ಮುಂಬೈನಲ್ಲಿ ಹೊಸ ಮನೆ ಕೊಂಡುಕೊಂಡ 'ವೀರ ಕನ್ನಡಿಗ' ಹುಡುಗಿ.!
Recommended Video

ನಟಿ ಅನಿತಾ ಗೊತ್ತಲ್ವಾ.? ಯಾರಪ್ಪಾ ಈ ಅನಿತಾ ಅಂತ ಯೋಚನೆ ಮಾಡ್ತಿದ್ರೆ, ಒಮ್ಮೆ 2004 ರಲ್ಲಿ ಬಿಡುಗಡೆ ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೂರನೇ ಸಿನಿಮಾ 'ವೀರ ಕನ್ನಡಿಗ' ನೆನಪಿಸಿಕೊಳ್ಳಿ...
'ವೀರ ಕನ್ನಡಿಗ' ಚಿತ್ರದಲ್ಲಿ ಅಪ್ಪು ಜೊತೆಗೆ 'ಸೈ ಸೈ ಮೋನಾಲಿಸಾ..' ಅಂತ ಸಖತ್ತಾಗಿ ಸ್ಟೆಪ್ ಹಾಕಿದ ನಟಿಯೇ ಅನಿತಾ.
ಕನ್ನಡದಲ್ಲಿ ಮಾತ್ರ ಅಲ್ಲ, ತೆಲುಗಿನ 'ನುವ್ವು ನೇನು', 'ಶ್ರೀರಾಮ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹೀರೋಯಿನ್ ಆಗಿ ಅನಿತಾ ಅಭಿನಯಿಸಿದ್ದಾರೆ. ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಚಾಲ್ತಿಯಲ್ಲಿರುವ ಅನಿತಾ, ಹಿಂದಿ ಕಿರುತೆರೆಯಲ್ಲಿಯೂ ಹೆಸರುವಾಸಿ.

'ಕಾವ್ಯಾಂಜಲಿ' ಹಾಗೂ 'ಯೇ ಹೇ ಮೊಹಬ್ಬತ್ತೇ' ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಅನಿತಾ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿರುವ ಅನಿತಾ ಬಾಳಲ್ಲಿ ಸಂತಸ ತುಂಬಿ ತುಳುಕುತ್ತಿದೆ.
2013 ರಲ್ಲಿ ಉದ್ಯಮಿ ರೋಹಿತ್ ರೆಡ್ಡಿ ಜೊತೆಗೆ ಅನಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಆದ ಐದು ವರ್ಷಗಳ ಬಳಿಕ ಮುಂಬೈನಲ್ಲಿ ಸ್ವಂತ ಮನೆಯನ್ನ ದಂಪತಿಗಳು ಖರೀದಿ ಮಾಡಿದ್ದಾರೆ.
ಮನೆಯ ಗೃಹಪ್ರವೇಶದ ಚಿತ್ರಗಳನ್ನ ಸ್ವತಃ ಅನಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಗೃಹಪ್ರವೇಶಕ್ಕೆ ಕುಟುಂಬಸ್ಥರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಸದ್ಯ 'ಯೇ ಹೇ ಮೊಹಬ್ಬತ್ತೇ' ಸೀರಿಯಲ್ ನಲ್ಲಿ ಅನಿತಾ ಮಿಂಚುತ್ತಿದ್ದಾರೆ.


Click it and Unblock the Notifications











