ಅವಕಾಶ ಕೊಡುವ ನೆಪದಲ್ಲಿ ನನ್ನ ಮಗಳನ್ನು ಮಂಚಕ್ಕೆ ಕರೆದಿದ್ದರು, ಆಕೆ ಚಿತ್ರರಂಗ ಬಿಡಲು ಅದೇ ಕಾರಣ

ಚಿತ್ರರಂಗಕ್ಕೆ ಬರುವ ಸ್ಟಾರ್ ಕಿಡ್‌ಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತೆ ಎನ್ನುವ ಮಾತು ಇದೆ. ಎಲ್ಲರಂತೆ ಇವರು ಇಲ್ಲಿ ಹೆಚ್ಚಿನ ಸರ್ಕಸ್ ಮಾಡುವ ಅವಶ್ಯಕತೆ ಇರುವುದಿಲ್ಲ. ಅವಕಾಶಕ್ಕಾಗಿ ಸೈಕಲ್ ತುಳಿಯುವ ಪ್ರಸಂಗವೂ ಎದುರಾಗಲ್ಲ. ತಂದೆ-ತಾಯಿಯ ನೆರಳಿನಲ್ಲಿ ಬದುಕು ರೂಪಿಸಿಕೊಳ್ಳಲು ಬರುವ ಇವರಿಗೆ ಅವಕಾಶಗಳ ಹೆಬ್ಬಾಗಿಲು ತನ್ನತಾನೇ ತೆರೆಯುತ್ತೆ ಎನ್ನುವ ಆಲೋಚನೆ ಇಲ್ಲಿ ಹಲವರದ್ದು. ಹಾಗೇ ನೋಡಿದರೆ ಇದು ನಿಜಾ ಕೂಡ.

ಆದರೆ ಇದು ಬಣ್ಣದ ಲೋಕ. ಇಲ್ಲಿಯೂ ಕೂಡ ಕೆಲ ಸವಾಲುಗಳನ್ನು ಇವರು ಎದುರಿಸಬೇಕಾಗುತ್ತೆ. ಅದರಲ್ಲಿಯೂ ಸ್ಟಾರ್ ಗಳ ಮಕ್ಕಳಾದರೂ ಹೆಣ್ಣು ಮಕ್ಕಳು ಸುರಕ್ಷಿತರಲ್ಲ. ಇವರ ಮೇಲೆ ಕೂಡ ಕಾ*ಮಾಂಧರ ಕಣ್ಣೀರುತ್ತೆ. ತಂದೆ ತಾಯಿ ಎಷ್ಟೇ ಹೆಸರು ಮಾಡಿರಲಿ ಪಾತ್ರಕ್ಕಾಗಿ ಪಲ್ಲಂಗದ ಬೇಡಿಕೆ ಕೇಳಿ ಕನಸೊತ್ತು ಬಂದ ಚೆಲುವೆಯರ ಕಣ್ಣಿನಲ್ಲಿಯೂ ನೀರು ತುಂಬುತ್ತೆ. ಉದಾಹರಣೆಗೆ ಪೂಜಾ ಕನ್ವಲ್ ಅವರನ್ನೇ ತೆಗೆದುಕೊಳ್ಳಿ.

Anita Kanwal Reveals Why She Abandoned Her Peak Career To Shield Daughter From Compromise Demands

ಹೌದು, ಪೂಜಾ ಕನ್ವಲ್.. ಒಂದ್ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡ ಚೆಲುವೆ. ವಿಶೇ‍ಷ ಅಂದರೆ ಈ ಪೂಜಾ ಕನ್ವಲ್ ಬೇರೆ ಯಾರು ಅಲ್ಲ. ಬದಲಿಗೆ ಅನಿತಾ ಕನ್ವಲ್ ಅವರ ಮಗಳು. ''ಬನೇಗಿ ಅಪ್ನಿ ಬಾತ್''.. ''ಸೋನ್‌ಪರಿ'' .. ''ಸಸುರಲ್ ಗೇಂದಾ ಫೂಲ್''.. ''ಚಾಣಕ್ಯ''.. ''ಶಾಂತಿ''.. ''ಜಸ್ಟ್ ಮೊಹಬ್ಬತ್''.. ''ಹಿಂದೂಸ್ತಾನ್''.. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''... ಅಂತಹ ಪ್ರಖ್ಯಾತ ಧಾರಾವಾಹಿಯಲ್ಲಿ ಅಭಿನಯಿಸಿದವರು ಈ ಅನಿತಾ ಕನ್ವಲ್.

ಇಷ್ಟೇ ಅಲ್ಲ ''ಕಭಿ ಹಾ ಕಭಿ ನಾ''..''ಗಂಗಾಜಲ್''..''ಮುಝ್ಸೇ ದೋಸ್ತಿ ಕರೋಗೆ''.. ''ಗೀತಾಂಜಲಿ''.. ''ಲಾವಾರಿಸ್''.. ''ನಾ ತುಮ್ ಜಾನೋ ನಾ ಹಮ್''.. ಸೇರಿ ಹಲವು ಸಿನಿಮಾಗಳಲ್ಲಿ ಕೂಡ ಅನಿತಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಇಂಥಾ ಅನಿತಾ ಕನ್ವಲ್ ಅವರ ಮಗಳು ಪೂಜಾ 2004ರಲ್ಲಿ ಹಿಂದಿ ಚಿತ್ರರಂಗದ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ರಾಜಶ್ರೀ ನಿರ್ಮಾಣದ ''ಊಫ್ ಕ್ಯಾ ಜಾದೂ ಮೊಹಬ್ಬತ್ ಹೈ'' ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು. ಆ ನಂತರ ''ಜವಾನಿ ಜಿಂದಾಬಾದ್'' ಮತ್ತು ''ಬ್ಲೂ ಆರೆಂಜ್ಸ್'' ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡರು. ಆದರೆ ಗೆಲುವು ಸಿಗಲಿಲ್ಲ.

ಪೂಜಾ ಚಿತ್ರರಂಗದಿಂದ ದೂರವಾಗಲು ಈ ಸೋಲುಗಳೇ ಪ್ರಮುಖ ಕಾರಣವೆಂದು ಹಲವರು ಇಲ್ಲಿಯವರೆಗೆ ಅಂದುಕೊಂಡಿದ್ದರು. ಆದರೆ ವಾಸ್ತವದಲ್ಲಿ ಸೋಲಲ್ಲ. ಬದಲಿಗೆ ಪೂಜಾ ಹಿಂದೆ ಸರಿದಿದ್ದು ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಯಿಂದ ಬೇಸತ್ತು ಎನ್ನುವ ವಿಚಾರ ಈಗ ಜಗಜ್ಜಾಹೀರಾಗಿದೆ. ಈ ವಿಚಾರವನ್ನು ಖುದ್ದು ಪೂಜಾ ಅವರ ತಾಯಿ ಮತ್ತು ಹಿರಿಯ ನಟಿ ಅನಿತಾ ಹೇಳಿದ್ದಾರೆ.

Anita Kanwal Reveals Why She Abandoned Her Peak Career To Shield Daughter From Compromise Demands

ಈ ಕುರಿತು ''ಸಿದ್ದಾರ್ಥ್ ಕಣ್ಣನ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನಿತಾ, ನನ್ನ ವೃತ್ತಿ ಬದುಕು ಉತ್ತುಂಗದಲ್ಲಿದ್ದಾಗ ನಾನು ಏರಡೂವರೆ ವರ್ಷ ಬ್ರೇಕ್ ಪಡೆದೆ ಅದಕ್ಕೆ ಕಾರಣ ನನ್ನ ಮಗಳು ಎಂದಿದ್ದಾರೆ. ಆ ಸಮಯದಲ್ಲಿ ಆಕೆಗೆ ಕೇವಲ 17 ವರ್ಷ. ಅವಳನ್ನು ನಾನು ಎಲ್ಲಿಯೂ ಏಕಾಂಗಿಯಾಗಿ ಕಳಿಸುವಂತೆ ಇರಲಿಲ್ಲ ಎಂದು ಹೇಳಿರುವ ಅನಿತಾ ತಾಯಿಯಾಗಿ ಅವಳ ಜೊತೆ ಇರುವುದು ನನ್ನ ಜವಾಬ್ಧಾರಿ ಆಗಿತ್ತು ಎಂದಿದ್ದಾರೆ.

ದಕ್ಷಿಣದಲ್ಲಿ ಚಿತ್ರೀಕರಣ ಇದ್ದರೆ ಅವಳ ಜೊತೆ ನಾನು ಕೂಡ ಹೋಗುತ್ತಿದ್ದೆ, ಬ್ಯಾಂಕಾಕ್‌ನಲ್ಲಿದ್ದಾಗ ಅಲ್ಲಿಯೂ ನಾನು ಅವಳನ್ನು ನೆರಳಿನಂತೆಯೇ ಹಿಂಬಾಲಿಸುತ್ತಿದ್ದೆ ಎಂದು ಹೇಳಿರುವ ಅನಿತಾ ಚಿತ್ರರಂಗದಲ್ಲಿ ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಲು ಮುಂದಾದಾಗ ಆಕೆಗೆ ಹಲವು ಕಹಿ ಅನುಭವಗಳಾಗಿವೆ ಎಂದಿದ್ದಾರೆ.

ದಕ್ಷಿಣದಲ್ಲಿ ಕೆಲಸ ಮಾಡುವಾಗ ಕೆಲವರು ಕರೆ ಮಾಡಿ ಆಕೆಯೊಂದಿಗೆ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ನೆನಪು ಮಾಡಿಕೊಂಡಿರುವ ಅನಿತಾ, ಹಲವು ಬಾರಿ ನಾನೇ ಸರಿಯಾದ ಉತ್ತರ ನೀಡಿದ್ದೇನೆ ಎಂದಿದ್ದಾರೆ. ನನ್ನ ಮಾತುಗಳನ್ನು ಕೇಳಿಸಿಕೊಂಡ ನಂತರ ಅವರು ಮತ್ತೆ ಯಾವತ್ತು ಕರೆ ಮಾಡಲಿಲ್ಲ ಎಂದಿದ್ದಾರೆ.

ಮುಂದುವರೆದು ದಕ್ಷಿಣದಲ್ಲಿ ಕೆಲವರು ಅವಕಾಶ ಕೊಡುವ ನೆಪದಲ್ಲಿ ರಾಜಿ ಮಾಡಿಕೊಳ್ಳುವಂತೆ ಕೂಡ ನನ್ನ ಮಗಳಿಗೆ ಹೇಳಿದ್ದರು ಎಂದು ಹೇಳಿರುವ ಅನಿತಾ, ಇನ್ನೊಮ್ಮೆ ಹೀಗೆ ಮಾತನಾಡಿದರೆ, ಹೈದ್ರಾಬಾದ್‌ಗೆ ನಾನೇ ಬಂದು ನಿಮ್ಮ ಕಾಲುಗಳನ್ನು ಮುರಿಯುತ್ತೇನೆ ಎಂದು ನಾನು ಅವಾಜ್ ಹಾಕಿದ್ದೇ ಎಂದಿದ್ದಾರೆ.

ಈಗ ಹಿಂದಿರುಗಿ ನೋಡಿದರೆ ಅವಳು ಚಿತ್ರರಂಗದಿಂದ ಹಿಂದೆ ಸರಿದಿದ್ದು ಒಳ್ಳೆಯದೇ ಆಯ್ತು ಅನ್ನೋದು ನನ್ನ ಅಭಿಪ್ರಾಯ ಎಂದಿರುವ ಅನಿತಾ ಇದೆಲ್ಲದರಿಂದ ಪೂಜಾ ಅಕ್ಷರಶಃ ನಲುಗಿಹೋಗಿದ್ದಳು. ಸರಿಯಾದ ಸಮಯದಲ್ಲಿ ಅವಳ ಬದುಕಿನಲ್ಲಿ ಆಕೆ ಕೈ ಹಿಡಿದ ಹುಡುಗನ ಪ್ರವೇಶವಾಯ್ತು ಎಂದಿದ್ದಾರೆ. ಸದ್ಯ ಅವಳು ಖುಷಿಯಾಗಿದ್ದಾಳೆ, ನೆಮ್ಮದಿಯಿಂದ ಇದ್ದಾಳೆ ಎಂದಿದ್ದಾರೆ. ಮಾತನಾಡುತ್ತಾ ಮಾತನಾಡುತ್ತಾ ಭಾವುಕರಾಗಿದ್ದಾರೆ.

English summary
Veteran actress Anita Kanwal reveals the terrifying casting couch ordeal that shook her daughter Pooja, and why she walked away from stardom to protect her.
Read more about: casting couch me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X