ಡೀಪ್‌ಫೇಕ್ ವಿಡಿಯೋಗೆ ಕಣ್ಣೀರು ಹಾಕಿ ಈಗ ನೀನು ಮಾಡಿದ್ದೇನು?: ರಶ್ಮಿಕಾ ಮಂದಣ್ಣ ಬೋಲ್ಡ್ ಸೀನ್‌ಗೆ ನೆಟ್ಟಿಗರ ಪ್ರಶ್ನೆ!
ಕಳೆದ ತಿಂಗಳು ಭಾರಿ ಸದ್ದು ಮಾಡಿದ್ದು ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವಿಷಯ. ಇದಾದ ನಂತರ ಕಾಜೋಲ್, ಆಲಿಯಾ ಭಟ್ ಅವರ ಡೀಪ್‌ಫೇಕ್ ವಿಡಿಯೋಗಳು ಕೂಡ ಬಂದವು. ಆದರೂ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಹೆಚ್ಚು ಟ್ರೋಲ್ ಆಗಿತ್ತು. ಭಾರಿ ಸುದ್ದಿ ಕೂಡ ಮಾಡಿತ್ತು.
ರಶ್ಮಿಕಾ ಮಂದಣ್ಣ ಕೂಡ ವಿಡಿಯೋ ಬಗ್ಗೆ ಆತಂಕ ಹೊರ ಹಾಕಿದ್ದರು. ಅಮಿತಾಬ್ ಬಚ್ಚನ್, ಮೃಣಾಲ್ ಠಾಕೂರ್, ನಾಗಚೈತನ್ಯ ಸೇರಿದಂತೆ ಹಲವು ನಟ, ನಟಿಯರು ಇಂತಹ ಘಟನೆಯನ್ನು ಖಂಡಿಸಿದ್ದರು. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಮತ್ತೆ ಈ ವಿಷಯ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ರಶ್ಮಿಕಾ ಮಂದಣ್ಣ ಅವರ ಅನಿಮಲ್ ಸಿನಿಮಾದ ಹಾಟ್ ದೃಶ್ಯಗಳು.

ಅನಿಮಲ್‌ನಲ್ಲಿ ಸಕತ್ ಬೋಲ್ಡ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ
ನಟ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅನಿಮಲ್' ಸಿನಿಮಾ ಡಿಸೆಂಬರ್ 1 ರ ಶುಕ್ರವಾರದಂದು ದೇಶಾದ್ಯಂತ ಬಿಡುಗಡೆಯಾಗಿದೆ. ಇದು ತಂದೆ ಮತ್ತು ಮಗನ ನಡುವಿನ ಕಥೆ ಎಂದು ಹೇಳಲಾಗಿದೆ. ಆದರೆ, ಸಿನಿಮಾದಲ್ಲಿ ನಾಯಕ- ನಾಯಕಿ ನಡುವಿನ ಹಸಿಬಿಸಿ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಬಿಡುಗಡೆಯಾಗಿದ್ದ 'ಹುವಾ ಮೈನ್' ಹಾಡಿನಲ್ಲಿಯೇ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ಕಿಸ್ಸಿಂಗ್ ಸೀನ್‌ಗಳು ಜನರ ಗಮನ ಸೆಳೆದಿದ್ದವು. ತಂದೆ - ಮಗನ ಸಿನಿಮಾ ಎಂದರೂ ಕೂಡ ಇದು ತೀವ್ರವಾದ ಪ್ರೇಮಕಥೆಯನ್ನು ಒಳಗೊಂಡಿದೆ ಎಂದು ನೆಟ್ಟಿಗರು ಅಂದಾಜಿಸಿದ್ದರು. ಅದು ಈಗ ನಿಜವಾಗಿದೆ.
ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್ ಅವರ ಪತ್ನಿ ಗೀತಾಂಜಲಿಯಾಗಿ ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಇಂಟಿಮೇಟ್ ಸೀನ್‌ಗಳ ಕೆಲವು ಫೋಟೋ ಮತ್ತು ಕ್ಲಿಪ್‌ಗಳು ಟ್ವಿಟರ್‌ನಲ್ಲಿ ವೈರಲ್ ಆಗುತ್ತಿವೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಚಿತ್ರಕ್ಕೆ ವಯಸ್ಕರಿಗೆ ಮಾತ್ರ (ಎ) ಪ್ರಮಾಣಪತ್ರವನ್ನು ನೀಡಿರುವುದು ಸರಿಯಾಗಿದೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.
ಡೀಪ್‌ಫೇಕ್ ವಿಡಿಯೋಗೆ ಬೇಜಾರು ಅಂದಿದ್ರಿ...ಈಗ ಮಾಡಿದ್ದೇನು...?
ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಫೋಟೋಗಳನ್ನು ಹಂಚಿಕೊಂಡಿರುವ ಕೆಲವರು, 'ಇವರೇ ಕೆಲ ದಿನಗಳ ಹಿಂದೆ ಡೀಪ್‌ಫೇಕ್ ವಿಡಿಯೋಯಿಂದ ನೋವಾಗಿದೆ ಎಂದು ಅಳುತ್ತಿದ್ದರು' ಎಂದು ಕೀಟಲೆ ಮಾಡಿದ್ದಾರೆ. ಮತ್ತೊಬ್ಬರು ಇದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ. ಹೀಗಾಗಿ ಇದೇಲ್ಲಾ ಕಾಮನ್ ಎಂದಿದ್ದಾರೆ.
ಮತ್ತೆ ಹಲವರು ಡೀಪ್‌ಫೇಕ್ ವಿಡಿಯೋ ಏಕೆ ನೋಡುತ್ತಿರಿ ಸಿನಿಮಾದಲ್ಲಿ ರಿಯಲ್ ಆಗಿ ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, 'ತೆರೆಯ ಮೇಲೆ ಬಟ್ಟೆ ಬಿಚ್ಚುವುದರಿಂದ ನೋವಾಗುವುದಿಲ್ಲ. ಡೀಪ್‌ಫೇಕ್ ವಿಡಿಯೋಗಳಿಂದ ನೋವಾಗುತ್ತದೆ' ಎಂಬ ಮೀಮ್ ಗಳನ್ನು ಹಂಚಿಕೊಂಡು ರಶ್ಮಿಕಾ ಮಂದಣ್ಣ ಕಾಲು ಎಳೆದಿದ್ದಾರೆ.
ಅನಿಮಲ್
ಅನಿಮಲ್ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಮಗನ ಬಗ್ಗೆ ಭಾವನೆಗಳೇ ಇಲ್ಲದ ತಂದೆಯಾಗಿ ಅನಿಲ್ ಕಪೂರ್ ನಟಿಸಿದರೆ, ತಂದೆಯನ್ನು ಪ್ರೀತಿಸುವ, ತಮದೆಗಾಗಿ ಏನಮಾದರೂ ಮಾಡುವ ಮಗನಾಗಿ ರಣಬೀರ್ ಕಪೂರ್ ಅಭಿನಯಿಸಿದ್ದಾರೆ. "ಇದು ವಯಸ್ಕರ ಖುಷಿ ಕಭಿ ಕಭಿ ಗಮ್" ಎಂದು ರಣಬೀರ್ ಈ ಹಿಂದೆ ಹೇಳಿದ್ದರು. ಸೆನ್ಸಾರ್ ಬೋರ್ಡ್ ಕೂಡ 'ಎ' ಪ್ರಮಾಣಪತ್ರ ನೀಡಿದೆ.


Click it and Unblock the Notifications











