ಈಗ ಯಾರು ದೈಹಿಕ ಸುಖದ ಬೇಡಿಕೆ ಇಡಲ್ಲ, ಬದಲಿಗೆ.. ; ಚಿತ್ರರಂಗದ ಹೊಸ ಟೆಕ್ನಿಕ್ ಹೇಳಿದ ನಟಿ

ಹೆಣ್ಣು ಮಕ್ಕಳ ಪಾಲಿಗೆ ಚಿತ್ರರಂಗದ ಪ್ರಯಾಣ ಸುಲಭ ಅಲ್ಲ. ಯಾಕೆಂದರೆ ಝಗಮಗ ಗ್ಲಾಮರ್ ಲೋಕದ ಹಿಂದೆ ಇಲ್ಲಿ ಕತ್ತಲಿದೆ. ಕ್ಯಾಮರಾದ ಹಿಂದೆ ವಿಕೃತ ಮನಸ್ಥಿತಿಯ ಹಿಂಡಿದೆ. ಬೆಳ್ಳಿತೆರೆಯ ಮೇಲೆ ಹಲವರು ಇಲ್ಲಿ ಸಬಲೀಕರಣ ಸಮಾನತೆಯ ಪಾಠವನ್ನೇನೋ ಮಾಡುತ್ತಾರೆ. ಆದರೆ ತೆರೆಯ ಹಿಂದೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದಂತೆ ಕಾಡುತ್ತಾರೆ. ಅಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡುತ್ತಾರೆ. ಪಾತ್ರಕ್ಕಾಗಿ ಪಲ್ಲಂಗಕ್ಕೇರುವಂತೆ ಒತ್ತಾಯ ಮಾಡುತ್ತಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ನಾಯಕಿಯರು ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ನಟಿ ಮಣಿಯರಿಗೆ ಮೊದಲಿನಂತೆ ಪಾತ್ರದ ಹೆಸರಿನಲ್ಲಿ ಖೆಡ್ಡಾ ತೋಡಲಾಗುತ್ತಿಲ್ಲ. ಬದಲಿಗೆ ತುಂಬಾನೇ ಪ್ಲಾನ್ಡ್ ಆಗಿ ಹಲವರು ತಮ್ಮ ದೈಹಿಕ ವಾಂಛೆಯನ್ನು ಇಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ಹೀಗಂಥ ನಾವು ಅಲ್ಲ. ಬದಲಿಗೆ ಖ್ಯಾತ ನಟಿ ಅಂಜನಾ ಸಿಂಗ್ ಅವರೇ ಹೇಳಿದ್ದಾರೆ.

anjana-singh-exposes-the-new-face-of-casting-couch

ಭೋಜ್‌ಪುರಿಯ ಬಾಕ್ಸಾಫೀಸ್‌ ಕ್ವೀನ್ ಈ ಅಂಜನಾ

ಹೌದು, ಅರ್ಚನಾ ಸಿಂಗ್.. ಲಕ್ನೋದ ಲಡ್ಕಿ. ಭೋಜ್‌ಪುರಿ ಚಿತ್ರರಂಗದ ಬೆಡಗಿ. ಕೇವಲ 21ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಅಂಜನಾ ಮೊದಲ ಚಿತ್ರದಲ್ಲಿಯೇ ಭೋಜ್‌ಪುರಿಯ ಸೂಪರ್ ಸ್ಟಾರ್ ರವಿ ಕಿಶನ್ ಜೊತೆ ತೆರೆ ಹಂಚಿಕೊಂಡರು. ಚಿತ್ರ ರಸಿಕರ ಹೃದಯ ಗೆದ್ದರು.

ಇನ್ನು ಇವರ ಅಂದ ಚೆಂದ ಮತ್ತು ಅಭಿನಯ, ಭೋಜ್‌ಪುರಿಯಲ್ಲಿ ಮಾಡಿದ್ದ ಮೋಡಿ ಹೇಗಿತ್ತು ಅಂದರೆ ವೃತ್ತಿ ಬದುಕಿನ ಆರಂಭದ ಕೇವಲ ಎರಡು ವರ್ಷದಲ್ಲಿ 25 ಚಿತ್ರಗಳನ್ನು ಒಪ್ಪಿಕೊಂಡಿದ್ದರು ಅಂಜನಾ ಸಿಂಗ್. ನಿರ್ಮಾಪಕರು ಇವರ ಮನೆ ಎದುರು ಸರತಿ ಸಾಲಿನಲ್ಲಿ ನಿಂತ ಕಾಲ ಅದು. ಭೋಜ್‌ಪುರಿ ಚಿತ್ರರಂಗದಲ್ಲಿ ನಾಯಕಿಯೊಬ್ಬಳು, ಇಷ್ಟೊಂದು ಚಿತ್ರಗಳನ್ನು ಕೇವಲ ಎರಡು ವರ್ಷದಲ್ಲಿ ಒಪ್ಪಿಕೊಂಡ ಉದಾಹರಣೆಗಳಿಲ್ಲ.

''ರಾಜಾ ಜಿ ಐ ಲವ್ ಯೂ''.. ''ಬಿಹಾರಿ ರಿಕ್ಷಾವಾಲಾ''.. ''ತ್ರಿಶೂಲ್''.. ''ಲಾ ಕರೇ ಲೀಲಾ''.. ''ನಾಗರಾಜ್''.. ''ಗುಂಡಾ''.. ಹೀಗೆ ಒಂದಾ, ಎರಡಾ, ಹಲವು ಬ್ಲಾಕ್‌ ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿರುವ ಅಂಜನಾ ಭೋಜ್‌ಪುರಿಯ ಸೂಪರ್ ಸ್ಟಾರ್ ಗಳಾದ ದಿನೇಶ್ ಲಾಲ್ ಯಾದವ್.. ಪವನ್ ಸಿಂಗ್.. ಖೇಸರಿ ಲಾಲ್ ಯಾದವ್.. ಅವರಿಗೆ ಆಗೆಲ್ಲ ಖಾಯಂ ನಾಯಕಿ.

ಇಂಥಾ ಅಂಜನಾ ಸಿಂಗ್ ಸದ್ಯ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ಧಾರೆ. ಬದಲಾದ ಕಾಲದಲ್ಲಿ ಭಾವನಾತ್ಮಕ ಸಂಬಂಧದ ಅಡಿಪಾಯದ ಮೇಲೆ ಅವಕಾಶದ ಮಹಲಿರುತ್ತೆ ಎಂದಿದ್ಧಾರೆ.

anjana-singh-exposes-the-new-face-of-casting-couch

ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು ಅಂಜನಾ ಸಿಂಗ್ ?

ಈ ಕುರಿತು ''ಸ್ಮೈಲ್ ಅಂಡ್ ಟಾಕ್ ವಿತ್ ಆಯುಷ್'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಂಜನಾ ಸಿಂಗ್, ನಾನು ಯಾವತ್ತು ರಾಜಿಯಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ಎದುರು ಯಾರು ಅಸಭ್ಯವಾದ ಬೇಡಿಕೆ ಇಟ್ಟಿಲ್ಲ ಎಂದಿದ್ಧಾರೆ.

ಇನ್ನು ಈ ಹಿಂದೆ ಭೋಜ್‌ಪುರಿಯ ಸೂಪರ್ ಸ್ಟಾರ್ ಖೇಸರಿ ಲಾಲ್ ಯಾದವ್, ವಿವಾದಾತ್ಮಕವಾದ ಹೇಳಿಕೆ ನೀಡಿದ್ದರು.''ಪ್ರತಿಯೊಬ್ಬರು ಇಲ್ಲಿ ಕಾಸ್ಟಿಂಗ್ ಕೌಚ್ ಇದೆ ಎನ್ನುತ್ತಾರೆ. ಆದರೆ ನನಗೆ ಆ ಅನುಭವ ಆಗಿದೆ ಎಂದು ಮಾತ್ರ ಯಾರು ಒಪ್ಪಿಕೊಳ್ಳಲ್ಲ ಎನ್ನುವ ಹೇಳಿಕೆ ಅದು.

ಖೇಸರಿ ಲಾಲ್ ಯಾದವ್ ಅವರ ಇದೇ ಹೇಳಿಕೆಯ ಕುರಿತು ಅಭಿಪ್ರಾಯ ಕೇಳಿದಾಗ ನಸು ನಕ್ಕಿರುವ ಅಂಜನಾ, ಅವರ ಉದ್ದೇಶ ಸರಿ ಇರುತ್ತೆ, ಆದರೆ ಅವರ ಮಾತು ಒರಟು ಹೀಗಾಗಿ ಅವರ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತೆ ಎಂದಿದ್ದಾರೆ.

ಮುಂದುವರೆದು ಕಾಸ್ಟಿಂಗ್ ಕೌಚ್‌ನ ಸ್ವರೂಪ ಈಗ ಬದಲಾಗಿದೆ ಎಂದು ಹೇಳಿರುವ ಅಂಜನಾ ಸಿಂಗ್, ಬದಲಾದ ಈ ಕಾಲದಲ್ಲಿ ಹಲವರು ಪ್ರೀತಿ-ಪ್ರೇಮದ ಹೆಸರಿನಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ ಎಂದಿದ್ಧಾರೆ.

ನೋಡುಗರಿಗೆ ಅದು ಪ್ರೀತಿಯಂತೆ ಕಾಣಿಸುತ್ತೆ, ಆದರೆ ವಾಸ್ತವದಲ್ಲಿ ಕಥೆ ಬೇರೆಯದ್ದೇ ಇರುತ್ತೆ ಎಂದು ಹೇಳಿರುವ ಅಂಜನಾ, ಈ ಹಿಂದೆ ಪಾತ್ರದ ಬದಲು ದೈಹಿಕ ಸಂಪರ್ಕ ಬಯಸುತ್ತಿದ್ದರು. ಆದರೆ ಈಗ "ಐ ಲವ್ ಯೂ" ಎಂದು ಹೇಳಿದರೆ ಆಯ್ತು. ಅದರರ್ಥ ಎಲ್ಲಿಯವರೆಗೆ ಪ್ರಭಾವಿ ವ್ಯಕ್ತಿಗಳಿಗೆ ನಿಮ್ಮ ಮೇಲೆ ಪ್ರೀತಿ ಇರುತ್ತೋ ಅಲ್ಲಿಯವರೆಗೆ ಅವಕಾಶಗಳ ಹೆಬ್ಬಾಗಿಲು ತೆರೆದಿರುತ್ತೆ. ಆದರೆ ಅದೇ ಪ್ರೀತಿ ಉಸಿರು ಚೆಲ್ಲಿದರೆ, ನಿಮ್ಮ ವೃತ್ತಿ ಬದುಕು ಬಹುತೇಕ ಮುಗಿದಂತೆಯೇ. ಈ ಒತ್ತಡದಲ್ಲಿ ಹಲವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಪ್ರೀತಿಸುವ ಡ್ರಾಮಾ ಮಾಡುತ್ತಾರೆ. ಅವರ ಕೆಲಸ ಮುಗಿದ ಮೇಲೆ ಕೆಲಸ ಇರುವುದಿಲ್ಲ ಅಷ್ಟೇ ಎಂದಿದ್ಧಾರೆ ಅಂಜನಾ ಸಿಂಗ್. ಸದ್ಯ ಅಂಜನಾ ಸಿಂಗ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಚಿತ್ರರಂಗದಲ್ಲಿ ಕೂಡ ಚರ್ಚೆಗೀಡಾಗಿವೆ.

English summary
Bhojpuri star Anjana Singh addresses the reality of the casting couch in cinema and explains how relationships are now being used to secure film roles.
Read more about: casting couch actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X