ನಿರ್ಮಾಪಕನೊಂದಿಗೆ ಮಲಗಲು ಹೇಳಿದ್ದರು: ಕೆಟ್ಟ ಅನುಭವ ಬಿಚ್ಚಿಟ್ಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ

ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ, ನಟಿ ಅಂಕಿತಾ ಲೋಖಂಡೆ, ತಾವು ಎದುರಿಸಿದ ಪಾತ್ರಕ್ಕೆ ಪಲ್ಲಂಗ (ಕಾಸ್ಟಿಂಗ್ ಕೌಚ್) ಅನುಭವಗಳ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

19-20 ರ ವಯಸ್ಸಿನಲ್ಲಿಯೇ ನಟನಾ ವೃತ್ತಿಗೆ ಬಂದ ಅಂಕಿತಾ ಲೋಖಂಡೆ ಆರಂಭದಲ್ಲಿಯೇ ಸಿನಿಮಾರಂಗದಿಂದ ಕೆಟ್ಟ ಅನುಭವ ಪಡೆದರಂತೆ. ಅದೂ ದಕ್ಷಿಣ ಭಾರತ ಸಿನಿಮಾರಂಗದಿಂದ.

ವೃತ್ತಿ ಜೀವನದ ಆರಂಭದಲ್ಲಿ ದಕ್ಷಿಣ ಭಾರತ ಚಿತ್ರರಂಗದಿಂದ ಅಂಕಿತಾಗೆ ಅವಕಾಶ ಅರಸಿ ಬಂತಂತೆ. ಆ ಸಿನಿಮಾಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಅಂಕಿತಾರನ್ನು ಹೋಟೆಲ್‌ಗೆ ಬರಲು ಹೇಳಿದನಂತೆ. ಅಂತೆಯೇ ಅಂಕಿತಾ ಸಹ ಹೋಗಿದ್ದಾರೆ. ಮಾತು ಆರಂಭಿಸಿದ ಆ ವ್ಯಕ್ತಿ 'ನೀವು ಕೆಲವು 'ಕಾಂಪ್ರಮೈಸ್‌'ಗಳನ್ನು ಮಾಡಿಕೊಳ್ಳಬೇಕಾಗುತ್ತದೆ' ಎಂದಿದ್ದಾರೆ.

'ಕಾಂಪ್ರಮೈಸ್ ಎಂದರೆ ಹೇಗೆ, ಪಾರ್ಟಿಗಳಿಗೆ, ಡಿನ್ನರ್‌ಗಳಿಗೆ ಹೋಗಬೇಕಾಗುತ್ತದೆಯೇ?' ಎಂದು ಅಮಾಯಕವಾಗಿ ಪ್ರಶ್ನಿಸಿದ್ದಾರೆ ಅಂಕಿತಾ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ, 'ನಮ್ಮ ನಿರ್ಮಾಪಕರ ಜೊತೆ ಮಲಗಬೇಕು' ಎಂದು ಹೇಳಿದರಂತೆ.

ಚೆನ್ನಾಗಿ ಬೈದು ಅಲ್ಲಿಂದ ಹೊರಬಂದ ಅಂಕಿತಾ

ಚೆನ್ನಾಗಿ ಬೈದು ಅಲ್ಲಿಂದ ಹೊರಬಂದ ಅಂಕಿತಾ

''ಆ ವ್ಯಕ್ತಿ ತನ್ನ ಮಾತು ಮುಗಿಸುತ್ತಿದ್ದಂತೆ ಆತನನ್ನು ಚೆನ್ನಾಗಿ ಬೈದು ಬಿಟ್ಟೆ. ನಿಮ್ಮ ನಿರ್ಮಾಪಕನಿಗೆ ಬೇಕಾಗಿರುವುದು ಪ್ರತಿಭಾವಂತ ನಟಿ ಅಲ್ಲ ಬದಲಿಗೆ ಪಕ್ಕದಲ್ಲಿ ಮಲಗಿಕೊಳ್ಳಲು ಹುಡುಗಿ ಅಷ್ಟೆ ಎಂದೆಲ್ಲಾ ಬೈದು ಅಲ್ಲಿಂದ ಹೊರಗೆ ಬಂದೆ'' ಎಂದಿದ್ದಾರೆ ಅಂಕಿತಾ.

ಬಾಲಿವುಡ್‌ನಲ್ಲಿಯೂ ಕೆಟ್ಟ ಅನುಭವ

ಬಾಲಿವುಡ್‌ನಲ್ಲಿಯೂ ಕೆಟ್ಟ ಅನುಭವ

ಬಾಲಿವುಡ್‌ನಲ್ಲಿಯೂ ತಾವು ಎದುರಿಸಿದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ ಅಂಕಿತಾ ಲೋಖಂಡೆ. 'ಆಗಿನ ಸ್ಟಾರ್ ನಟನೊಬ್ಬ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ. ಅಂದು ಆತ ನನ್ನ ಕೈಕುಲುಕಿದ ಅಷ್ಟಕ್ಕೆ ನನಗೆ ಆತನ ಉದ್ದೇಶ ಅರ್ಥವಾಯಿತು. ಕೂಡಲೇ ಆತನಿಂದ ನನ್ನ ಕೈ ಬಿಡಿಸಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆ' ಎಂದಿದ್ದಾರೆ ಅಂಕಿತಾ.

'ಪವಿತ್ರ ರಿಶ್ತಾ' ನಲ್ಲಿ ನಟಿಸಿದ್ದ ಅಂಕಿತಾ-ಸುಶಾಂತ್

'ಪವಿತ್ರ ರಿಶ್ತಾ' ನಲ್ಲಿ ನಟಿಸಿದ್ದ ಅಂಕಿತಾ-ಸುಶಾಂತ್

ಅಂಕಿತಾ ಲೋಖಂಡೆ ಕೆಲವು ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದ 'ಪವಿತ್ರ ರಿಶ್ತಾ' ಧಾರಾವಾಹಿ ಅಂಕಿತಾಗೆ ಹೆಸರು ತಂದುಕೊಟ್ಟಿತು. ಇದೇ ಧಾರಾವಾಹಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಹ ನಟಿಸುತ್ತಿದ್ದರು.

Recommended Video

Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada
ಆರು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಸುಶಾಂತ್-ಅಂಕಿತಾ

ಆರು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಸುಶಾಂತ್-ಅಂಕಿತಾ

ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಲೋಖಂಡೆ ಇಬ್ಬರೂ ಆರು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಸುಮಾರು ಮೂರು ವರ್ಷ ಲಿವಿನ್‌ ರಿಲೇಶನ್‌ನಲ್ಲಿ ಸಹ ಇದ್ದರು. ಈ ಇಬ್ಬರೂ ದೂರಾಗಿದ್ದು ದೊಡ್ಡ ಸುದ್ದಿಯೇ ಆಗಿತ್ತು. ಅಂಕಿತಾ ಲೋಖಂಡೆ ಈಗ ವಿಕ್ಕಿ ಜೈನ್ ಎಂಬುವರೊಟ್ಟಿಗೆ ಪ್ರೀತಿಯಲ್ಲಿದ್ದಾರೆ.

More from Filmibeat

English summary
Actress Ankita Lokhande opens up about casting couch experience she witnessed in south Indian movie industry and Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X