ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿಗೆ ಬಂದಿತ್ತು ರೇಪ್, ಕೊಲೆ ಬೆದರಿಕೆ: ಆಲಿಯಾ ಹೇಳಿದ್ದೇನು?

ಅತಿ ಹೆಚ್ಚು ಟ್ರೋಲ್ ಗೆ ಗುರಿಯಾಗುವುದು ಸಿನಿಮಾ ಸೆಲೆಬ್ರಿಟಿಗಳು ಎಂದರೆ ತಪ್ಪಾಗಲ್ಲ. ಸೆಲೆಬ್ರಿಟಿಗಳ ಜೊತೆಗೆ ಅವರ ಮಕ್ಕಳು ಸಹ ಅನೇಕ ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಕೆಲವರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇನ್ನು ಕೆಲವರು ಟ್ರೋಲ್ ಗಳಿಂದ ತೀರ ಮಾನಸಿಕ ಹಿಂಸೆಗೆ ಒಳಗಾದ ಉದಾಹರಣೆಯೂ ಇದೆ.

ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ನೆಟ್ಟಿಗರಿಂದ ಹಿಗ್ಗಾಮುಗ್ಗ ಟ್ರೋಲ್ ಆದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ಅವರನ್ನು ನೆಟ್ಟಿಗರು ತೀರ ಕೆಟ್ಟದಾಗಿ ಟ್ರೋಲ್ ಮಾಡಿದ್ದರು.

ಈ ಬಗ್ಗೆ ಈಗ ಆಲಿಯಾ ಕಶ್ಯಪ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಆಲಿಯಾ ಕಶ್ಯಪ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 20 ವರ್ಷದ ಆಲಿಯಾ ಅತ್ಯಾಚಾರ, ಕೊಲೆ ಬೆದರಿಕೆಗಳು ಬಂದಾಗ ಹೇಗೆ ಪ್ರತಿಕ್ರಿಯಿಸಿದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಪ್ರತಿದಿನ ಅಳುತ್ತಿದ್ದೆ- ಆಲಿಯಾ ಕಶ್ಯಪ್

ಪ್ರತಿದಿನ ಅಳುತ್ತಿದ್ದೆ- ಆಲಿಯಾ ಕಶ್ಯಪ್

'ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ಸಣ್ಣ ಸಣ್ಣ ವಿಚಾರಗಳು ಸಹ ನನಗೆ ದೊಡ್ಡ ಪರಿಣಾಮ ಬೀರುತ್ತೆ. ಯಾಕೆ ಅಂತ ಗೊತ್ತಿಲ್ಲ. ಟ್ರೋಲ್ ಗಳನ್ನು ನೋಡಿ ನಾನು ಪ್ರತಿದಿನ ಅಳುತ್ತಿದ್ದೆ' ಎಂದು ಹೇಳಿದ್ದಾರೆ.

ಕೊಲೆ, ರೇಪ್ ಬೆದರಿಕೆ ಹಾಕಿದರು, ವೇಶ್ಯೆ ಎಂದರು- ಆಲಿಯಾ

ಕೊಲೆ, ರೇಪ್ ಬೆದರಿಕೆ ಹಾಕಿದರು, ವೇಶ್ಯೆ ಎಂದರು- ಆಲಿಯಾ

ಉಳ ಉಡುಪು ಧರಿಸಿ ಕ್ಯಾಮರಾಗೆ ಪೋಸ್ ನೀಡಿದ ಫೋಟೋವನ್ನು ಹಂಚಿಕೊಂಡಾಗ ಜನ ಹೇಗೆ ಪ್ರತಿಕ್ರಿಯೆ ನೀಡಿದರು ಎನ್ನುವ ಬಗ್ಗೆ ಆಲಿಯಾ ಮನಬಿಚ್ಚಿ ಮಾತನಾಡಿದ್ದಾರೆ. ' ಈ ರೀತಿಯ ಫೋಟೋಗಳನ್ನು ಶೇರ್ ಮಾಡುವುದಕ್ಕೆ ಭಾರತೀಯಳಾಗಿ ನಾಚಿಕೆಯಾಗಬೇಕು ಎಂದು ಜನ ಹೇಳುತ್ತಿದ್ದರು. ನನಗೆ ಅತ್ಯಾಚಾರ ಬೆದರಿಕೆ ಕಳುಹಿಸುತ್ತಿದ್ದರು. ನನ್ನನ್ನು ವೇಶ್ಯೆ ಎಂದು ಕರೆದರು. ನನ್ನ ಬೆಲೆ ಎಷ್ಟು ಎಂದು ಕೇಳಿದರು. ಕೊಲೆ ಬೆದರಿಕೆ ಕಳುಹಿಸಿದ್ದರು. ಇದೆಲ್ಲವೂ ನನಗೆ ಮನಸ್ಸಿಗೆ ತುಂಬಾ ಘಾಸಿ ಮಾಡಿತ್ತು.

ಕೆಟ್ಟ ಕಾಮೆಂಟ್ ಮಾಡುವವರನ್ನು ಬ್ಲಾಕ್ ಮಾಡುತ್ತೇನೆ- ಆಲಿಯಾ

ಕೆಟ್ಟ ಕಾಮೆಂಟ್ ಮಾಡುವವರನ್ನು ಬ್ಲಾಕ್ ಮಾಡುತ್ತೇನೆ- ಆಲಿಯಾ

ಇದರಿಂದ ಪ್ರಾರಂಭದಲ್ಲಿ ನಾನು ನಿರಂತರವಾಗಿ ಅಳುತ್ತಿದ್ದೆ. ಆದರೆ ಬಳಿಕ ನನಗೆ ನಿಧಾನವಾಗಿ ಅರ್ಥವಾಯಿತು. ಜನರು ಎಲ್ಲೋ ಫೋನ್ ಹಿಂದೆ ಅಡಗಿಕೊಂಡು ಕಾಮೆಂಟ್ ಮಾಡುತ್ತಿರುತ್ತಾರೆ. ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಯಾವುದೇ ಅಂತಹ ಕಾಮೆಂಟ್ ಮಾಡುವವರನ್ನು ಬ್ಲಾಕ್ ಮಾಡುತ್ತೇನೆ. ನನ್ನ ಫೋನ್ ನಲ್ಲಿ ನೆಗೆಟಿವಿಟಿಗೆ ಜಾಗವಿಲ್ಲ. ನನ್ನ ಫೋನ್ ಯಾವಾಗಲು ಸಕಾರಾತ್ಮಕವಾಗಿರಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಬಾಲಿವುಡ್ ಬಗ್ಗೆ ಆಲಿಯಾ ಹೇಳಿದ್ದೇನು?

ಬಾಲಿವುಡ್ ಬಗ್ಗೆ ಆಲಿಯಾ ಹೇಳಿದ್ದೇನು?

ಇನ್ನು ಬಾಲಿವುಡ್ ಎಂಟ್ರಿಯ ಬಗ್ಗೆಯೂ ಆಲಿಯಾ ಮಾತನಾಡಿದ್ದಾರೆ. ನಾನು ಬಾಲಿವುಡ್ ನಾನು ಬಾಲಿವುಡ್ ಜೊತೆ ಬೆಳೆದಿಲ್ಲ. ಓ ಮೈ ಗಾಡ್ ಅದು ಬಾಲಿವುಡ್. ನಾನು ಅದರಿಂದ ಆಕರ್ಷಿತಳಾಗಿಲ್ಲ. ನಾನು ಬಯಸುವುದಿಲ್ಲ. ಅದರಿಂದ ದೂರವಿರಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

Recommended Video

ಶಿವಣ್ಣನ ಮಾತಿಗೆ ವಿರುದ್ಧವಾಗಿ ನಡೆದುಕೊಂಡ ಧ್ರುವ ಸರ್ಜಾ | Filmibeat Kannada
ಅನುರಾಗ್ ಮತ್ತು ಆರತಿ ಮಗಳು ಆಲಿಯಾ

ಅನುರಾಗ್ ಮತ್ತು ಆರತಿ ಮಗಳು ಆಲಿಯಾ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ 1997ರಲ್ಲಿ ಸಿನಿಮಾ ಎಡಿಟರ್ ಆರತಿ ಬಜಾಜ್ ಅವರನ್ನು ವಿವಾಹವಾಗುತ್ತಾರೆ. ಅನುರಾಗ್ ಮತ್ತು ಆರತಿ ಅವರಿಗೆ ಜನಿಸದ ಮಗಳು ಆಲಿಯಾ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅನುರಾಗ್ ಮತ್ತು ಆರತಿ ಇಬ್ಬರು ಬೇರೆ ಬೇರೆ ಆಗುತ್ತಾರೆ. ಬಳಿಕ ಅನುರಾಗ್ ಕಶ್ಯಪ್ 2013ರಲ್ಲಿ ಕಲ್ಕಿ ಕೊಚ್ಚಿನ್ ಅವರನ್ನು ವರಿಸುತ್ತಾರೆ. ಆದರೆ ಆ ಸಂಬಂಧ ಸಹ ಬಹಳ ವರ್ಷ ಉಳಿಯಲಿಲ್ಲ. 2015ರಲ್ಲಿ ಇಬ್ಬರು ಬೇರೆ ಬೇರೆ ಆಗುತ್ತಾರೆ.

More from Filmibeat

English summary
Bollywood famous director Anurag kashyap daughter aaliyah Kashyap reaction about troll.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X