ತೀವ್ರ ಟೀಕೆ ಮಧ್ಯೆಯೂ 700 ಕೋಟಿ ಕ್ಲಬ್ ಸೇರಿದ ರಣಬೀರ್ ಕಪೂರ್- ರಶ್ಮಿಕಾ ಅಭಿನಯದ 'ಅನಿಮಲ್'!

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಅನಿಮಲ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿನ ಹಿಂಸೆ, ರಕ್ತಪಾತ ಮತ್ತು ಮಹಿಳೆಯರನ್ನು ಕಡೆಗಣಿಸಿರುವ ರೀತಿಗೆ ಟೀಕೆ ಕೇಳಿಬರುತ್ತಿದೆ. ಇದರ ನಡುವೆಯೂ ಡಿಸೆಂಬರ್ 1 ರಂದು ಬಿಡುಗಡೆಯಾದ ನಂತರದಿಂದ ಸಿನಿಮಾವು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

10 ನೇ ದಿನ ವಿಶ್ವದಾದ್ಯಂತ ಅನಿಮಲ್ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡುವುದಾದರೇ ಈಗಾಗಲೇ ಸಿನಿಮಾ 700 ಕೋಟಿ ಕ್ಲಬ್ ಸೇರಿದೆ. ಸಿನಿಮಾ ನಿರ್ಮಾಪಕರು ಹಂಚಿಕೊಂಡ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಚಿತ್ರಮಂದಿರಗಳಲ್ಲಿ 10 ದಿನಗಳ ನಂತರ, ಅನಿಮಲ್ ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 700 ಕೋಟಿಗೂ ಹೆಚ್ಚು ಗಳಿಸಿದೆ. ಈ ಮೂಲಕ ಸನ್ನಿ ಡಿಯೋಲ್ ಅವರ ಗದರ್ ಭಾಗ ಎರಡರ ದಾಖಲೆಯನ್ನು ಮುರಿದಿದೆ.

Animal box office collection: Ranbir Kapoor-starrer Animal joins rs 700 crore club

700 ಕೋಟಿಗೂ ಅಧಿಕ ಹಣ ಗಳಿಸಿದ ಅನಿಮಲ್, ಗದರ್ 2 ದಾಖಲೆ ಪುಡಿಪುಡಿ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಸಿನಿಮಾ ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ 717.46 ಕೋಟಿ ರೂಪಾಯಿ ಗಳಿಸಿದೆ. ಅನಿಮಲ್ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ 660.89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾಗೆ ಭಾರೀ ಟೀಕೆ ನಡುವೆಯೂ ಹಲವರು ಮೆಚ್ಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್, ತೃಪ್ರಿ ದಿಮ್ರಿ ಅವರನ್ನೂ ಒಳಗೊಂಡಿರುವ ರಣಬೀರ್ ಕಪೂರ್ ಚಲನಚಿತ್ರವು ಸ್ತ್ರೀದ್ವೇಷ ಮತ್ತು ಟಾಕ್ಸಿಕ್ ಮಸ್ಕ್ಯೂಲಾರಿಟಿಯನ್ನು ಉತ್ತೇಜಿಸುತ್ತಿದೆ ಎಂದು ಈಗಾಗಲೇ ಹಲವು ಮಂದಿ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಲಾಗುತ್ತಿದೆ.

ಟಾಕ್ಸಿಕ್ ಪಾತ್ರಗಳು ಮತ್ತು ಲಾಜಿಕ್ ಇಲ್ಲದ ದೃಶ್ಯಗಳಿಗಾಗಿ ಹಿನ್ನಡೆ ಎದುರಿಸುತ್ತಿದ್ದರೂ ಕೂಡ, ಈ ಸಿನಿಮಾ 2023 ರಲ್ಲಿ ಟಾಪ್ 5 ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ನಟ ಶಾರುಖ್ ಖಾನ್ ಅವರ ಜವಾನ್ ಮತ್ತು ಪಠಾನ್ ಜೊತೆಗೆ ಸನ್ನಿ ಡಿಯೋಲ್ ಅವರ ಗದರ್ 2 ಮತ್ತು ರಜನಿಕಾಂತ್ ಅವರ ಜೈಲರ್ ಕೂಡ ಈ ಪಟ್ಟಿಯಲ್ಲಿವೆ.

ಅನಿಮಲ್ ಈಗ ಈ ವರ್ಷ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಭಾರತೀಯ ಚಲನಚಿತ್ರವಾಗಿದೆ. Sacnilk.com ವರದಿಯ ಪ್ರಕಾರ, ಆಗಸ್ಟ್ 11 ರಂದು ಬಿಡುಗಡೆಯಾದ ಸನ್ನಿ ಡಿಯೋಲ್ ಅಭಿನಯದ ಗದರ್ 2 ವಿಶ್ವಾದ್ಯಂತ 686 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

Animal box office collection: Ranbir Kapoor-starrer Animal joins rs 700 crore club

ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ಅಡಿಯಲ್ಲಿ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರು ಅನಿಮಲ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸಿನಿಮಾ ವಿಕ್ಕಿ ಕೌಶಲ್‌ ಅವರ 'ಸ್ಯಾಮ್ ಬಹದ್ದೂರ್‌' ಸಿನಿಮಾ ಜೊತೆಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.

ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿರುವ ಅನಿಮಲ್ ತಂದೆ ಮತ್ತು ಮಗನ ಸಂಬಂಧದ ಸುತ್ತ ಸುತ್ತುತ್ತದೆ. ಡಿಸೆಂಬರ್ 1 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ರಣಬೀರ್ ಜೊತೆಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Ranbir Kapoor's Animal film joins rs 700 crore club.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X