ಆ ಆಟೋ ಡ್ರೈವರ್ ನನ್ನೆದುರು ಪ್ಯಾಂಟ್ ಜಿಪ್ ತೆರೆದ, ಆಘಾತಕಾರಿ ಘಟನೆ ನೆನೆದ ವೀರಕನ್ನಡಿಗ ನಟಿ ಅನಿತಾ..!
'ಕಲೆ' ಎಷ್ಟೇ ಇದ್ದರೂ ಒಮ್ಮೆ ನಾಯಕಿಯರು 'ಮದುವೆ'ಯಾದರೆ ಇಲ್ಲಿ 'ಬೆಲೆ' ಇಲ್ಲ ಅನ್ನುವ ಮಾತು ಇದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಮಾತನ್ನ ಸುಳ್ಳಾಗಿಸುತ್ತಾರೆ. ಮಿಕ್ಕಂತೆ ಬಹುತೇಕರ 'ಕಥೆ-ವ್ಯಥೆ' ಸೇಮ್ ಟು ಸೇಮ್. ಇದಕ್ಕೆ ಮತ್ತೊಂದು ಉದಾಹರಣೆ ಅನಿತಾ ಹಸ್ಸಂದಾನಿ.
ಹೌದು, ಅನಿತಾ ಹಸ್ಸಂದಾನಿ. ಒಂದ್ಕಾಲದ ಅಪ್ರತಿಮ ಸುಂದರಿ. ಐಶ್ವರ್ಯ ರೈ ಅಭಿನಯದ 'ತಾಲ್' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಅನಿತಾ ಅವರ ಜೀವನದ ಶ್ರೇಷ್ಠ ಸಾಧನೆ 'ನುವ್ವು ನೇನು'.ತೇಜಾ ನಿರ್ದೇಶನದಲ್ಲಿ ಬಂದಿದ್ದ 'ನುವ್ವು ನೇನು' ಮೂಲಕ 'ನೇಮು'..'ಫೇಮು'..ಸಂಪಾದಿಸಿದ ಅನಿತಾ ಕೇವಲ 'ಎರಡೇ ವರ್ಷ'ದಲ್ಲಿ 'ಹನ್ನೊಂದು' ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು, ಹಿಂದಿ ಹೀಗೆ ಮೂರು ಭಾಷೆಯಲ್ಲಿಯೂ ಮಿಂಚಿದರು.

ಇನ್ನೂ.. ಅಪ್ಪು ಅಭಿನಯದ 'ವೀರ ಕನ್ನಡಿಗ' ಚಿತ್ರದ ಮೂಲಕ, ಅನಿತಾ ಕನ್ನಡ ಚಿತ್ರರಂಗಕ್ಕೂ ಪರಿಚಯವಾದರು. ಕನ್ನಡಿಗರ ಹೃದಯವನ್ನೂ ಗೆದ್ದರು.ವೀರ ಕನ್ನಡಿಗ ಚಿತ್ರದ ನಂತರ ಮತ್ತೆರಡು ಕನ್ನಡ ಸಿನಿಮಾಗಳನ್ನ ಮಾಡಿದರು ಅನಿತಾ. ಆ ಪೈಕಿ ಒಂದು 'ಗಂಡುಗಲಿ ಕುಮಾರ ರಾಮ' ಆದರೆ, ಮತ್ತೊಂದು 'ಹುಡುಗ ಹುಡುಗಿ'. ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ನಾಯಕಿಯಾಗಿ ಮಿಂಚ್ತಿದ್ದ ಅನಿತಾ ಏಕಾಏಕಿ 'ಸೈಡ್ ರೋಲ್' ಗಳಿಗೆ ಸೀಮಿತರಾದರು. 2010 ರ ನಂತರ ಅಲ್ಲೊಂದು.. ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೂ ಅಷ್ಟೊತ್ತಿಗಾಗಲೇ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಲಾರಾ ದತ್ತಾ ಹೀಗೆ ಅನೇಕರು ಚಿತ್ರರಂಗಕ್ಕೆ ಬಂದಿದ್ದರು. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದರು.
ಹೀಗಾಗಿಯೇ ಏನೋ ಇನ್ನೂ ನೆಲೆಯೂರಿ ನಿಲ್ಲುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದ ಅನಿತಾ 2013ರಲ್ಲಿ 'ರೊಹೀತ್ ರೆಡ್ಡಿ' ಜೊತೆ ಸಪ್ತಪದಿಯನ್ನ ತುಳಿದರು. 2016ರ ನಂತರ ಬೆಳ್ಳಿ ಪರದೆಯಿಂದ ಸಂಪೂರ್ಣ ಅಂತರವನ್ನ ಕಾಪಾಡಿಕೊಂಡರು. ಸದ್ಯಕ್ಕೆ ಅನಿತಾಗೆ ಈಗ 42ರ ಹರೆಯ. ಗಂಡನ ಜೊತೆ ನೆಮ್ಮದಿಯಾಗಿ ಸಂಸಾರ ನೌಕೆಯಲ್ಲಿ ವಿಹರಿಸುತ್ತಿರುವ ಅನಿತಾಗೆ 'ಆರವ್ ರೆಡ್ಡಿ' ಎಂಬ ಮುದ್ದಾದ ಮುಗ ಕೂಡ ಇದ್ದಾನೆ.

ಇಂಥಾ ಅನಿತಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ಧಾರೆ. ಚಿಕ್ಕ ವಯಸ್ಸಿನಲ್ಲಿ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಹೌದು, 'ಹೌಟರ್‌ಫ್ಲೈ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನಿತಾ ಆಗಿನ್ನೂ ನನಗೆ ಒಂಬತ್ತು ಅಥವಾ ಹತ್ತು ವರ್ಷ ಇರಬಹುದು. ನನ್ನ ಅಮ್ಮ ಹತ್ತು ರೂಪಾಯಿಯನ್ನು ನನಗೆ ನೀಡುತ್ತಿದ್ದರು. ಆಗ ಶಾಲೆಗೆ ಹೋಗುವಾಗ ಆಟೋದಲ್ಲಿ ಹೋಗುತ್ತಿದ್ದ ನಾನು ಮನೆಗೆ ಬರುವಾಗ ದುಡ್ಡು ಉಳಿಸಲು ನಡೆದುಕೊಂಡು ಬರುತ್ತಿದ್ದೆ ಎಂದು ಹೇಳಿದ್ದಾರೆ. ಉಳಿದ ದುಡ್ಡಿನಲ್ಲಿ ಸಮೋಸಾ ಅಥವಾ ಬೇರೆ ಏನಾದರೂ ತಿನ್ನುತ್ತಿದ್ದೇವು ಎಂದು ಹೇಳಿದ್ದಾರೆ.
ಮುಂದುವರೆದು ಹೀಗೆ ಕಾಲ್ನಡಿಗೆಯಲ್ಲಿ ಬರುವಾಗ ನಾವು ನಡೆದುಕೊಂಡು ಬರುವ ದಾರಿಯಲ್ಲಿ ಪ್ರತಿ ದಿನ ಆಟೋ ರಿಕ್ಷಾದವನೊಬ್ಬ ನಿಲ್ಲುತ್ತಿದ್ದ ಎಂದಿರುವ ಅನಿತಾ ಆತ ನಮ್ಮನ್ನು ನೋಡುತ್ತಿದ್ದಂತೆಯೇ ಪ್ಯಾಂಟ್ ಜಿಪ್ ಓಪನ್ ಮಾಡುತ್ತಿದ್ದ, ತನ್ನ ಖಾಸಗಿ ಅಂಗವನ್ನು ಹೊರ ಹಾಕಿ ಅಸಹ್ಯವಾಗಿ ವರ್ತನೆ ಮಾಡುತ್ತಿದ್ದ ಎಂದು ಹೇಳಿದ್ದಾರೆ. ನಮಗೆ ಆಗ ಅವನೇನು ಮಾಡುತ್ತಿದ್ದಾನೆ ಎನ್ನುವುದು ಅರ್ಥ ಆಗುತ್ತಿರಲಿಲ್ಲ. ಆದರೆ ನೋಡಲು ಮಾತ್ರ ಅದು ಅಸಹ್ಯವಾಗಿರುತ್ತಿತ್ತು ಎಂದು ಹೇಳಿದ್ದಾರೆ ಅನಿತಾ.

ಕೆಲವು ದಿನ ಹೀಗೆ ಮುಂದುವರೆಯಿತು ಆ ನಂತರ ನಾವು ನಮ್ಮ ದಾರಿಯನ್ನೇ ಬದಲಿಸಿದೆವು ಆದರೆ ನಮ್ಮದು ಹುಡುಗಿಯರ ಶಾಲೆಯಾಗಿದ್ದ ಕಾರಣ ಶಾಲೆಯ ಆಚೆ ಯಾವುದಾದರೋ ಆಟೋ ನೋಡಿದಾಗೆಲ್ಲ ಭಯ ಆಗಲು ಶುರುವಾಗುತ್ತಿತ್ತು ಎಂದು ಅನಿತಾ ಹೇಳಿದ್ದಾರೆ. ನಮ್ಮನ್ನೆಲ್ಲಿ ಆತ ಹಿಂಬಾಲಿಸಿಕೊಂಡು ಬರುತ್ತಾನೆ ಎಂದು ಭಯ ಆಗಲು ಶುರುವಾಗಿತ್ತು ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳನ್ನು ಪಾಲಕರು ಎಷ್ಟೇ ಜೋಪಾನವಾಗಿ ನೋಡಿಕೊಂಡರೂ ಅದು ಕಡಿಮೆಯೇ ಎಂದು ಕೂಡ ಅನಿತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ


Click it and Unblock the Notifications











