"ಅವತ್ತು ರಾತ್ರಿ ಆತ ಮನೆಗೆ ಕರೆದಿದ್ದ"; ಕಾಸ್ಟಿಂಗ್ ಕೌಚ್ ಕಹಿ ಅನುಭವ ಬಿಚ್ಚಿಟ್ಟ 'ಅನಿಮಲ್' ನಟ
ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ಸಾಕಷ್ಟು ನಟ-ನಟಿಯರು ಮಾತನಾಡಿದ್ದಾರೆ. ಇನ್ನು ಕೆಲವರು ಮಾತನಾಡಲು ಹೆದರುತ್ತಿದ್ದಾರೆ. ಅವಕಾಶ ಕೊಡುವುದಾಗಿ ಹೇಳಿ ಮಂಚಕ್ಕೆ ಕರೆಯುವ ಕಾಮುಕರು ಚಿತ್ರರಂಗದಲ್ಲಿ ಇದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಮೀಟು ಅಭಿಯಾನದ ಬಳಿಕ ಸಾಕಷ್ಟು ನಟಿಯರು ಇಂಡಸ್ಟ್ರಿಯಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮೌನ ಮುರಿದಿದ್ದಾರೆ. ನಟಿಯರಿಗೆ ಮಾತ್ರವಲ್ಲ ಕೆಲವೊಮ್ಮೆ ನಟರಿಗೂ ಇಂತಹ ಸಂದರ್ಭಗಳು ಎದುರಾಗಿದ್ದು ಇದೆ. ಆದರೆ ನಟಿಯರ ಸಂಖ್ಯೆ ದೊಡ್ಡದಿದೆ. ಆದರೆ ಆಗೊಮ್ಮೆ ಹೀಗೊಮ್ಮೆ ಕೆಲ ನಟರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದೀಗ ಬಾಲಿವುಡ್ ನಟ ಸಿದ್ಧಾಂತ್ ಕಾರ್ಣಿಕ್ ಮೌನ ಮುರಿದಿದ್ದಾರೆ.

ಚಿತ್ರರಂಗದಲ್ಲಿ ಬಂದ ಆರಂಭದಲ್ಲಿ ತಮಗೂ ಇಂತಹ ಕಹಿ ಅನುಭವ ಆಗಿತ್ತು. ಒಮ್ಮೆ ಅವಕಾಶ ಕೇಳಿಕೊಂಡು ಹೋದಾಗ ಕೊಆರ್ಡಿನೇಟರ್ ತನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡಿದ್ದ, ಆತನ ವರ್ತನೆಯಿಂದಲೇ ನನಗೆ ಎಲ್ಲಾ ಅರ್ಥವಾಗಿ ಅಲ್ಲಿಂದ ಹೊರಟುಬಂದುಬಿಟ್ಟೆ ಎಂದಿದ್ದಾರೆ. 'ಅನಿಮಲ್' ಹಾಗೂ 'ಆದಿಪುರುಷ್' ಸೇರಿದಂತೆ ಹಲವು ಸಿನಿಮಾ ವೆಬ್ ಸೀರಿಸ್‌ನಲ್ಲಿ ಸಿದ್ಧಾಂತ್ ಕಾರ್ಣಿಕ್ ನಟಿಸಿದ್ದಾರೆ.
ಸಿದ್ಧಾಂತ್ ಮಾತನಾಡಿ "ಇಂತಹ ಸನ್ನಿವೇಶಗಳೇ ನಾನು ಉತ್ತಮವಾಗಿ ರೂಪುಗೊಳ್ಳಲು ಸಹಕಾರಿ ಆಯಿತು. 2005 ರಲ್ಲಿ, ಕೇವಲ 22 ನೇ ವಯಸ್ಸಿನಲ್ಲಿ, ನಾನು ಇಂಡಸ್ಟ್ರಿಗೆ ಬಂದೆ. ನನ್ನ ಪೋರ್ಟ್‌ಪೋಲಿಯೊವನ್ನು ಕೇಳಿದ ಕೊಆರ್ಡಿನೇಟರ್ ನಾನು ಭೇಟಿಯಾಗಿದ್ದೆ. ನಂತರ ರಾತ್ರಿ 10:30 ಕ್ಕೆ ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದ. ಇದು ವಿಚಿತ್ರವೆನಿಸಿತು, ಆದರೂ ನಾನು ಹೋಗಿದ್ದೆ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

"ಆ ಮನೆಯಲ್ಲಿ ಸುತ್ತಲೂ ಅವರ ಫ್ಯಾಮಿಲಿ ಫೋಟೊಗಳು ಇದ್ದವು. ಅದು ಸುರಕ್ಷಿತ ವಾತಾವರಣದಂತೆ ಕಾಣಿಸಿತು. ಆದರೆ ಏನೋ ಸರಿಯಿಲ್ಲ ಎನಿಸುತ್ತಿತ್ತು. ಕೊಆರ್ಡಿನೇಟರ್ ಇಂಡಷ್ಟ್ರಿ ಮಾನದಂಡಗಳ ಚರ್ಚಿಸಿದ. ಅವಕಾಶಗಳಿಗಾಗಿ ರಾಜಿ ಮಾಡಿಕೊಳ್ಳುವ ಬಗ್ಗೆ ಸೂಕ್ಷ್ಮವಾಗಿ ಸುಳಿವು ನೀಡಿದ. ನನಗೆ ಅಷ್ಟರಲ್ಲೇ ಅರ್ಥವಾಗಿ ಹೋಗಿತ್ತು"
"ಆ ಸಮಯದಲ್ಲಿ ನಾನು ತುಂಬಾ ಚಿಕ್ಕವನಾಗಿದ್ದೆ. ಸುತ್ತಾ ಫ್ಯಾಮಿಲಿ ಫೋಟೊಗಳು ಇತ್ತು. ಹಾಗಾಗಿ ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಆದರೆ ನಂತರ, ಈ ವ್ಯಕ್ತಿ ನನ್ನ ಹತ್ತಿರ ಬಂದ. ಆದರೆ ಇದ್ದಕ್ಕಿದಂತೆ ಆ ವ್ಯಕ್ತಿ ನನ್ನ ಬಳಿಗೆ ಬಂದ. ಕೂಡಲೇ ಇದರಲ್ಲಿ ನನಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಿದಾಗ, ಇದೆಲ್ಲಾ ಬೇಡ ಎಂದು ಹೇಳಿ ಬಂದೆ" ಎಂದಿದ್ದಾರೆ. ಬಳಿಕ ಕಾರ್ಯಕ್ರಮದಲ್ಲಿ ಒಮ್ಮೆ ಆ ವ್ಯಕ್ತಿ ನನ್ನನ್ನು ಭೇಟಿ ಮಾಡಿ ಅಭಿನಂದಿಸಿದ್ದ" ಎಂದು ಸಿದ್ದಾಂತ್ ವಿವರಿಸಿದ್ದಾರೆ.
ಅನಿಲ್ ಚಿತ್ರದಲ್ಲಿ ನಾಯಕ ರಣ್‌ವಿಜಯ್ ಭಾವನ ಪಾತ್ರದಲ್ಲಿ ಸಿದ್ದಾಂತ್ ನಟಿಸಿದ್ದರು. 'ಆದಿಪುರುಷ್' ರಾವಣನ ಸಹೋದರ ವಿಭೀಷಣ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.


Click it and Unblock the Notifications










