ಆ ಮುಸ್ಲಿಂ ನಟನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ಈಗಲೂ ಪಶ್ಚಾತಾಪ ಇದೆ ಎಂದ ವೀರ ಕನ್ನಡಿಗ ನಾಯಕಿ..?

ಬಣ್ಣದ ಲೋಕದಲ್ಲಿ ಅದೃಷ್ಟ ಹೇಗೆ ಬೇಕಾದರೂ, ಎಲ್ಲಿ ಬೇಕಾದರೂ ಖುಲಾಯಿಸಬಹುದು. ಅದೃಷ್ಟ ದೇವತೆಯನ್ನ ಒಲಿಸಿಕೊಳ್ಳಲು ಇಲ್ಲಿ ''ಪಶ್ಚಿಮ''ಕ್ಕೆ ತಲೆ ಮಾಡಿ ಮಲಗಬೇಕು ಅಂತೇನಿಲ್ಲ. ಕೆಲವೊಮ್ಮೆ ''ದಕ್ಷಿಣ'' ದಿಕ್ಕಿಗೆ ತಲೆ ಮಾಡಿ ಮಲಗಿದರು ಸಾಕು ಸಂತೋಷ, ಐಶ್ವರ್ಯ ಪ್ರಾಪ್ತಿಯಾಗುತ್ತೆ. ಉದಾಹರಣೆಗೆ 'ಅನಿತಾ ಹಸ್ಸಂದಾನಿ' ಅವರನ್ನೇ ತೆಗೆದುಕೊಳ್ಳಿ.

ಹೌದು, ಅನಿತಾ ಹಸ್ಸಂದಾನಿ... ''ಅಪ್ಪು'' ಅಭಿನಯದ ''ವೀರ ಕನ್ನಡಿಗ'' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಮರಾಠಿ ಚೆಲುವೆ. ಬೆಸಿಕಲಿ 'ಮಹಾರಾಷ್ಟ್ರೀಯನ್ ಆದರೂ ಅನಿತಾ ತಮ್ಮ ಮೊದಲ ಕನ್ನಡದ ಪ್ರಯತ್ನದಲ್ಲಿಯೇ ಕನ್ನಡಿಗರ ಹೃದಯವನ್ನ ಗೆದ್ದಿದ್ದರು. ಇದಕ್ಕೆ ಸಾಕ್ಷಿ ಅನ್ನುವಂತೆ ''ವೀರ ಕನ್ನಡಿಗ'' ಚಿತ್ರದ ''ಮಸ್ತು ಹುಡುಗಿಯೇ ಯಾಕೆ ಸುಸ್ತು ಮಾಡ್ತಿಯೇ' ಹಾಗೂ ''ಸೈ ಸೈ ಮೊನಾಲಿಸಾ'' ಹಾಡುಗಳನ್ನ ಅಪ್ಪು ಅಭಿಮಾನಿಗಳಷ್ಟೇ ಅಲ್ಲ, ಕನ್ನಡದ ಕಲಾರಸಿಕರು ಇವತ್ತು ಕೂಡ ಮರೆತಿಲ್ಲ.

Anita Hassanandani recalls relationship with Eijaz Khan says He was Muslim and I m a Hindu

ಇನ್ನೂ, ವೀರ ಕನ್ನಡಿಗ ಚಿತ್ರದ ನಂತರ ಕನ್ನಡದಲ್ಲಿಯೇ ನೆಲೆಯೂರುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಇದಕ್ಕೆ ಪೂರಕವಾಗಿ ''ಗಂಡುಗಲಿ ಕುಮಾರ ರಾಮ'' ಹಾಗೂ ''ಹುಡುಗ ಹುಡಗಿ'' ಚಿತ್ರಗಳಲ್ಲಿ ಅನಿತಾ ಅಭಿನಯಿಸಿದರು ಕೂಡ. ಆದರೆ ಆ ನಂತರ ದುರ್ಬಿನ್ ಹಾಕಿ ಹುಡುಕಿದರು ಕೂಡ ಅನಿತಾ ಹಸ್ಸಂದಾನಿ ಕನ್ನಡಿಗರಿಗೆ ಕಾಣಲಿಲ್ಲ. ಕೇವಲ ಕರ್ನಾಟಕದಿಂದ ಅಷ್ಟೇ ಅಲ್ಲ ದಕ್ಷಿಣ ಭಾರತದಿಂದನೇ ಕಣ್ಮರೆಯಾದರು ಅನಿತಾ.

ಇಂಥಾ ಅನಿತಾ ಈಗ ತಮ್ಮ ಪ್ರೇಮಕಥೆಯನ್ನು ಹಂಚಿಕೊಂಡಿದ್ಧಾರೆ. 2013ರಲ್ಲಿ ರೋಹಿತ್ ರೆಡ್ಡಿಯವರನ್ನು ಮದುವೆಯಾಗುವ ಮುನ್ನ, ಅನ್ಯ ಧರ್ಮದ ಹುಡುಗನ ಜೊತೆ ತಾವು ಪ್ರೇಮಪಾಶದಲ್ಲಿ ಸಿಲುಕಿ ಒದ್ದಾಡಿದ್ದಾಗಿ ಹೇಳಿದ್ದಾರೆ. ನನ್ನ ಬದುಕಿನಲ್ಲಿ ಬಂದ ಕೆಲವು ಪ್ರಮುಖ ವ್ಯಕ್ತಿಗಳ ಪೈಕಿ ಈಜಾಜ್ ಖಾನ್ ಕೂಡ ಒಬ್ಬರು ಎಂದಿರುವ ಅನಿತಾ ನಾನು ಅವರನ್ನು ಹುಚ್ಚಿಯಂತೆ ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಮ್ಮ ಪ್ರೀತಿಗೆ ಧರ್ಮ ಅಡ್ಡಿ ಬಂತು ಎಂದಿರುವ ಅನಿತಾ ನನ್ನ ತಾಯಿ ನಮ್ಮ ಸಂಬಂಧಕ್ಕೆ ವಿರುದ್ಧವಾಗಿದ್ದರು ಎಂದು ಹೇಳಿದ್ದಾರೆ. ಇನ್ನೂ ಅವನು ಮುಸ್ಲಿಂ ನಾನು ಹಿಂದೂ ನಮ್ಮ ನಡುವೆ ಪರಸ್ಪರ ಕಾಳಜಿ ಇತ್ತು ಆದರೆ ಸಂಬಂಧ ಉಳಿಯಲಿಲ್ಲ, ಉಳಿಸಿಕೊಳ್ಳುವ ಪ್ರಯತ್ನವನ್ನು ಕೂಡ ನಾವು ಪ್ರಾಮಾಣಿಕವಾಗಿ ಮಾಡಲಿಲ್ಲ ಎಂದಿರುವ ಅನಿತಾ, ಈಜಾಜ್ ಅವರಿಂದ ದೂರವಾಗುವುದು ತುಂಬಾ ಕಷ್ಟವಾಗಿತ್ತು, ಆ ನೋವಿನಿಂದ ಹೊರ ಬರಲು ನನಗೆ ಒಂದು ವರ್ಷವೇ ಬೇಕಾಯಿತು ಎಂದು ಹೇಳಿದ್ದಾರೆ.

Anita Hassanandani recalls relationship with Eijaz Khan says He was Muslim and I m a Hindu

ಮುಂದುವರೆದು ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನ ಮಾಡಿದರೆ ಅದು ಪ್ರೀತಿ ಅಲ್ಲವೇ ಅಲ್ಲ ಎಂದಿರುವ ಅನಿತಾ, ನಾನು ಅವನಿಗೋಸ್ಕರ ನನ್ನನ್ನೂ ತುಂಬಾ ಬದಲಿಸಿಕೊಂಡಿದ್ದೆ ಎಂದಿದ್ದಾರೆ. ಕೈ ತುಂಬಾ ಅವಕಾಶಗಳಿರುವ ಸಮಯದಲ್ಲಿ ಆ ವ್ಯಕ್ತಿಗೋಸ್ಕರ ನಾನು ಎಲ್ಲವನ್ನೂ ತ್ಯಾಗ ಮಾಡಿದೆ ಈ ವಿಚಾರದಲ್ಲಿ ನನಗೆ ಈಗಲೂ ಪಶ್ಚಾತಾಪ ಇದೆ ಎಂದು ಕೂಡ ಹೇಳಿದ್ದಾರೆ. ಪ್ರೀತಿಸುವ ವ್ಯಕ್ತಿಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬಾರದು ಎಂದು ಹೇಳಿರುವ ಅನಿತಾ ಬದಲಾಯಿಸಲು ಪ್ರಯತ್ನ ಮಾಡುವವರ ಜೊತೆ ನಾವು ಯಾವತ್ತೂ ಕೂಡ ಇರಬಾರದು ಎಂದಿದ್ದಾರೆ. ಇನ್ನೂ ಕಾಲ ಕಾಲಕ್ಕೆ ನಿಮ್ಮ ಪ್ರೀತಿ ಪಾತ್ರರ ಫೋನ್ ಪರಿಶೀಲಿಸಬೇಕು ಎಂದಿರುವ ಅನಿತಾ ತನ್ನ ಫೋನ್‌ ಅನ್ನು ಅವರು ಸುಲಭವಾಗಿ ನಿಮ್ಮ ಕೈಗೆ ಕೊಡದೇ ಮರೆಮಾಡುವ ಪ್ರಯತ್ನ ಮಾಡಿದರೆ ಅಲ್ಲಿ ಖಂಡಿತವಾಗಿಯೂ ಏನಾದರೂ ತಪ್ಪಾಗಿದೆ ಎಂದು ಅರ್ಥ ಎಂದು ಹೇಳಿದ್ದಾರೆ.

ಅಂದ್ಹಾಗೇ ಅನಿತಾ ಮತ್ತು ಈಜಾಜ್ ನಡುವೆ ಏಕ್ತಾ ಕಪೂರ್ ನಿರ್ಮಾಣದ ಕಾವ್ಯಾಂಜಲಿ ಧಾರಾವಾಹಿಯ ಸಮಯದಲ್ಲಿ ಪ್ರೇಮಾಂಕುರವಾಗಿತ್ತು. ಆ ನಂತರ ಕೆಲ ಕಾಲ ಸುತ್ತಾಡಿದ್ದ ಇಬ್ಬರು 2007ರಲ್ಲಿ ದೂರವಾದರು. 2013ರಲ್ಲಿ ರೋಹಿತ್ ರೆಡ್ಡಿ ಅವರ ಜೊತೆ ಅನಿತಾ ಸಪ್ತಪದಿಯನ್ನು ತುಳಿದರು.

More from Filmibeat

Read more about: actress love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X