ರಣ್‌ಬೀರ್‌ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ: ಎಲ್ಲಾ ಡ್ರಾಮಾ ಎನ್ನುತ್ತಿರುವ ನೆಟ್ಟಿಗರು
ಬಾಲಿವುಡ್‌ನ ಬಹುನಿರೀಕ್ಷಿತ 'ಅನಿಮಲ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ರಣ್‌ಬೀರ್ ಜೋಡಿಯಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಈಗಾಗಲೇ 'ಅನಿಮಲ್' ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ರಣ್‌ಬೀರ್- ರಶ್ಮಿಕಾ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 2 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ರು ರಶ್ಮಿಕಾಗೆ ಬ್ರೇಕ್ ಸಿಕ್ಕಿಲ್ಲ. ಹಾಗಾಗಿ 'ಅನಿಮಲ್' ಸಿನಿಮಾ ಮೇಲೆ ಭಾರೀ ಭರವಸೆಯಿಂದ ಇದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೊತೆ ಮುತ್ತಿನ ಮಳೆ ಸುರಿಸಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.

ಮುಂಬೈನಲ್ಲಿ ರಣ್‌ಬೀರ್ -ರಶ್ಮಿಕಾ ಪ್ರಮೋಷನ್‌ನಲ್ಲಿ ಭಾಗವಹಿಸಲು ಬಂದಾಗ ಫೋಟೊಗ್ರಫರ್ ಒಬ್ಬರು ಕನ್ನಡದಲ್ಲಿ ಮಾತನಾಡಲು ಹೇಳಿದ್ದಾರೆ. ಕೂಡಲೇ ರಶ್ಮಿಕಾ "ಎಲ್ಲರಿಗೂ ನಮಸ್ಕಾರ" ಎಂದಿದ್ದಾರೆ. ರಣ್‌ಬೀರ್‌ಗೂ ಹೇಳಿಕೊಟ್ಟಿದ್ದಾರೆ. ರಣ್‌ಬೀರ್ ಪುನರುಚ್ಚರಿಸಿದ್ದಾರೆ. ಬಳಿಕ ರಣ್‌ಬೀರ್ ಫೋಟೋಗ್ರಫರ್‌ನ ನೋಡಿ ನಿಮಗೆ ಕನ್ನಡ ಬರುತ್ತಾ ಎಂದಿದ್ದಾರೆ. ಹೌದು ಸರ್, ನಾನು ಕರ್ನಾಟಕ, ಹುಬ್ಬಳ್ಳಿಯಿಂದ ಬಂದಿದ್ದೀನಿ ಎಂದಿದ್ದಾರೆ. ಸರಿ ನೀವೇ ಹೇಳಿಕೊಡಿ, ರಶ್ಮಿಕಾ ಜೊತೆ ಕನ್ನಡ ಮಾತಾಡಿ ಎಂದಿದ್ದಾರೆ.
ಸದ್ಯ ರಣ್‌ಬೀರ್ ಕನ್ನಡ ಮಾತನಾಡಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ನೆಟ್ಟಿಗರು ಮಾತ್ರ ರಶ್ಮಿಕಾಗೆ ಕನ್ನಡ ಸರಿಯಾಗಿ ಬರಲ್ಲ, ಆಕೆ ಏನು ಕನ್ನಡ ಪಾಠ ಮಾಡೋದು, ಸಿನಿಮಾ ಪ್ರಚಾರಕ್ಕೆ ಇದೆಲ್ಲ ಡ್ರಾಮಾ ಅಷ್ಟೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ರಶ್ಮಿಕಾ ಈ ಹಿಂದೆ ಸಾಕಷ್ಟು ಬಾರಿ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಭಾಷೆಗಳಲ್ಲಿ ಮಾತನಾಡಲು ಯತ್ನಿಸುತ್ತಾರೆ. ಕರ್ನಾಟಕದಲ್ಲಿ ಮಾತ್ರ ಯಾಕೆ ಈ ರೀತಿ ಮಾಡುತ್ತಾರೆ ಎನ್ನುವ ಕೆಲವರು ಬೇಸರ ವ್ಯಕ್ತಪಡಿಸಿದ್ದರು.
'ಡಿಯರ್ ಕಾಮ್ರೆಡ್' ಸಿನಿಮಾ ಪ್ರಚಾರದ ವೇಳೆ "ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ" ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದರು. ಆಕೆಯ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 'ಪೊಗರು' ಬಳಿಕ ರಶ್ಮಿಕಾ ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಬರೀ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. 'ಅನಿಮಲ್' ಚಿತ್ರ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ರಶ್ಮಿಕಾ ಕನ್ನಡದಲ್ಲಿ ತಮ್ಮ ಗೀತಾಂಜಲಿ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.

ರಶ್ಮಿಕಾ ಸದ್ಯ 'ಅನಿಮಲ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲು ಅರ್ಜುನ್ ಜೋಡಿಯಾಗಿ 'ಪುಷ್ಪ'-2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀಕ್ವೆಲ್‌ನಲ್ಲಿ ಶ್ರೀವಲ್ಲಿಯಾಗಿ ಗೆದ್ದಿದ್ದ ಕೊಡಗಿನ ಕುವರಿ ಅದೇ ಪಾತ್ರವನ್ನು ಸೀಕ್ವೆಲ್‌ನಲ್ಲಿ ಮುಂದುವರೆಸಿದ್ದಾರೆ. ಮುಂದಿನ ವರ್ಷ ಆಗಸ್ಟ್ 15ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಇನ್ನು 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ಕೊಡಗಿನ ಕುವರಿ ನಟಿಸುತ್ತಿದ್ದಾರೆ. ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಧನುಷ್ ನಟನೆಯ 50ನೇ ಚಿತ್ರಕ್ಕೂ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 'ಅನಿಮಲ್' ಸಿನಿಮಾ ರಿಸಲ್ಟ್ ಮೇಲೆ ಆಕೆಯ ಬಾಲಿವುಡ್ ಜರ್ನಿ ನಿರ್ಧಾರವಾಗಿದೆ. ಇನ್ನು ಬಾಲಿವುಡ್ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡಲು ರಶ್ಮಿಕಾ ಟ್ರೈ ಮಾಡುತ್ತಿದ್ದಾರೆ. ಬಿಂದಾಸ್ ಫೋಟೊಶೂಟ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿರುತ್ತಾರೆ.


Click it and Unblock the Notifications











