ ತಮ್ಮ ಸಂಭಾವನೆ ಪೂರ್ಣವಾಗಿ ರಣಬೀರ್ ಪಾಲಾಗಬಹುದು. ಇಲ್ಲ ಅದಕ್ಕಿಂತ ಹೆಚ್ಚು ಗಳಿಸಬಹುದು.

ಅನಿಮಲ್ ಸಿನಿಮಾ

ರಣಬೀರ್ ಕಪೂರ್ ಹುಟ್ಟುಹಬ್ಬದಂದು, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಅನಿಮಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ.

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮಕ್ಕಳ ಬಗ್ಗೆ ಮಾತನಾಡುವುದರೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಇಲ್ಲಿ ಆತನಿಗೆ ತಂದೆಯ ಬಗ್ಗೆ ಯಾವುದೇ ಮಾತನಾಡಲು ಇಷ್ಟವಿಲ್ಲದ ಬಗ್ಗೆ, ಜೊತೆಗ ಗೌರವದ ಬಗ್ಗೆ ತಿಳಿಯಬಹುದು. ಆದರೆ, ವಿಡಿಯೋದಲ್ಲಿ ರಣಬೀರ್ ಮತ್ತು ಆತನ ತಂದೆ ಅನಿಲ್ ಕಪೂರ್ ಜೊತೆಗಿನ ಸಂಬಂಧ ತುಂಬಾ ಕೆಟ್ಟದಾಗಿದೆ ಎಂದು ತೋರಿಸುತ್ತದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಎಂಬ ಐದು ಭಾಷೆಗಳಲ್ಲಿ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

More from Filmibeat

English summary
Animal: Actor Ranbir Kapoor reduced his acting fees by half
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X