ಇದು ಬರೀ ಆತ್ಮವಿಶ್ವಾಸನಾ? ಅಥವಾ ಅತಿಯಾದ ಆತ್ಮವಿಶ್ವಾಸನಾ?

ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರ್ತಿದೆ. ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಬಾಬಿ ಡಿಯೋಲ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಟೀ-ಸೀರಿಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ 1 ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ 'ಅನಿಮಲ್' ಸಿನಿಮಾ ನಿರ್ಮಿಸಿವೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ಎರಡು ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ರಗಡ್ ಲುಕ್‌ನಲ್ಲಿ ಮಾಸ್ ಪ್ರೇಕ್ಷಕರಿಗೆ ಕಿಕ್ ಕೊಡೋಕೆ ಬರ್ತಿದ್ದಾರೆ. ಚಿತ್ರದಲ್ಲಿ ಅರ್ಜುನ್ ಸಿಂಗ್ ಆಗಿ ರಣ್‌ಬೀರ್ ನಟಿಸಿದ್ದರೆ ಆತನ ಮಡಿ ಗೀತಾಂಜಲಿ ಆಗಿ ರಶ್ಮಿಕಾ ಮಿಂಚಿದ್ದಾರೆ.

Animal film cesored A with 3hr 21m Runtime From censor board

ಈಗಾಗಲೇ 'ಅನಿಮಲ್' ಚಿತ್ರದ ಸಾಂಗ್ಸ್, ಟೀಸರ್‌ ರಿಲೀಸ್ ಆಗಿ ಹಿಟ್ ಆಗಿದೆ. ಇನ್ನು ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ತಮ್ಮ ಪಾತ್ರಕ್ಕೆ ಸ್ವತಃ ರಶ್ಮಿಕಾ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ತಂದೆ ಪಾತ್ರದಲ್ಲಿ ಅನಿಲ್ ಕಪೂರ್ ಬಣ್ಣ ಹಚ್ಚಿದ್ದಾರೆ. ತಂದೆ ಮಗನ ಬಾಂಧವ್ಯದ ಕತೆ ಜೊತೆಗೆ ಒಂದು ರಿವೇಂಜ್ ಡ್ರಾಮಾವನ್ನು ಸಂದೀಪ್ ಚಿತ್ರದಲ್ಲಿ ಹೇಳಿರುವಂತೆ ಕಾಣ್ತಿದೆ.

ಚಿತ್ರದಲ್ಲಿ ರಣ್‌ಬೀರ್- ರಶ್ಮಿಕಾ ಕೆಮೆಸ್ಟ್ರಿ ಬಗ್ಗೆಯೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಹಾಡೊಂದರಲ್ಲಿ ಇಬ್ಬರೂ ತುಟಿಗೆ ತುಟಿ ಬೆರೆಸಿರುವುದು ಸಖತ್ ವೈರಲ್ ಆಗಿತ್ತು. ಇನ್ನು ಚಿತ್ರದಲ್ಲಿ ಸಾಕಷ್ಟು ವೈಲೆಂಟ್ ಅಂಶಗಳು ಇವೆ ಅನ್ನೋದು ಟೀಸರ್‌ನಲ್ಲೇ ಅರ್ಥವಾಗಿತ್ತು. ಸದ್ಯ ಚಿತ್ರ ಸೆನ್ಸಾರ್ ಮುಗಿಸಿದ್ದು A ಸರ್ಟಿಫಿಕೇಟ್ ಸಿಕ್ಕಿದೆ. ಡಿಸೆಂಬರ್‌ 1ರಂದು 'ಅನಿಮಲ್' ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಸದ್ಯ 'ಅನಿಮಲ್' ಟ್ರೈಲರ್‌ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಸಿನಿಮಾ ಪ್ರಚಾರದಲ್ಲಿ ರಣ್‌ಬೀರ್- ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ 'ಅನಿಮಲ್' ಚಿತ್ರದ ರನ್‌ ಟೈಮ್ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಚಿತ್ರದ ರನ್‌ಟೈಮ್ ಮೂರು ಗಂಟೆಗೂ ಅಧಿಕ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಅರೇ ಈಗಿನ ಕಾಲದಲ್ಲಿ ಇಷ್ಟು ದೊಡ್ಡ ಸಿನಿಮಾ ಯಾರು ನೋಡ್ತಾರೆ? ಯಾರು ಮಾಡ್ತಾರೆ? ಇದೆಲ್ಲ ಸುಳ್ಳು ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಈಗ ಅಧಿಕೃತವಾಗಿ ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ.

Animal film cesored A with 3hr 21m Runtime From censor board

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಮಾಡಿ "ಅನಿಮಲ್ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ A ಸರ್ಟಿಫಿಕೇಟ್ ಸಿಕ್ಕಿದೆ. 3 ಗಂಟೆ 21 ನಿಮಿಷ 23 ಸೆಕೆಂಡ್ ಹಾಗೂ 16 ಫ್ರೇಮ್ಸ್ ರನ್‌ಟೈಮ್" ಎಂದು ಬರೆದುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ರನ್‌ಟೈಮ್ ಕಮ್ಮಿ ಆಗಿದೆ. ಎರಡು ಗಂಟೆ, ಎರಡೂವರೆ ಗಂಟೆ ಅಂದ್ರೆ ಅಬ್ಬಬ್ಬಾ ಎನ್ನುತ್ತಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ರನ್‌ಟೈಮ್ ಕೇವಲ ಒಂದು ಮುಕ್ಕಾಲು ಗಂಟೆ. ಹೀಗಿರುವಾಗ 'ಅನಿಮಲ್' ಚಿತ್ರತಂಡ ಬಹಳ ರಿಸ್ಕ್ ತೆಗೆದುಕೊಳ್ಳುತ್ತಿದೆ ಎನ್ನುತ್ತಿದ್ದಾರೆ.

ಮೂರು ಗಂಟೆ 21 ನಿಮಿಷ ಪ್ರೇಕ್ಷಕರನ್ನು ಚಿತ್ರಮಂದಿರಗಳಲ್ಲಿ ಕೂರಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಆದರೂ ಸಂದೀಪ್ ರೆಡ್ಡಿ ವಂಗಾ ಯಾಕೆ ಇಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ? ಎಂದು ಕೇಳುತ್ತಿದ್ದಾರೆ. ಕೆಲವರು ಚಿತ್ರತಂಡ ಸಿನಿಮಾ ಬಗ್ಗೆ ಬಹಳ ವಿಶ್ವಾಸದಿಂದ ಇದೆ. ಅದೇ ಕಾರಣಕ್ಕೆ ಇಂತಾದೊಂದು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ವಾದ ಮುಂದಿಡುತ್ತಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ಈ ಹಿಂದೆ 'ಅರ್ಜುನ್ ರೆಡ್ಡಿ' ಸಿನಿಮಾ ಮಾಡಿದ್ದರು. ಸಿನಿಮಾ ನೋಡಿದವರು ಫಿದಾ ಆಗಿದ್ದರು. ಇನ್ನು ಅರ್ಧಗಂಟೆ ಚಿತ್ರವನ್ನು ವಿಸ್ತರಿಸಿದ್ದರೂ ನೋಡುತ್ತಿದ್ದರು. ಅಷ್ಟರಮಟ್ಟಿಗೆ ಸಿನಿಮಾ ಮಾಡಿದ್ದರು. ಈ ಬಾರಿ ಕೂಡ 'ಅನಿಮಲ್' ಚಿತ್ರದಲ್ಲೇ ಏನೋ ಮ್ಯಾಟರ್ ಇದೆ. ಅದೇ ಕಾರಣಕ್ಕೆ ಇಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಕಾದು ನೋಡೋಣ ಎನ್ನುತ್ತಿದ್ದಾರೆ.

More from Filmibeat

English summary
Ranbir Kapoor, Rashmika mandanna's Animal runtime is a whopping 3hrs 21 mins 23 seconds;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X