For Quick Alerts
  ALLOW NOTIFICATIONS  
  For Daily Alerts

  ಅಪಾಯಕಾರಿ ಖಾಯಿಲೆಗೆ ತುತ್ತಾಗಿದ್ದ ಅನುಪಮ್ ಖೇರ್‌

  |

  ಬಾಲಿವುಡ್‌ ಹಿರಿಯ ನಟ, ಮೋದಿ ಭಕ್ತನೆಂದು ತನ್ನನ್ನು ತಾನು ಕರೆದುಕೊಳ್ಳುವ ಅನುಪಮ್ ಖೇರ್ ಅವರು ತಮ್ಮ ಆರೋಗ್ಯ ಸಂಬಂಧಿಸಿದಂತೆ ಗುಟ್ಟೊಂದನ್ನು ಹೊರಗೆಡವಿದ್ದಾರೆ.

  ನಟ ಅನುಪಮ್ ಖೇರ್ ಅಪರೂಪವಾದ ಹಾಗೂ ಅಷ್ಟೇ ಅಪಾಯಕಾರಿಯಾದ ಖಾಯಿಲೆಗೆ ಒಳಗಾಗಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ ಅನುಪಮ್ ಖೇರ್.

  ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ ಸಂಸದಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಸೂದ್ ಅನ್ನು ವ್ಯಂಗ್ಯ ಮಾಡಿದ ಸಂಸದ

  ಅನುಪಮ್ ಖೇರ್ ಅವರಿಗೆ 'ಬೈಪೋಲಾರ್ ಡಿಪ್ರೆಶನ್' ಅಥವಾ 'ಮ್ಯಾನಿಕ್ ಡಿಪ್ರೆಶನ್‌' ಗೆ ಒಳಗಾಗಿದ್ದರಂತೆ. ನಂತರ ಸತತ ಚಿಕಿತ್ಸೆಯ ಬಳಿಕ ಗುಣಮುಖರಾದರಂತೆ ಅನುಪಮ್ ಖೇರ್.

  'ಮ್ಯಾನಿಕ್ ಡಿಪ್ರೆಶನ್‌ ಇರುವುದಾಗಿ ಗೊತ್ತಾಗಿತ್ತು'

  'ಮ್ಯಾನಿಕ್ ಡಿಪ್ರೆಶನ್‌ ಇರುವುದಾಗಿ ಗೊತ್ತಾಗಿತ್ತು'

  ವೈದ್ಯಕೀಯ ವರದಿಗಳಿಂದ ನಾನು 'ಮ್ಯಾನಿಕ್ ಡಿಪ್ರೆಶನ್‌'ಗೆ ಒಳಗಾಗಿದ್ದೇನೆಂದು ಗೊತ್ತಾಯಿತು. ಕೂಡಲೇ ನಾನು ಆಸ್ಪತ್ರೆಗೆ ಹೋದೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಪಡೆದುಕೊಂಡು ಗುಣಮುಖವಾಗಿ ಹೊರಗೆ ಬಂದೆ' ಎಂದಿದ್ದಾರೆ ಅನುಪಮ್ ಖೇರ್.

   ಮುಖದ ಪಾರ್ಶ್ವವಾಯುಗೆ ತುತ್ತಾಗಿದ್ದೆ: ಖೇರ್

  ಮುಖದ ಪಾರ್ಶ್ವವಾಯುಗೆ ತುತ್ತಾಗಿದ್ದೆ: ಖೇರ್

  1994 ರಲ್ಲಿ ಹಮ್ ಆಪ್ಕೆ ಹೈ ಕೋನ್ ಸಿನಿಮಾ ಚಿತ್ರೀಕರಣ ಮಾಡುವಾಗಲೇ ಅನುಪಮ್ ಖೇರ್‌ ಮುಖದ ಪಾರ್ಶ್ವವಾಯುವಿಗೆ ತುತ್ತಾದರಂತೆ. ಸಿನಿಮಾದ ನಿರ್ದೇಶಕ ಸೂರಜ್ ಬರ್ಜಾತ್ಯಾ ಅವರಲ್ಲಿ ಹೋಗಿ ನನ್ನ ಮುಖ ಸ್ವಲ್ಪವೇ ತಿರುಚಿದೆ ಆದರೆ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದರಂತೆ ಹಾಗೂ ಅದಕ್ಕೆ ಎಸ್ ಅಂದರಂತೆ ಸೂರಜ್ ಬರ್ಜಾತ್ಯಾ.

  ವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರುವಿಷ್ಣುದಾದಾ ಅಭಿನಯಕ್ಕೆ ಬೆಕ್ಕಸ ಬೆರಗಾಗಿದ್ದರು ಹಿಂದಿಯ ದಿಗ್ಗಜ ನಟರು

  ಕುಟುಂಬ, ಸ್ನೇಹಿತರು ಸಹಕರಿಸಬೇಕು

  ಕುಟುಂಬ, ಸ್ನೇಹಿತರು ಸಹಕರಿಸಬೇಕು

  ವ್ಯಕ್ತಿಯ ನಡವಳಿಕೆ ಬದಲಾಗಿದೆ. ಆತ ಒಬ್ಬಂಟಿಯಾಗಿ ಇರಲು ಬಯಸುತ್ತಿದ್ದಾನೆ ಎಂದು ಕುಟುಂಬದವರಿಗೆ ಸ್ನೇಹಿತರಿಗೆ ಎನಿಸಿದ ಕೂಡಲೇ ಆತನನ್ನು ಆ ಒಂಟಿತನದಿಂದ ಹೊರಗೆ ತರುವ ಕಾರ್ಯವನ್ನು ಕುಟುಂಬ ಮಾಡಬೇಕು ಎಂದು ಖೇರ್ ಸಲಹೆ ನೀಡಿದ್ದಾರೆ.

  ಚಿತ್ರರಂಗ ಕೊರೊನಾದಿಂದ ಪಾಠ ಕಲಿಯಬೇಕು

  ಚಿತ್ರರಂಗ ಕೊರೊನಾದಿಂದ ಪಾಠ ಕಲಿಯಬೇಕು

  ಕೊರೊನಾ ಬಗ್ಗೆಯೂ ಮಾತನಾಡಿರುವ ಖೇರ್, ಇಂಥಹಾ ಒಂದು ಪರಿಸ್ಥಿತಿಗೆ ಸಿನಿಮಾ ಉದ್ಯಮ ತಯಾರಾಗಿರಲಿಲ್ಲ. ಆದರೆ ಇದನ್ನು ಪಾಠವಾಗಿ ತೆಗೆದುಕೊಂಡು ಮುಂದೊಂದು ದಿನ ಇಂಥಹಾ ಸ್ಥಿತಿ ಬಂದಾಗ ಎದುರಿಸುವುದಕ್ಕೆ ಉದ್ಯಮ ತಯಾರಾಗಿರಬೇಕು ಎಂದರು.

  ರಣಬೀರ್ ಕಪೂರ್ ರಿಜೆಕ್ಟ್ ಮಾಡಿದ ಈ 6 ಸಿನಿಮಾಗಳು ಸೂಪರ್ ಹಿಟ್ ಆಗಿವೆರಣಬೀರ್ ಕಪೂರ್ ರಿಜೆಕ್ಟ್ ಮಾಡಿದ ಈ 6 ಸಿನಿಮಾಗಳು ಸೂಪರ್ ಹಿಟ್ ಆಗಿವೆ

  English summary
  Anupam Kher once diognossed with manic depression he took treatment and came out of it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X