For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನಟ ಅನುಪಮ್ ಖೇರ್ ಭಾವನಾತ್ಮಕ ಪೋಸ್ಟ್

  |

  ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ್ದಾರೆ. 1984ರಲ್ಲಿ ಸಾರಾಂಶ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಪಮ್ ಖೇರ್ ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

  37 ವರ್ಷ ಪೂರೈಸಿರುವ ಬಗ್ಗೆ ನಟ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಮೊದಲ ಸಿನಿಮಾ ತೆರೆಮೇಲೆ ಬಂದಾಗ ಟೈಟಲ್ ಕಾರ್ಡ್ ನೋಡಿ ಇನ್ನೂ ಮೂಕವಿಸ್ಮಿತನಾಗಿದ್ದೆ ಎಂದಿದ್ದಾರೆ. ಇವತ್ತಿಗೂ ಟೈಟಲ್ ಕಾರ್ಡ್‌ನಲ್ಲಿ ಹೆಸರು ನೋಡಿದ್ರೆ ಭಾವುಕನಾಗುತ್ತೇನೆ ಎಂದಿದ್ದಾರೆ. ಮುಂದೆ ಓದಿ...

  ಟೈಟಲ್ ಕಾರ್ಡ್ ನೋಡಿದ್ರೆ ಈಗಲೂ ಭಾವುಕನಾಗುತ್ತೇನೆ

  ಟೈಟಲ್ ಕಾರ್ಡ್ ನೋಡಿದ್ರೆ ಈಗಲೂ ಭಾವುಕನಾಗುತ್ತೇನೆ

  ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ, 'ಇಂದಿಗೂ ನನ್ನ ಮೊದಲ ಚಿತ್ರ ಸಾರಾಂಶ್‌ನಲ್ಲಿ ಟೈಟಲ್ ಕಾರ್ಡ್‌ನಲ್ಲಿ ಅನುಪಮ್ ಖೇರ್ ಎಂದು ಪರಿಚಯಿಸುತ್ತಿರುವುದನ್ನು ನೋಡಿದಾಗ ಭಾವುಕನಾಗುತ್ತೇನೆ. 37 ವರ್ಷ ಪೂರೈಸುತ್ತಿದ್ದೇನೆ ಎನ್ನುವುದನ್ನು ನಂಬಲು ಸಾದ್ಯವಿಲ್ಲ' ಎಂದಿದ್ದಾರೆ.

  ಕೇಂದ್ರ ಸರ್ಕಾರವನ್ನು ಟೀಕಿಸಿದ 'ಮೋದಿ ಚಮಚ' ಅನುಪಮ್ ಖೇರ್ಕೇಂದ್ರ ಸರ್ಕಾರವನ್ನು ಟೀಕಿಸಿದ 'ಮೋದಿ ಚಮಚ' ಅನುಪಮ್ ಖೇರ್

  ನಾನು ಇನ್ನೂ ಆ ಸಿನಿಮಾದ ಸುತ್ತನೇ ಇದ್ದೀನಿ

  ನಾನು ಇನ್ನೂ ಆ ಸಿನಿಮಾದ ಸುತ್ತನೇ ಇದ್ದೀನಿ

  'ನಟನಾಗಿ ಕನಸು ಕಾಣಲು ಇದು ಅತ್ಯುತ್ತಮ ಸಿನಿಮಾ. ಕೆಲವು ದೃಶ್ಯಗಳು ಇನ್ನೂ ನನ್ನ ಆತ್ಮದ ಭಾಗವಾಗಿದೆ. ಈ ಸಿನಿಮಾ ಬಳಿಕ ನನ್ನ ಮುಂದಿನ ಭವಿಷ್ಯ ಏನು ಎನ್ನುವುದು ಗೊತ್ತಿರಲಿಲ್ಲ. ಎಲ್ಲವನ್ನು ನಾನು ಆ ಸಿನಿಮಾಗೆ ನೀಡುತ್ತೇನೆ. ನಾನು ಇನ್ನೂ ಆ ಸಿನಿಮಾದ ಸುತ್ತನೇ ಇದ್ದೀನಿ. ನನ್ನ ಪ್ರೀತಿಯ ಪ್ರೇಕ್ಷಕರಿಗೆ ಧನ್ಯವಾದಗಳು ಎಂದಿದ್ದಾರೆ.

  500ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  500ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  ಮಹೇಶ್ ಭಟ್ ನಿರ್ದೇಶನದಲ್ಲಿ ಬಂದ ಸಾರಂಶ್ ಚಿತ್ರ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ನಟ ಅನುಪಮ್ ಖೇರ್ ಮೊದಲ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದರು. ಹಿಂದಿ ಸಿನಿಮಾರಂಗದಲ್ಲಿ ಗಮನಾರ್ಹ ಸ್ಥಾನ ಗಳಿಸಿರುವ ಅನುಪಮ್ ಖೇರ್ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  37 ವರ್ಷ ಪೂರೈಸಿದ ನಟ ಅನುಪಮ್ ಖೇರ್

  37 ವರ್ಷ ಪೂರೈಸಿದ ನಟ ಅನುಪಮ್ ಖೇರ್

  ಹಿಂದಿ ಮಾತ್ರವಲ್ಲದೇ ಮಲಯಾಳಂ, ತಮಿಳು, ಬಂಗಾಳಿ, ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2 ರಾಷ್ಟ್ರಪ್ರಶಸ್ತಿ ಮತ್ತು 8 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇತ್ತೀಚಿಗಷ್ಟೆ ನ್ಯೂಯಾರ್ಕ್ ನಗರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹ್ಯಾಪಿ ಬರ್ತಡೇ ಕಿರುಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು.

  Sonu Sood ತಮ್ಮ ಅಭಿಮಾನಿಗಳಿಗೆ ಹೀಗೆ ಮಾಡಬೇಡಿ ಅಂದಿದ್ದಾರೆ | Filmibeat Kannada
  ಸಿನಿಮಾಗಳು

  ಸಿನಿಮಾಗಳು

  ಅನುಪಮ್ ಖೇರ್ ಕೊನೆಯದಾಗಿ ಒನ್ ಡೇ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ದಿ ಲಾಸ್ಟ್ ಶೋ, ಮುಂಗಿಲಾಲ್ ರಾಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನುಪಮ್ ಖೇರ್ ಪತ್ನಿ ನಟಿ ಮತ್ತು ರಾಜಕಾರಣಿ ಕಿರಣ್ ಖೇರ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾರಕ ಕ್ಯಾನ್ಸರ್‌ಗೆ ತುತ್ತಾಗಿರುವ ಕಿರಣ್ ಖೇರ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

  English summary
  Actor Anupam Kher shares heartfelt note for completing 37 years in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X