5 ವರ್ಷಕ್ಕೆ ಮುರಿದು ಬಿದ್ದಿತ್ತು ಮೊದಲ ದಾಂಪತ್ಯ ; ನೋವು ಮರೆತು 40ನೇ ವರ್ಷದಲ್ಲಿ 2ನೇ ಮದುವೆಗೆ ಸಿದ್ಧವಾದ ಖ್ಯಾತ ನಟಿ

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು.

ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ. ಕೆಲ ಒಮ್ಮೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ. ಉದಾಹರಣೆಗೆ ಕೀರ್ತಿ ಕುಲ್ಹಾರಿ .

Anjana amp amp Mihir Kirti Kulhari and Rajeev Siddhartha Break the Internet with Official Soulmate Reveal

ಹೌದು, ಕೀರ್ತಿ ಕುಲ್ಲಾರಿ.. ಬಾಲಿವುಡ್‌ನ ಚೆಲುವೆ. ಕಳೆದ 15 ವರ್ಷಗಳಿಂದ ಹಲವಾರು ಚಿತ್ರಗಳಲ್ಲಿ ಮತ್ತು ವೆಬ್ ಸರಣಿಗಳಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಅಸಂಖ್ಯಾತ ಜನರ ಹೃದಯವನ್ನು ಕೂಡ ಗೆದ್ದಿದ್ದಾರೆ.

''ಪಿಂಕ್''.. ''ಇಂಧು ಸರ್ಕಾರ್''.. ''ಉರಿ -ದಿ ಸರ್ಜಿಕಲ್ ಸ್ಟೈಕ್''.. ''ಮಿಷನ್ ಮಂಗಲ್''.. ಇವರು ಅಭಿನಯಿಸಿದ ಕೆಲ ಪ್ರಮುಖ ಚಿತ್ರಗಳು. ಇನ್ನು ''ಕ್ರಿಮಿನಲ್ ಜಸ್ಟಿಸ್''.. ''ಹ್ಯೂಮನ್'' ಮತ್ತು ''ಫೋರ್ ಮೋರ್ ಶಾಟ್ಸ್'' ಇವರ ಜನಪ್ರಿಯ ವೆಬ್ ಸರಣಿಗಳು.

ಅದರಲ್ಲಿಯೂ ವಿಶೇಷವಾಗಿ ''ಫೋರ್ ಮೋರ್ ಶಾಟ್ಸ್'' ಇವರಿಗೆ ಅಪಾರವಾದ ಹೆಸರು-ಕೀರ್ತಿ ತಂದು ಕೊಡ್ತು. 2019ರಿಂದ ಈ ವೆಬ್ ಸರಣಿಯ ಭಾಗವಾಗಿರುವ ಕೃತಿ ಇಲ್ಲಿಯವರೆಗೆ ನಾಲ್ಕು ಸೀಸನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥಾ ಕೀರ್ತಿ ಕುಲ್ಹಾರಿ ಸದ್ಯ ತಮ್ಮನ್ನು ಖ್ಯಾತಿಯ ಶಿಖರಕ್ಕೆ ತಲುಪಿಸಿದ ''ಫೋರ್ ಮೋರ್ ಶಾಟ್ಸ್ ಪ್ಲೀಸ್‌''ನ ಚಿತ್ರೀಕರಣದಲ್ಲಿ ಭಾಗವಹಿಸುತ್ತಲೇ ತಮ್ಮ ಸಹನಟ ರಾಜೀವ್ ಸಿದ್ಧಾರ್ಥಗೆ ಮನ ಸೋತಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದಾರೆ.

ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಸದ್ಯ ಕೀರ್ತಿ ಹೊಸ ವರ್ಷದ ಸಂಭ್ರಮದಲ್ಲಿ ಹಂಚಿಕೊಂಡಿದ್ದಾರೆ. ರಾಜೀವ್ ಸಿದ್ಧಾರ್ಥ ಅವರ ಜೊತೆ ತಾವು ಕಳೆದ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಕೃತಿ ''ಒಂದು ಚಿತ್ರ ಸಾವಿರ ಪದಗಳಿಗೆ ಸಮ'' ಎಂದು ಬರೆದುಕೊಂಡಿದ್ದಾರೆ.

Anjana amp amp Mihir Kirti Kulhari and Rajeev Siddhartha Break the Internet with Official Soulmate Reveal

ಸದ್ಯ ಕೀರ್ತಿ ಕುಲ್ಹಾರಿ ಮತ್ತು ರಾಜೀವ್ ಸಿದ್ಧಾರ್ಥ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನು ನವೆಂಬರ್ 2025ರಲ್ಲಿ ರಾಜೀವ್ ಜೊತೆ ತೀರಾ ಅತ್ಯಾಪ್ತವಾದ ಫೋಟೊಗಳನ್ನು ಕೀರ್ತಿ ಹಂಚಿಕೊಂಡಿದ್ದರು. ಆಗಲೇ ಹಲವರು ಇವರ ಸಂಬಂಧದ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈಗ ಆ ಅನುಮಾನ ದೂರವಾಗಿ. ಅಧಿಕೃತ ಘೋಷಣೆ ಕೂಡ ಹೊರ ಬಿದ್ದಿದೆ.

ಅಂದ್ಹಾಗೇ ಕೀರ್ತಿ ಕುಲ್ಹಾರಿ ಸಾಹಿಲ್ ಸೆಹಗಲ್ ಅವರ ಜೊತೆ ಮದುವೆಯಾಗಿದ್ದರು. ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಹಿನ್ನೆಲೆ ತಡ ಮಾಡದ ಕೀರ್ತಿ ತಮ್ಮ ''ಪಿಂಕ್''ಚಿತ್ರ ಬಿಡುಗಡೆಯಾದ ಬೆನ್ನಲ್ಲೇ 2016ರಲ್ಲಿ ಮದುವೆಯಾಗಿದ್ದರು.

ಆದರೆ..ಈ ಸಂಬಂಧ ಕೇವಲ ಐದೇ ವರ್ಷಕ್ಕೆ ಮುರಿದು ಬಿತ್ತು. 2021ರಲ್ಲಿ ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದ ಇಬ್ಬರು ದೂರವಾದರು. ಪರಸ್ಪರ ಸಮ್ಮತಿಯ ಮೇರೆಗೆ ನಾವು ಇಬ್ಬರು ದೂರವಾಗುತ್ತಿದ್ದೇವೆ ಎಂದು ಹೇಳಿದ್ದ ಕೀರ್ತಿ ಕುಲ್ಹಾರಿ ಇದು ಕೇವಲ ಪೇಪರ್ ಮೇಲೆ (ಡಿವೋರ್ಸ್ ಪತ್ರ ) ಅಲ್ಲ. ನಿಜ ಜೀವನದಲ್ಲಿಯೂ ನಾವು ದೂರವಾಗುತ್ತಿದ್ದೇವೆ ಎಂದು ತಮ್ಮ ವಿಚ್ಚೇದನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈಗ ರಾಜೀವ್ ಸಿದ್ಧಾರ್ಥ ಅವರ ಜೊತೆ ಕೀರ್ತಿ ಕುಲ್ಹಾರಿ ತಮ್ಮ ಬದುಕಿನ ಎರಡನೇ ಇನಿಂಗ್ಸ್ ಶುರು ಮಾಡಲು ಅಣಿಯಾಗಿದ್ದಾರೆ.

More from Filmibeat

English summary
Stop the press! Kirti Kulhari and Rajeev Siddhartha just turned our ‘Four More Shots Please’ dreams into reality. From reel-life chemistry to a real-life soulmate reveal, see the stunning post that has the internet buzzing!
Read more about: love relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X