For Quick Alerts
  ALLOW NOTIFICATIONS  
  For Daily Alerts

  ಸಂದರ್ಶನದಲ್ಲಿ ಸ್ಟಾರ್ ನಟಿಯ ಸ್ತನಗಳ ಬಗ್ಗೆ ಮಾತನಾಡಿದ ಸ್ಟಾರ್ ನಿರ್ದೇಶಕ ಅನುರಾಗ್

  |

  ನಟಿಯರ ದೇಹಾಕಾರದ ಬಗ್ಗೆ ಮಾತನಾಡುವುದು ತಮಾಷೆಯ ಸಂಗತಿಯಾಗಿಬಿಟ್ಟಿದೆ. ಸೂಕ್ಷಾತಿ ಸೂಕ್ಷ್ಮ ನಿರ್ದೇಶಕರೆನಿಸಿಕೊಂಡವರು ಸಹ ಇದಕ್ಕೆ ಹೊರತಲ್ಲ.

  ಮನೊರಂಜನಾ ಲೋಕದಲ್ಲಿ ಕೆಲಸ ಮಾಡುವ ಮಹಿಳೆಯರ ಪರವಾಗಿ ಮೀ ಟೂ ಅಂಥಹಾ ದೊಡ್ಡ ಅಭಿಯಾನ ನಡೆದರೂ ಸಿನಿಮಾ ನಟಿಯರ ಬಾಡಿ ಶೇಮಿಂಗ್ ಹಾಗೂ 'ಆಬ್ಜೆಕ್ಟಿಫಿಕೇಶನ್' ಕಡಿಮೆ ಆಗಿಲ್ಲ.

  ''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''

  ಇದೀಗ ಬಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರು, ಖ್ಯಾತ ನಟಿಯೊಬ್ಬರ ಬಗ್ಗೆ ಇಂಥಹದ್ದೊಂದು ಮಾತನ್ನಾಡಿದ್ದಾರೆ. ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ತಮ್ಮ ಆಪ್ತ ಗೆಳತಿಯೂ ಆಗಿರುವ ತಾಪ್ಸಿ ಪನ್ನು ಬಗ್ಗೆ ಆಡಿರುವ ಮಾತು ಇದೀಗ ಚರ್ಚೆಗೆ ಕಾರಣವಾಗಿದೆ.

  ತಾಪ್ಸಿ ಪನ್ನು ನಟಿಸಿರುವ 'ದೊಬಾರ' ಸಿನಿಮಾವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಶ್ಯಪ್, ತಾಪ್ಸಿ ಹಾಗೂ ಇನ್ನಿತರರು ಬ್ಯುಸಿಯಾಗಿದ್ದಾರೆ. ಹೀಗೆಯೇ ಒಂದು ಸಿನಿಮಾ ಪ್ರಚಾರ ಸಂಬಂಧಿ ಸಂದರ್ಶನದಲ್ಲಿ ಮಾಧ್ಯಮಗಳೆದುರೇ ತಾಪ್ಸಿ ಸ್ತನಗಳ ಗಾತ್ರದ ಬಗ್ಗೆ ಅನುರಾಗ್ ತಮಾಷೆಯಾಗಿ ಮಾತನಾಡಿದ್ದಾರೆ. ಅದೀಗ ಚರ್ಚೆಗೆ ಗ್ರಾಸವಾಗಿದೆ.

  2021 ವಿಶೇಷ: ಅಕ್ಷಯ್ ಕುಮಾರ್ ಅನ್ನು ಹಿಂದಿಕ್ಕಿದ ತಾಪ್ಸಿ ಪನ್ನು!2021 ವಿಶೇಷ: ಅಕ್ಷಯ್ ಕುಮಾರ್ ಅನ್ನು ಹಿಂದಿಕ್ಕಿದ ತಾಪ್ಸಿ ಪನ್ನು!

  ಅನುರಾಗ್-ತಾಪ್ಸಿ ಸಂದರ್ಶನ

  ಅನುರಾಗ್-ತಾಪ್ಸಿ ಸಂದರ್ಶನ

  ಆರ್‌ಜೆ ಸಿದ್ಧಾರ್ಥ್ ಖನ್ನನ್ ಜೊತೆಗೆ ಅನುರಾಗ್ ಹಾಗೂ ತಾಪ್ಸಿ ಸಂದರ್ಶನಕ್ಕೆ ಕುಳಿತಿದ್ದರು. ಸಿದ್ಧಾರ್ಥ್, ತಮ್ಮ ತಮಾಷೆಭರಿತ, ಲಘು ಧಾಟಿಯ ಸಂದರ್ಶನಗಳಿಗೆ ಜನಪ್ರಿಯ. ಅನುರಾಗ್‌ಗೆ ರಣ್ವೀರ್ ಸಿಂಗ್‌ರ ಬೆತ್ತಲೆ ಫೋಟೊ ಶೂಟ್‌ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ನನಗೆ ಆ ಚಿತ್ರ ಇಷ್ಟವಾಯಿತು, ಆ ಚಿತ್ರಕ್ಕೆ ನಾನು ಕಮೆಂಟ್ ಸಹ ಹಾಕಿದೆ. ನನಗೆ ವಯಸ್ಸಾಗಿಬಿಟ್ಟಿತು, ನೀನು ಹೀಗೆಲ್ಲ ಫೋಟೊಶೂಟ್ ಮಾಡಿಸಿಕೊಂಡು ನನ್ನ ಮೇಲೆ ಪ್ರೆಶರ್ ಹಾಕಬೇಡ ಎಂದು ಕಮೆಂಟ್ ಬರೆದಿದ್ದೇನೆ'' ಎಂದರು.

  ನೀವು ಬೆತ್ತಲೆ ಫೋಟೊಶೂಟ್ ಮಾಡಿಸಿ ಎನ್ನುವ ಸಂದರ್ಶಕ

  ನೀವು ಬೆತ್ತಲೆ ಫೋಟೊಶೂಟ್ ಮಾಡಿಸಿ ಎನ್ನುವ ಸಂದರ್ಶಕ

  ಆಗ ಸಂದರ್ಶಕ ಸಿದ್ಧಾರ್ಥ್, ''ಸರ್ ನೀವು ಹಾಗೆಯೇ ಒಂದು ಫೊಟೊಶೂಟ್ ಮಾಡಿಸಬೇಕು. ನಿಮ್ಮ ಫೊಟೊಶೂಟ್‌ನಲ್ಲಿ ಆ ಉಬ್ಬಿದ ಹೊಟ್ಟೆ ಅದೆಷ್ಟು ಅಂದವಾಗಿ ಕಾಣುತ್ತದೆ ಗೊತ್ತೆ. ಚಿತ್ರ ವೈರಲ್ ಆಗಿಬಿಡುತ್ತದೆ'' ಎಂದಿದ್ದಾರೆ. ಅದಕ್ಕೆ ಪಕ್ಕದಲ್ಲೇ ಇದ್ದ ತಾಪ್ಸಿ ಪನ್ನು ಪ್ರತಿಕ್ರಿಯಿಸಿ, ''ಇವರು ಫೋಟೊಶೂಟ್ ಮಾಡಿಸಿದರೆ ಹಾರರ್ ಸಿನಿಮಾ ಆಗುತ್ತದೆ ಅಷ್ಟೆ'' ಎಂದಿದ್ದಾರೆ. ಅದನ್ನು ಖಂಡಿಸಿದ ಸಿದ್ಧಾರ್ಥ್, ''ನಿಮಗೆ ಹೊಟ್ಟೆ ಉರಿ, ಅನುರಾಗ್ ಅವರ ಬೆತ್ತಲೆ ಚಿತ್ರ ವೈರಲ್ ಆಗಿಬಿಡುತ್ತದೆ ಎಂದು ಅದಕ್ಕೆ ಬೇಡ ಎನ್ನುತ್ತಿದ್ದೀರಿ'' ಎನ್ನುತ್ತಾರೆ.

  ನನ್ನ ಸ್ತನ ಆಕೆಯ ಸ್ತನಗಳಗಿಂತ ದೊಡ್ಡದಾಗಿವೆ: ಅನುರಾಗ್

  ನನ್ನ ಸ್ತನ ಆಕೆಯ ಸ್ತನಗಳಗಿಂತ ದೊಡ್ಡದಾಗಿವೆ: ಅನುರಾಗ್

  ಆಗ ತಾಪ್ಸಿಯ ನಕಾರಕ್ಕೆ ಪ್ರತಿಕ್ರಿಯೆ ನೀಡುವ ಅನುರಾಗ್ ಕಶ್ಯಪ್, ''ಆಕೆಗೆ (ತಾಪ್ಸಿ) ನನ್ನನ್ನು ಕಂಡರೆ ಹೊಟ್ಟೆ ಉರಿ, ನನಗೆ ಆಕೆಗಿಂತಲೂ ದೊಡ್ಡ ದಾದ ಸ್ತನಗಳಿವೆ, ಅದಕ್ಕೆ ನನ್ನ ಕಂಡರೆ ಹೊಟ್ಟೆ ಕಿಚ್ಚು'' ಎನ್ನುತ್ತಾರೆ. ಇದನ್ನು ಕೇಳಿದ ತಾಪ್ಸಿ ಕ್ಷಣಕಾಲ ಶಾಕ್ ಆಗಿ ಆ ನಂತರ ನಗಲು ಆರಂಭಿಸುತ್ತಾರೆ. ಆದರೆ ಸನ್ನಿವೇಶವನ್ನು ಜಾಣತನದಿಂದ ನಿಭಾಯಿಸುವ ಸಿದ್ಧಾರ್ಥ್, ''ಬಹಳ ಒಳ್ಳೆಯ ಮಾಹಿತಿ ನೀಡಿದಿರಿ ಬಿಡಿ, ಸಣ್ಣ ವಯಸ್ಸಿನಿಂದಲೂ ಇದೇ ಮಾಹಿತಿಯನ್ನು ನಾನು ಹುಡುಕುತ್ತಿದ್ದೆ'' ಎಂದು ತಮಾಷೆ ಮಾಡಿದ್ದಾರೆ.

  ಆಗಸ್ಟ್ 19 ರಂದು ಸಿನಿಮಾ ಬಿಡುಗಡೆ

  ಆಗಸ್ಟ್ 19 ರಂದು ಸಿನಿಮಾ ಬಿಡುಗಡೆ

  ಅನುರಾಗ್ ಕಶ್ಯಪ್, ತಾಪ್ಸಿಯ ಸ್ತನಗಳ ಬಗ್ಗೆ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಅನುರಾಗ್ ಹೇಳಿದ್ದು ತಮಾಷೆಯಾಗಿ ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಅನುರಾಗ್, ನಟಿಯ ಖಾಸಗಿ ಅಂಗಗಳ ಬಗ್ಗೆ ಹಾಗೆ ಮಾತನಾಡಬಾರದಿತ್ತು ಎಂದಿದ್ದಾರೆ. ತಾಪ್ಸಿ ಹಾಗೂ ಅನುರಾಗ್ ಇಬ್ಬರೂ ಆತ್ಮೀಯ ಗೆಳೆಯರು. ಅನುರಾಗ್, ಹೀಗೆ ತಮ್ಮ ಬಗ್ಗೆ ಮಾತನಾಡಿದ್ದಕ್ಕೆ ತಾಪ್ಸಿ ಏನು ಪ್ರತಿಕ್ರಿಯೆ ನೀಡುತ್ತಾರೆಂದು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಪ್ರಸ್ತುತ ಅನುರಾಗ್ ನಿರ್ದೇಶಿಸಿ ತಾಪ್ಸಿ ನಟಿಸಿರುವ 'ದೊಬಾರಾ' ಸಿನಿಮಾ ಆಗಸ್ಟ್ 19 ರಂದು ಬಿಡುಗಡೆ ಆಗಲಿದೆ.

  English summary
  Director Anurag Basu talks about actress Taapsee Pannu chest in an interview. Taapsee Pannu's Dobara movie releasing shortly, directed by Anurag Kashyap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X