ಸುಶಾಂತ್ ಬಗ್ಗೆ ಕಂಗನಾ ರಣೌತ್ ಬಳಿ ಗುಟ್ಟು ಹೇಳಿದ್ದರಂತೆ ಮಾಜಿ ಪ್ರೇಯಸಿ
ಸುಶಾಂತ್ ಸಾವಿನ ಬಳಿಕ ಕಂಗನಾ ರಣೌತ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ನ ಹುಳುಕುಗಳನ್ನು ತೆರೆದಿಡುವುದಾಗಿ ಹೇಳಿ, ಹಲವರ ಮೇಲೆ ಸಾಲು-ಸಾಲು ಆರೋಪಗಳನ್ನು ಮಾಡಿದ್ದಾರೆ ಕಂಗನಾ.
Recommended Video
ಕಂಗನಾ ರಣೌತ್ ಸುಶಾಂತ್ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ಸುಶಾಂತ್ ವೈಯಕ್ತಿಕ ವಿಷಯಗಳ ಬಗ್ಗೆ ಸುಶಾಂತ್‌ನ ಮಾಜಿ ಪ್ರೇಯಸಿ ನನ್ನ ಬಳಿ ಹೇಳಿದ್ದರು ಎಂದಿದ್ದಾರೆ ಕಂಗನಾ.
ಅಂಕಿತಾ ಲೋಕಂಡೆ ಮತ್ತು ಸುಶಾಂತ್ ಬಹುಕಾಲ ಗೆಳೆಯರಾಗಿದ್ದರು. ಇಬ್ಬರೂ ಮದುವೆಯಾಗುವ ನಿಶ್ಚಯ ಮಾಡಿದ್ದರು ಆದರೆ ನಂತರ ಬೇರಾದರು.
ಸುಶಾಂತ್ ಸಿಂಗ್ ಅವರ ಮಾಜಿ ಪ್ರೇಯಸಿ ನಟಿ ಅಂಕಿತಾ ಲೋಕಂಡೆ ಸುಶಾಂತ್ ಬಗ್ಗೆ ಹಲವಾರು ವಿಷಯಗಳನ್ನು ಕಂಗನಾ ರಣೌತ್ ಬಳಿ ಹಂಚಿಕೊಂಡಿದ್ದರಂತೆ. ಕಂಗನಾ ಹಾಗೂ ಅಂಕಿತಾ ಲೋಕಂಡೆ ಒಟ್ಟಿಗೆ ಮಣಿಕರ್ಣಿಕಾ ಸಿನಿಮಾದಲ್ಲಿ ನಟಿಸಿದ್ದರು.

ಬಹಳ ಸೂಕ್ಷ್ಮ ಮನಸ್ಸಿನ ಸುಶಾಂತ್
ಸುಶಾಂತ್ ಎಂಥಹಾ ವ್ಯಕ್ತಿಯಾಗಿದ್ದ ಎಂಬುದನ್ನು ಅಂಕಿತಾ ನನ್ನ ಬಳಿ ಹೇಳಿದ್ದರು. ಆತ ಬಹಳ ಸೂಕ್ಷ್ಮ ಮನಸ್ಸಿನವನಾಗಿದ್ದ, ಆತ ದಪ್ಪ ಚರ್ಮದವನಾಗಿರಲಿಲ್ಲವೆಂದು ಅಂಕಿತಾ ನನ್ನ ಬಳಿ ಹೇಳಿದ್ದರು ಎಂದಿದ್ದಾರೆ ಕಂಗನಾ.

ಸುಶಾಂತ್ ಅನ್ನು ಅಪಮಾನಿಸಲಾಗಿತ್ತು: ಕಂಗನಾ
ಸುಶಾಂತ್ ಅನ್ನು ಸಾಕಷ್ಟು ಅಪಮಾನಿತನನ್ನಾಗಿಸಲಾಗಿತ್ತಂತೆ. ಎಷ್ಟರ ಮಟ್ಟಿಗೆ ಆತನಿಗೆ ಅವಮಾನ ಮಾಡಲಾಗಿತ್ತೆಂದರೆ ಆತನಿಂದ ತಡೆದುಕೊಳ್ಳಲಾಗಲಿಲ್ಲ, ಆತ ಸಾಕಷ್ಟು ನಿರಾಕರಣೆಗಳನ್ನು ಆರಂಭದಲ್ಲಿ ಎದುರಿಸಿದ್ದ ಅದೆಲ್ಲಾ ಸೇರಿ ಆತ ತಪ್ಪು ನಿರ್ಣಯ ತೆಗೆದುಕೊಳ್ಳುವಂತೆ ಮಾಡಿತು ಎಂದು ಅಂಕಿತಾ ಲೋಕಂಡೆ, ಕಂಗನಾ ಬಳಿ ಹೇಳಿದ್ದರಂತೆ.

ಟ್ವಿಟ್ಟರ್ ಸುದ್ದಿಗಳಿಗೆ ಬೇಸರಗೊಳ್ಳುತ್ತಿದ್ದ ಸುಶಾಂತ್
ಆತ ಬಹಳ ಸೂಕ್ಷ್ಮ ಮನಸ್ಸಿನವನಾಗಿದ್ದ ಎಷ್ಟರ ಮಟ್ಟಿಗೆಂದರೆ ಆರಂಭದಲ್ಲಿ ಯಾರಾದರೂ ಆತನ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದರೂ ಸಹ ಅದಕ್ಕೆ ಪ್ರತಿಕ್ರಿಯಿಸಿ ಸಮಜಾಯಿಷಿ ಕೊಡುತ್ತಿದ್ದ, ಟ್ವಿಟ್ಟರ್‌ನಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಬಗ್ಗೆಯೂ ಆತ ಸಾಕಷ್ಟು ಯೋಚನೆ ಮಾಡುತ್ತಲಿರುತ್ತಿದ್ದ' ಎಂದು ಅಂಕಿತಾ ತಮ್ಮ ಬಳಿ ಹೇಳಿದ್ದಾಗಿ ಕಂಗನಾ ಮಾಧ್ಯಮಗಳಿಗೆ ಹೇಳಿದ್ದಾರೆ.

ಸುಶಾಂತ್ ಕಂಗನಾ ಗೆ ಹೋಲಿಕೆ ಇದೆಯಂತೆ
ಸುಶಾಂತ್ ಸಾಕಷ್ಟು ಮೃದು ಮನಸ್ಸಿನ ವ್ಯಕ್ತಿಯಾಗಿದ್ದರಂತೆ ಸುಶಾಂತ್ ಬಹುತೇಕ ನಿಮ್ಮಂತೆಯೇ ಇದ್ದ ಎಂದು ಅಂಕಿತಾ ಕಂಗನಾಗೆ ಹೇಳಿದ್ದರಂತೆ. ಆದರೆ ಸುಶಾಂತ್ ಗೆ ಹೋರಾಟದ ಮನೋಭಾವ ಇರಲಿಲ್ಲವೆಂದು ಕಂಗನಾ ಹೇಳಿದ್ದಾರೆ.


Click it and Unblock the Notifications











