For Quick Alerts
  ALLOW NOTIFICATIONS  
  For Daily Alerts

  'ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ನಲ್ಲಿ ಪ್ರಶಸ್ತಿ ಗೆದ್ದ ನಟ ಅನುಪಮ್ ಖೇರ್

  |

  ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಹ್ಯಾಪಿ ಬರ್ತಡೇ ಕಿರುಚಿತ್ರದ ನಟನೆಗೆ ಅನುಪಮ್ ಖೇರ್ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

  ನಟ ಅನುಪಮ್ ಮತ್ತು ಅಹಾನಾ ಕುಮ್ರಾ ಅಭಿನಯದ ವರ್ಷದ ಬಹುನಿರೀಕ್ಷೆಯ ಕಿರುಚಿತ್ರಗಳಲ್ಲಿ ಹ್ಯಾಪಿ ಬರ್ತಡೇ ಕೂಡ ಒಂದು. ಪ್ರಸಾದ್ ಕದಮ್ ಸಾರಥ್ಯದಲ್ಲಿ ಈ ಕಿರುಚಿತ್ರ ಮೂಡಿಬಂದಿದೆ. ಕೊರೊನಾ ಸಂಕಷ್ಟದ ಈ ಸ್ಥಿತಿಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡ ನಟ ಅನುಪಮ್ ಸಾಮಾಜಿಕ ಜಾಲತಾಣದ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

  'ತಲೆಯಲ್ಲಿ ಅರ್ಧ ಕೂದಲಿರಲಿಲ್ಲ, ನಟನಾಗಬೇಕೆಂಬ ಆಸೆ ನನ್ನನ್ನು ಬಿಡಲಿಲ್ಲ''ತಲೆಯಲ್ಲಿ ಅರ್ಧ ಕೂದಲಿರಲಿಲ್ಲ, ನಟನಾಗಬೇಕೆಂಬ ಆಸೆ ನನ್ನನ್ನು ಬಿಡಲಿಲ್ಲ'

  'ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನನ್ನ ಕಿರುಚಿತ್ರ ಹ್ಯಾಪಿ ಬರ್ತಡೇಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು. ಅಹಾನಾ ಕುಮ್ರಾ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

  ಹ್ಯಾಪಿ ಬರ್ತಡೇ ಮೂಲಕ ಅನುಮಪ್ ಖೇರ್ ಮತ್ತು ಅಹಾನಾ ಎರಡನೇ ಬಾರಿ ಒಟ್ಟಿಗೆ ನಟಿಸಿದ್ದಾರೆ. ಈ ಮೊದಲು ಅಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

  ಕಂಬ್ಯಾಕ್ ಮಾಡೋಕೆ‌ ರೆಡಿಯಾದ ಜೆನಿಲಿಯಾ!!ರಿತೇಶ್ ಒಪ್ಕೊಂಡ್ರಾ? | Filmibeat Kanada

  ನಟ ಅನುಮಪ್ ಖೇರ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ಲಾಸ್ಟ್ ಶೋ, ಮಂಗಿಲಾಲ್ ರಾಕ್ಸ್, ದಿ ಕಾಶ್ಮೀರ ಫೈಲ್ಸ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ದೇಶದಲ್ಲಿ ಉಂಟಾಗಿರುವ ಭೀಕರ ಕೊರೊನಾ ಪರಿಸ್ಥಿತಿಯಲ್ಲಿ ತನ್ನ ಕೈಲಾದಷ್ಟು ಸಹಾಯ ಮಾಡಿದ್ದಾರೆ.

  English summary
  Actor Anupam kher won best Actor award for Happy Birthday in New York City International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X