ಪಾತ್ರಕ್ಕಾಗಿ ಪಲ್ಲಂಗ ; ದಕ್ಷಿಣದ ಆ ನಿರ್ಮಾಪಕ ನನ್ನ ರೂಮಿಗೆ ಕರೆದಿದ್ದ ಎಂದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ..!
ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಅಂಕಿತಾ ಲೋಖಂಡೆ ಲೇಟೆಸ್ಟ್ ಎಕ್ಸಾಂಪಲ್.
ಹೌದು, ಅಂಕಿತಾ ಲೋಖಂಡೆ ಹಿಂದಿ ಕಿರುತೆರೆಯ ಬಹುದೊಡ್ಡ ಹೆಸರು. ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿಯೂ ಹೌದು. ಹಿಂದಿಯ ಬಿಗ್ ಬಾಸ್ ಗೆ ತನ್ನ ಗಂಡನ ಜೊತೆ ತೆರಳಿ, ಸಾಂಸಾರಿಕ ಜೀವನವನ್ನೇ ಪಣಕ್ಕಿಟ್ಟಿದ್ದ ಅಂಕಿತಾ, ಒಂದ್ಕಾಲದಲ್ಲಿ ತನ್ನನ್ನೂ ಮಂಚಕ್ಕೆ ಕರೆದಿದ್ದರು ಎಂದಿದ್ದಾರೆ. ಹಾಸಿಗೆ ಹಂಚಿಕೊಳ್ಳಲು ಉತ್ತರದವರು ಅಲ್ಲ ಬದಲಿಗೆ ದಕ್ಷಿಣದವರು ಹೇಳಿದ್ದರು ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಂಕಿತಾ,ದಕ್ಷಿಣ ಭಾರತದ ಸಿನಿಮಾ ಒಂದರ ಆಡಿಷನ್ ಮುಂಬೈನಲ್ಲಿ ನಡೆದಿತ್ತು. ನಾನು ಅದರಲ್ಲಿ ಭಾಗವಹಿಸಿದ್ದೆ. ಕೆಲವೇ ದಿನಗಳಲ್ಲಿ ನನಗೆ ಕರೆ ಬಂತು. ನೀವು ಆಯ್ಕೆ ಆಗಿದ್ದೀರ ಎಂದರು. ಎಷ್ಟು ಸುಲಭವಾಗಿ ಆಗಿಬಿಟ್ಟಿತಲ್ಲ ಎಂದು ಖುಷಿ ಪಟ್ಟಿದ್ದೆ ಎಂದು ಆ ದಿನಗಳನ್ನ ಮೆಲುಕು ಹಾಕಿದ್ದಾರೆ.
ಮುಂದುವರೆದು ಮಾತನಾಡಿರುವ ಅಂಕಿತಾ, ಆ ನಂತರ ನನ್ನನ್ನು ಮುಂಬೈನ ಜುಹುನಲ್ಲಿನ ಐಶಾರಾಮಿ ಹೋಟೆಲ್ಗೆ ಬರಲು ಹೇಳಿದರು. ಅಲ್ಲಿ ಅಡ್ವಾನ್ಸ್ ಹಣ ನೀಡುವುದಾಗಿ ಹೇಳಿದ್ದರು. ನಾನು ಅಲ್ಲಿಗೆ ಹೋದಾಗ ಈ ಪಾತ್ರ ನಿಮಗೆ ಸಿಗಬೇಕೆಂದರೆ ರಾಜಿ ಮಾಡಿಕೊಳ್ಳಬೇಕು ಎಂದರು. ನಮ್ಮ ನಿರ್ಮಾಪಕರ ಜೊತೆ ಮಲಗಬೇಕು ಎಂದರು ಎಂದು ಆ ದಿನ ಹಾಗೂ ಆ ಕ್ಷಣವನ್ನ ನೆನಪು ಮಾಡಿಕೊಂಡಿದ್ದಾರೆ.

ಆ ನಂತರ ನಿಮ್ಮ ನಿರ್ಮಾಪಕರಿಗೆ ಪ್ರತಿಭೆ ಬೇಕಿಲ್ಲ, ಅವರಿಗೆ ಬೇಕಾಗಿರುವುದು ಅವರೊಟ್ಟಿಗೆ ಮಲಗಲು ಒಬ್ಬ ಯುವತಿ ಅಷ್ಟೇ, ಆದರೆ ಅಂಥಹಾ ಯುವತಿ ನಾನಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಬಿಟ್ಟೆ ಎಂದಿದ್ದಾರೆ ಅಂಖಿತಾ ಲೋಕಂಡೆ.

ಇನ್ನೂ ಈ ಘಟನೆಯಿಂದ ತಾನು ಸಂಪೂರ್ಣ ಕುಗ್ಗಿ ಹೋದೆ ಎಂದು ಹೇಳಿರುವ ಅಂಕಿತಾ, ಸಿನಿಮಾ ರಂಗದ ಬದಲು ನಾನು ಕಿರುತೆರೆಯನ್ನ ಆಯ್ಕೆ ಮಾಡಿಕೊಳ್ಳಲು ಇದೇ ಪ್ರಮುಖ ಕಾರಣ ಅಂದಿದ್ದಾರೆ. ನಾನು ಯಾರ ಜೊತೆ ಮಲಗಬೇಕು ಎಂಬುದು ನನ್ನ ಹಕ್ಕು ಅದನ್ನು ಬೇರೊಬ್ಬರು ಹೇಗೆ ನಿರ್ಧಾರ ಮಾಡ್ತಾರೆ. ಎಂದಿರುವ ಅಂಕಿತಾ ಅದೇ ದಿನ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಸಹ ನಿರ್ಧಾರ ಮಾಡಿದೆ. ಟಿವಿ ಕಡೆಗೆ ಗಮನ ಹರಿಸಿದೆ' ಎಂದಿದ್ದಾರೆ. ಇಷ್ಟೆಲ್ಲ ಹೇಳಿರುವ ಅಂಕಿತಾ ಆ ಖ್ಯಾತ ನಿರ್ಮಾಪಕ ಯಾರು, ಅದ್ಯಾವ ಸಿನಿಮಾ ಏನು ಕಥೆ ಎಂಬುದನ್ನು ಮಾತ್ರ ರಹಸ್ಯವಾಗಿಯೇ ಉಳಿಸಿಕೊಂಡಿದ್ದಾರೆ. ಅಂದ್ಹಾಗೇ ಅಂಕಿತಾ ಲೋಖಂಡೆ ಗೆ ಈ ಅನುಭವ ಆದಾಗ ಅವರ ವಯಸ್ಸು ಕೇವಲ 19 ಅಷ್ಟೇ.


Click it and Unblock the Notifications











