twitter
    For Quick Alerts
    ALLOW NOTIFICATIONS  
    For Daily Alerts

    'ನಿಜವಾಗಿಯೂ ಭಾರತದ ಸಿನಿಮಾ ಮಾಡುತ್ತಿರುವವರು ದಕ್ಷಿಣದವರು, ಬಾಲಿವುಡ್ ಅಲ್ಲ'

    By ಫಿಲ್ಮಿಬೀಟ್ ಡೆಸ್ಕ್
    |

    ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಮೂಲಕ ಬಾಲಿವುಡ್‌ ಒಂದು ದೊಡ್ಡ ಹಿಟ್ ಕಂಡಿದೆಯಾದರೂ ಇದು ತಾತ್ಕಾಲಿಕ ಎನ್ನಲಾಗುತ್ತಿದೆ.

    ಯಾವುದೇ ಗಟ್ಟಿಯಾದ ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಪಠಾಣ್' ಸಿನಿಮಾಕ್ಕೆ ಎದುರು ಇರಲಿಲ್ಲವಾದ್ದರಿಂದ 'ಪಠಾಣ್' ದೊಡ್ಡ ಯಶಸ್ಸನ್ನು ಗಳಿಸಿದೆ. ಒಂದೊಮ್ಮೆ ಯಾವುದಾದರೂ ಗಟ್ಟಿಯಾದ ದಕ್ಷಿಣದ ಸಿನಿಮಾ 'ಪಠಾಣ್' ಎದುರು ನಿಂತಿದ್ದರೆ ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಿಸಿದ್ದಾರೆ.

    ಇದಕ್ಕೆ ಮುಖ್ಯ ಕಾರಣವೆಂದರೆ, ಬಾಲಿವುಡ್ ಈಗಲೂ ಸಹ ಸ್ವಂತ ಕತೆ ಅಥವಾ ಸಾಮಾನ್ಯ ಜನರಿಗೆ ಹತ್ತಿರವಾದ ಕತೆಗಳನ್ನು ಹೆಣೆಯುವುದರ ಹೊರತಾಗಿ ಹಾಲಿವುಡ್‌ ಅನ್ನು ಕಾಪಿ ಮಾಡುತ್ತಿರುವುದು, 'ಪಠಾಣ್' ಸಹ ಹಾಲಿವುಡ್‌ನ ಜನಪ್ರಿಯ ಮಾದರಿ ಸ್ಪೈ ಥ್ರಿಲ್ಲರ್ ಜಾನರ್ ಒಳಗೇ ಬರುವ ಸಿನಿಮಾ. ಈ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    'ಬಾಲಿವುಡ್‌ನವರು ಹಾಲಿವುಡ್ ಸಿನಿಮಾಗಳನ್ನು ಕಾಪಿ ಮಾಡುತ್ತಾರೆ'

    'ಬಾಲಿವುಡ್‌ನವರು ಹಾಲಿವುಡ್ ಸಿನಿಮಾಗಳನ್ನು ಕಾಪಿ ಮಾಡುತ್ತಾರೆ'

    ''ಒಂದು ಸಮಯದಲ್ಲಿ ಭಾರತದ ಸಿನಿಮಾಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇತ್ತು. ಭಾರತದ 'ಆವಾರ', 'ಡಿಸ್ಕೊ ಡ್ಯಾನ್ಸರ್' ಇನ್ನು ಕೆಲವು ಸಾಮಾನ್ಯರ ಬಗೆಗಿನ ಸಿನಿಮಾಗಳು ವಿಶ್ವದೆಲ್ಲೆಡೆ ಮಾನ್ಯತೆ ಗಳಿಸಿದ್ದವು. ರಷ್ಯಾ, ಆಫ್ರಿಕಾಕ್ಕೆ ಹೋದರೂ ಹಿಂದಿ ಹಾಡುಗಳು ಕೇಳುತ್ತಿದ್ದವು. ಆದರೆ ಬಾಲಿವುಡ್‌ನವರು ಹಾಲಿವುಡ್‌ ಸಿನಿಮಾಗಳನ್ನು ಕಾಪಿ ಮಾಡಲು ಆರಂಭಿಸಿದ ಬಳಿಕ ತಮ್ಮತನ ಕಳೆದುಕೊಂಡರು, ಒರಿಜಿನಾಲಿಟಿ ಕಳೆದುಕೊಂಡರು'' ಎಂದಿದ್ದಾರೆ ಅನುರಾಗ್ ಕಶ್ಯಪ್.

    ದಕ್ಷಿಣದ ಸಿನಿಮಾಗಳು ನೆಲದ ಕತೆ ಹೇಳುತ್ತವೆ: ಅನುರಾಗ್

    ದಕ್ಷಿಣದ ಸಿನಿಮಾಗಳು ನೆಲದ ಕತೆ ಹೇಳುತ್ತವೆ: ಅನುರಾಗ್

    ''ಅದೇ ದಕ್ಷಿಣ ಭಾರತ ಸಿನಿಮಾಗಳು ಈಗಲೂ ತಮ್ಮ ನೆಲದ ಕತೆಯನ್ನೇ ಹೇಳುತ್ತವೆ. ಅವು ಈಗಲೂ ಭಾರತದ ಸಿನಿಮಾಗಳಂತೆ ಕಾಣುತ್ತವೆ. ಆದರೆ ಬಾಲಿವುಡ್‌ನ ಹಲವು ಹಿಂದಿ ಸಿನಿಮಾಗಳು ಭಾರತದ ಸಿನಿಮಾಗಳಂತೆ ಕಾಣುವುದೇ ಇಲ್ಲ. ಹಲವು ಬಾಲಿವುಡ್ ಸಿನಿಮಾಗಳನ್ನು ಭಾರತದಲ್ಲಿ ಚಿತ್ರೀಕರಣ ಸಹ ಮಾಡಲಾಗುವುದಿಲ್ಲ. ಇದೇ ಕಾರಣಕ್ಕೆ RRR ಅಂಥಹಾ ಅಪ್ಪಟ ಭಾರತೀಯ ಕತೆಯುಳ್ಳ ಸಿನಿಮಾ ಪ್ರೇಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ, ಬಾಲಿವುಡ್‌ನಲ್ಲಿ ದೊಡ್ಡ ಗೆಲುವು ಸಾಧಿಸುತ್ತದೆ'' ಎಂದಿದ್ದಾರೆ ಅನುರಾಗ್ ಕಶ್ಯಪ್.

    'ಗರುಡ ಗಮನ ವೃಷಭ ವಾಹನ' ಇಷ್ಟಪಟ್ಟಿದ್ದ ಅನುರಾಗ್

    'ಗರುಡ ಗಮನ ವೃಷಭ ವಾಹನ' ಇಷ್ಟಪಟ್ಟಿದ್ದ ಅನುರಾಗ್

    ಅನುರಾಗ್ ಕಶ್ಯಪ್ ಮೊದಲಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳನ್ನು ಹೊಗಳುತ್ತಾ ಬಂದಿದ್ದಾರೆ. ತಮಿಳು ಸಿನಿಮಾ ಒಂದರಲ್ಲಿ ವಿಲನ್ ಆಗಿ ಸಹ ನಟಿಸಿರುವ ಅನುರಾಗ್ ಕಶ್ಯಪ್, ಕನ್ನಡದ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಅತಿಯಾಗಿ ಮೆಚ್ಚಿದ್ದರು. ರಾಜ್ ಬಿ ಶೆಟ್ಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದರು ಸಹ. 'ಕಾಂತಾರ' ಸಿನಿಮಾವನ್ನೂ ಸಹ ಅನುರಾಗ್ ಕಶ್ಯಪ್ ಬಹುವಾಗಿ ಮೆಚ್ಚಿದ್ದಾರೆ.

    'ಗ್ಯಾಂಗ್ಸ್ ಆಫ್ ವಸೇಪುರ್' ಸೃಷ್ಟಿಕರ್ತ

    'ಗ್ಯಾಂಗ್ಸ್ ಆಫ್ ವಸೇಪುರ್' ಸೃಷ್ಟಿಕರ್ತ

    ಅನುರಾಗ್ ಕಶ್ಯಪ್, ಬಾಲಿವುಡ್‌ನ ಬಹಳ ಭಿನ್ನ ನಿರ್ದೇಶಕ. ಮಾಮೂಲಿ ಮಸಾಲಾ ಕಮರ್ಶಿಯಲ್ ಸಿನಿಮಾಗಳಲ್ಲದೆ, ನಿಜ ಘಟನೆಗಳನ್ನು ಆಧರಿಸಿದ, ಸಾಮಾನ್ಯರ ಕತೆಗಳನ್ನು ಅನುರಾಗ್ ಕಶ್ಯಪ್ ಹೇಳುತ್ತಾ ಬಂದಿದ್ದಾರೆ. ಅನುರಾಗ್ ಕಶ್ಯಪ್‌ರ 'ಗ್ಯಾಂಗ್ಸ್ ಆಫ್ ವಸೇಪುರ್' ಸಿನಿಮಾಗಳಂತೂ ಕಲ್ಟ್ ಕ್ಲಾಸಿಕ್‌ಗಳೆಂದು ಹೆಸರಾಗಿವೆ. ಸಿನಿಮಾ ಅಧ್ಯಯನ ಮಾಡುವವರು ತಪ್ಪದೆ ಅಧ್ಯಯನ ಮಾಡುವ ಸಿನಿಮಾಗಳು 'ಗ್ಯಾಂಗ್ಸ್ ಆಫ್ ವಸೇಪುರ್'.

    English summary
    Anurag Kashyap once again praised South Indian movie industry and said Bollywood stop being original, its a cheap copy of Hollywood.
    Wednesday, February 1, 2023, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X