ಕಂಗನಾ ರಣೌತ್ ಮೇಲೆ ಮತ್ತೊಂದು ಪ್ರಕರಣ ದಾಖಲು
ನಟಿ ಕಂಗನಾ ರಣೌತ್ ಹಾಗೂ ಮಹಾರಾಷ್ಟ್ರ ಸರ್ಕಾರದ ಜಗಳ ಸನಿಹ ಭವಿಷ್ಯದಲ್ಲಿ ಮುಗಿಯುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ.
ಕಂಗನಾ ರಣೌತ್ ಮೂರು ದಿನಕ್ಕೊಮ್ಮೆ, ಮಹಾರಾಷ್ಟ್ರ ಸರ್ಕಾರ, ಶಿವಸೇನಾ ಪಕ್ಷ ಅಥವಾ ಸರ್ಕಾರದ ಯಾವುದಾದರೂ ಸಚಿವರ ವಿರುದ್ಧ ಟ್ವೀಟ್ ಮಾಡುತ್ತಾರೆ. ಪಕ್ಷದ ಕಡೆಯಿಂದ ಯಾರಾದರೊಬ್ಬರು ಕಂಗನಾ ವಿರುದ್ಧ ದೂರು ಸಲ್ಲಿಸುತ್ತಾರೆ, ಇದು ಸಾಮಾನ್ಯವೆಂತಾಗಿಬಿಟ್ಟಿದೆ. ಆದರೆ ಈಗ ಕೆಲವು ಬಿಹಾರಿಗಳನ್ನೂ ಕಂಗನಾ ಎದುರು ಹಾಕಿಕೊಂಡಂತಿದೆ.
ಇದೀಗ ಮತ್ತೆ ಕಂಗನಾ ರಣೌತ್ ವಿರುದ್ಧ ದೂರು ದಾಖಲಾಗಿದೆ, ಈ ಬಾರಿ ಕಂಗನಾ, ಮಾಜಿ ಕೇಂದ್ರ ಸಚಿವರೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಅಣಕಿಸಿದ್ದಾರೆ ಎಂಬ ಕಾರಣಕ್ಕೆ ಈ ದೂರು ದಾಖಲಿಸಲಾಗಿದೆ.

ಮಾಜಿ ಸಚಿವ ಉಪೇಂದ್ರ ಕುಶ್ವಾನ್ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದ್ದ ಮೀಮ್ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು ಕಂಗನಾ ಇದು, ಉಪೇಂದ್ರ ಕುಶ್ವಾನ್ ಸ್ಥಾಪಿಸಿರುವ ಆರ್‌ಎಲ್‌ಎಸ್‌ಪಿ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದೆ.
ಕೀಳು ಅಭಿರುಚಿಯ ಮೀಮ್ ಅನ್ನು ಹಂಚಿಕೊಂಡಿದ್ದ ಕಂಗನಾ ವಿರುದ್ಧ ಪಾಟ್ನಾದಲ್ಲಿ ಶ್ಯಾಮ್ ಬಿಹಾರಿ ಸಿಂಗ್ ಎಂಬುವರು ದೂರು ದಾಖಲಿಸಿದ್ದಾರೆ. ಶ್ಯಾಮ್ ಬಿಹಾರಿ ಸಿಂಗ್, ಆರ್‌ಎಲ್‌ಎಸ್‌ಪಿ ಪಕ್ಷದ ಕಾನೂನು ಘಟಕದ ಮುಖ್ಯಸ್ಥರೂ ಆಗಿದ್ದಾರೆ.
Recommended Video
ಕಂಗನಾ ಹಂಚಿಕೊಂಡಿದ್ದ ಮೀಮ್‌ನಲ್ಲಿ ಬಿಹಾರ ವಿಧಾನಸಭಾ ಸದಸ್ಯರಿಗೆ 'ಜಿಹಾದಿ', 'ಅರ್ಬನ್ ನೆಕ್ಸಲ್' ಇತರೆ ಹೆಸರುಗಳನ್ನು ನೀಡಲಾಗಿತ್ತು. ಉಪೇಂದ್ರ ಕುಶ್ವಾನ್ ಅವರಿಗೆ 'ಆಜಾದ್ ಕಶ್ಮೀರ್' ಎಂದು ಬರೆಯಲಾಗಿತ್ತು. ಮೀಮ್ ಹಂಚಿಕೊಂಡಿದ್ದ ಕಂಗನಾ, 'ತುಕ್ಡೆ-ತುಕ್ಡೆ ಗ್ಯಾಂಗ್‌ಗೆ ಮತ್ತೊಂದು ಸೇರ್ಪಡೆ' ಎಂದು ಬರೆದುಕೊಂಡಿದ್ದರು.


Click it and Unblock the Notifications











