ನಿರ್ದೇಶಕ ವಿಕಾಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ.!

ಲೈಂಗಿಕ ಕಿರುಕುಳದ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದ ಮೇಲೆ ಬಾಲಿವುಡ್ ನಲ್ಲಿ ನಟಿಯರು ಒಬ್ಬೊಬ್ಬರಾಗಿಯೇ ತಮ್ಮ 'ಕೆಟ್ಟ' ಅನುಭವವನ್ನು ಹೊರಹಾಕುತ್ತಿದ್ದಾರೆ. ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ತನುಶ್ರೀ ದತ್ತಾ ಬಾಂಬ್ ಸಿಡಿಸಿದ್ಮೇಲೆ, ನಿರ್ದೇಶಕ ವಿಕಾಶ್ ಬಾಹ್ಲ್ ವಿರುದ್ಧ ನಟಿ ಕಂಗನಾ ರಣೌತ್ ಗುಡುಗಿದರು.

''ನನ್ನನ್ನ ಬಿಗಿದಪ್ಪಿ ''ನನಗೆ ನಿನ್ನ ಸ್ಮೆಲ್ ಕಂಡ್ರೆ ಇಷ್ಟ'' ಎಂದು ವಿಕಾಸ್ ಹೇಳುತ್ತಿದ್ದರು. ಆತನ ಅಪ್ಪುಗೆಯಿಂದ ಬಿಡಿಸಿಕೊಳ್ಳಲು ನಾನು ಹೆಣಗಾಡಬೇಕಿತ್ತು. ಆತನಲ್ಲಿ ಏನೋ ಸಮಸ್ಯೆ ಇದೆ'' ಅಂತ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಕಂಗನಾ ಹೇಳಿಕೆ ಕೊಟ್ಟರು.

ಇದೀಗ ಅದೇ ವಿಕಾಸ್ ಬಾಹ್ಲ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ''ಕುಡಿದು ತೂರಾಡುವಂತೆ ನಾಟಕ ಆಡುವ ವಿಕಾಸ್, ನನ್ನ ತುಟಿಗೆ ಮುತ್ತಿಡಲು ಪ್ರಯತ್ನಿಸಿದ್ದರು'' ಎಂದು ನಟಿಯೊಬ್ಬರು ಹೇಳಿದ್ದಾರೆ. ಮುಂದೆ ಓದಿರಿ...

ಮುತ್ತು ಕೊಡಲು ಯತ್ನ

ಮುತ್ತು ಕೊಡಲು ಯತ್ನ

''ಒಮ್ಮೆ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಏನಿಲ್ಲ ಅಂದರೂ 20 ಜನ ಇದ್ದರು. ಕುಡಿದ ನಶೆಯಲ್ಲಿ (ನಾಟಕ ಆಗಿರಬಹುದು) ಒತ್ತಾಯ ಪೂರ್ವಕವಾಗಿ ನನ್ನ ತುಟಿಗೆ ಮುತ್ತು ಕೊಡಲು ವಿಕಾಸ್ ಪ್ರಯತ್ನಿಸಿದರು. ನಾನು ಆತನನ್ನು ತಳ್ಳಿ ಆ ಜಾಗದಿಂದ ಹೊರಗೆ ಬಂದೆ'' ಎಂದು ಹೆಸರು ಹೇಳಲು ಇಚ್ಛಿಸದ ನಟಿಯೊಬ್ಬರು 'ಮಿಸ್ ಮಾಲಿನಿ'ಗೆ ಕೊಟ್ಟ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾಟಕ ಆಡುವುದೇ ಸ್ಟ್ರಾಟೆಜಿ

ನಾಟಕ ಆಡುವುದೇ ಸ್ಟ್ರಾಟೆಜಿ

''ಕುಡಿದ ನಶೆಯಲ್ಲಿ ತೇಲಾಡುವಂತೆ ನಾಟಕ ಆಡುವ ಅಭ್ಯಾಸ ವಿಕಾಸ್ ಗಿದೆ. ಅದೇ ಆತನ ಸ್ಟ್ರಾಟೆಜಿ. ಕುಡಿದಂತೆ ನಾಟಕ ಆಡಿ ಬಳಿಕ ''ನಾನೇನೂ ಮಾಡಲಿಲ್ಲ. ನೀವೇನಾದರೂ ಮಾಡಿದ್ರಾ.?'' ಅಂತ ಪ್ರಶ್ನಿಸುತ್ತಾನೆ ಅಂತಾರೆ 'ಆ' ನಟಿ.

ಗುಟ್ಟಾಗಿ ಉಳಿದಿಲ್ಲ

ಗುಟ್ಟಾಗಿ ಉಳಿದಿಲ್ಲ

''ವಿಕಾಸ್ ಬಾಹ್ಲ್ ವರ್ತನೆ ಸೀಕ್ರೆಟ್ ಆಗಿ ಉಳಿದಿಲ್ಲ. ಆತನ ಮಾಜಿ ಪತ್ನಿಗೆ ಎಲ್ಲಾ ಗೊತ್ತಿತ್ತು. ಪಾಪ, ಆಕೆಯ ಜೀವನವನ್ನ ಈತ ಹಾಳು ಮಾಡಿದ. ಇಂತಹ ವರ್ತನೆಯಿಂದ ವಿಕಾಸ್ ಕೆಲವು ಕಡೆ ಕೆಲಸ ಕಳೆದುಕೊಂಡಿದ್ದೂ ಇದೆ'' ಎನ್ನುತ್ತಾರೆ ಆ ನಟಿ.

ಒಬ್ಬೊಬ್ಬರ ಹೆಸರು ಬಹಿರಂಗ

ಒಬ್ಬೊಬ್ಬರ ಹೆಸರು ಬಹಿರಂಗ

ಇಷ್ಟು ದಿನ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ. ಕೆಲ ನಿರ್ದೇಶಕರು, ನಟರು ಕಿರುಕುಳ ಕೊಡ್ತಾರೆ ಎಂಬ ಮಾತುಗಳು ಮಾತ್ರ ಕೇಳಿಬರುತ್ತಿತ್ತು. ಆದ್ರೀಗ, ನಟ, ನಿರ್ದೇಶಕರ ಹೆಸರುಗಳನ್ನು ನಟಿಯರು ಬಹಿರಂಗ ಪಡಿಸುತ್ತಿದ್ದಾರೆ. ಇನ್ನಾದರೂ ಈ ಪಿಡುಗು ಅಂತ್ಯ ಕಾಣಲಿ ಎನ್ನುವುದೇ ಎಲ್ಲರ ಆಶಯ.

More from Filmibeat

English summary
Another Actress accuses Vikas Bahl of Forcibly trying to Kiss her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X