For Quick Alerts
  ALLOW NOTIFICATIONS  
  For Daily Alerts

  ಮಾಜಿ ಪ್ರೇಯಸಿ ಅಂಕಿತಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ EMI ಕಟ್ಟುತ್ತಿದ್ರಾ ಸುಶಾಂತ್ ಸಿಂಗ್?

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರು ಹಾಗೂ ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ. ಸುಶಾಂತ್ ಸಿಂಗ್ ಖಾತೆಯಿಂದ ರಿಯಾ ಚಕ್ರವರ್ತಿಗೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

  ಈ ನಡುವೆ ಈಗ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರಿಗೂ ಸುಶಾಂತ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎನ್ನುವ ವರದಿಯಾಗಿದೆ. ಅಂಕಿತಾ ವಾಸುತ್ತಿದ್ದ ಅಪಾರ್ಟ್ ಮೆಂಟ್ ನ ಇಎಂಐ ಬಿಲ್ 4.5 ಕೋಟಿ ಸುಶಾಂತ್ ಸಿಂಗ್ ಖಾತೆಯಿಂದ ಕಟ್ಟಾಗುತ್ತಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿ ತಿಳಿಸಿದ್ದಾರೆ ಎಂದು ಸುದ್ದಿಯಾಗಿದೆ.

  ಸುಶಾಂತ್ ಡೈರಿ ಬಿಚ್ಚಿಟ್ಟ ಸತ್ಯ: 2020ರಲ್ಲಿ ಅಭಿಮಾನಿಗಳಿಗೆ ಕಾದಿತ್ತು ಸರ್ಪ್ರೈಸ್

  ಈ ಸುದ್ದಿಯನ್ನು ತಳ್ಳಿಹಾಕಿರುವ ಅಂಕಿತಾ, ತನ್ನ ಅಪಾರ್ಟ್ ಮೆಂಟ್ ಡೀಟೈಲ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ಲಾಟ್ ನೋಂದಣಿ ಮತ್ತು ಇಎಂಐ ಕಡಿತಗಳ ವಿವರಗಳನ್ನು ಶೇರ್ ಮಾಡಿದ್ದಾರೆ.

  ಇಲ್ಲಿ ನಾನು ಎಲ್ಲಾ ವದಂತಿಗಳಿಗೆ ತೆರೆ ಎಳೆಯುತ್ತೇನೆ. ನಾನು ಸಾಧ್ಯವಾದಷ್ಟು ಪಾರದರ್ಶಕವಾಗಿರುತ್ತೇನೆ. ನನ್ನ ಫ್ಲಾಟ್ ನೋಂದಣಿ ಮತ್ತು ನನ್ನ ಬ್ಯಾಂಕ್ ಸ್ಟೇಟ್ಮೆಂಟ್ ಇದು. ತಿಂಗಳ ಇಎಂಐ ನನ್ನ ಖಾತೆಯಿಂದ ಕಡಿತಕೊಂಡಿದೆ ನೋಡಿ. ನಾನು ಹೆಚ್ಚಿನದ್ದನ್ನು ಹೇಳಬೇಕಿಲ್ಲ. #justisceforssr" ಎಂದು ಬರೆದು ಇಎಂಐ ಡೀಟೈಲ್ಸ್ ಅನ್ನು ಶೇರ್ ಮಾಡಿದ್ದಾರೆ.

  ಇಡಿ ಅಧಿಕಾರಿಗಳು ಸುಶಾಂತ್ ಸಿಂಗ್ ಸ್ನೇಹಿತರನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ಮುಂದಿನ ವಾರ ಸುಶಾಂತ್ ಸಿಂಗ್ ಕುಟುಂಬದವರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

  English summary
  Ankita Lokhande claims Sushant Singh paid her flat EMI. Ankita Lokhande shares at her flat registration bank details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X