For Quick Alerts
  ALLOW NOTIFICATIONS  
  For Daily Alerts

  ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ': ನಟಿಯ ಆರೋಪಕ್ಕೆ ಅನುರಾಗ್ ಕಶ್ಯಪ್ ಸ್ಪಷ್ಟನೆ

  |

  ನಟಿ ಪಾಯಲ್ ಗೋಷ್ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪಕ್ಕೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿದ್ದಾರೆ. ''ನನ್ನನ್ನು ಕೆಟ್ಟದಾಗಿ ಬಲವಂತ ಮಾಡಿದ್ದ'' ಎಂದು ಪಾಯಲ್ ಇತ್ತೀಚಿಗಷ್ಟೆ ಟ್ವಿಟ್ಟರ್‌ನಲ್ಲಿ ಸ್ಟಾರ್ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದರು.

  ಅದಕ್ಕೆ ಸರಣಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿರುವ ಅನುರಾಗ್ ಕಶ್ಯಪ್ ''ಇನ್ನೂ ನನ್ನ ಮೇಲೆ ಸಾಕಷ್ಟು ಆರೋಪಗಳು ಬರಲಿದೆ, ಎಲ್ಲಿಂದ ಬರುತ್ತೋ ನನಗೂ ಗೊತ್ತಿಲ್ಲ. ಆದರೆ, ಮಾತನಾಡದಿರಲು ನನಗೆ ಸೂಚಿಸಿದ್ದಾರೆ. ನೋಡೋಣ'' ಎಂದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಸರಣಿ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ...

  ಪಾಯಲ್ ಮಾಡಿದ್ದ ಆರೋಪವೇನು?

  ಪಾಯಲ್ ಮಾಡಿದ್ದ ಆರೋಪವೇನು?

  ''ಅನುರಾಗ್ ಕಶ್ಯಪ್ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡು, ಬಲವಂತ ಮಾಡಿದ್ದ. ಪ್ರಧಾನಿ ಮೋದಿ ಅವರು ದಯವಿಟ್ಟು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಿ. ದೇಶಕ್ಕೆ ಆ ಸತ್ಯ ಏನು ಎಂಬುವುದು ಗೊತ್ತಾಗಲಿ. ಇದರಿಂದ ನನಗೆ ತೊಂದರೆಯಾಗಲಿದೆ ಎನ್ನುವ ಅರಿವು ನನಗಿದೆ. ನಾನು ಅಪಾಯಕ್ಕೆ ಸಿಲುಕಿಕೊಳ್ಳಲಿದ್ದೇನೆ. ನನಗೆ ಸಹಾಯ ಮಾಡಿ'' ಎಂದು ನಟಿ ಪಾಯಲ್ ದೂರಿದ್ದರು.

  ಲೈಂಗಿಕ ದೌರ್ಜನ್ಯ: ನವಾಜುದ್ದೀನ್ ಸಿದ್ದಿಕಿ ಸಹೋದರನ ವಿರುದ್ಧ ಸೋದರ ಸೊಸೆ ದೂರುಲೈಂಗಿಕ ದೌರ್ಜನ್ಯ: ನವಾಜುದ್ದೀನ್ ಸಿದ್ದಿಕಿ ಸಹೋದರನ ವಿರುದ್ಧ ಸೋದರ ಸೊಸೆ ದೂರು

  ಸ್ವಲ್ಪ ಮಿತಿ ಇರಲಿ ಮೇಡಂ

  ಸ್ವಲ್ಪ ಮಿತಿ ಇರಲಿ ಮೇಡಂ

  ''ಎಂಥಹಾ ಮಾತು, ನನ್ನನ್ನು ಮೌನಗೊಳಿಸುವ ಪ್ರಯತ್ನದಲ್ಲಿ ಇದು ತುಂಬಾ ಸಮಯ ತೆಗೆದುಕೊಂಡಿತು, ಪರವಾಗಿಲ್ಲ. ಆದರೆ ನೀವೊಬ್ಬ ಮಹಿಳೆಯಾಗಿದ್ದರೂ ಈ ಪ್ರಯತ್ನದಲ್ಲಿ ಇತರ ಮಹಿಳೆಯರನ್ನು ಎಳೆದಿದ್ದೀರಿ. ಸ್ವಲ್ಪ ಮಿತಿ ಇರಲಿ ಮೇಡಂ. ನೀವು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಆಧಾರವಿಲ್ಲ'' ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ.

  ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ

  ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ

  ''ನನ್ನ ಮೇಲೆ ಆರೋಪ ಹೊರಿಸುವ ಪ್ರಕ್ರಿಯೆಯಲ್ಲಿ ನನ್ನ ಕಲಾವಿದರು ಮತ್ತು ಬಚ್ಚನ್ ಕುಟುಂಬವನ್ನು ಎಳೆಯಲು ಪ್ರಯತ್ನಿಸಿದ್ದೀರಿ ಆದರೆ ಅದು ವಿಫಲವಾಗಿದೆ. ಮೇಡಂ ನಾನು ಎರಡು ಬಾರಿ ಮದುವೆಯಾಗಿದ್ದೇನೆ. ನಾನು ಅಪರಾಧಿಯಾಗಿದ್ದರೆ ಅದನ್ನು ಸ್ವೀಕರಿಸುತ್ತೇನೆ ಮತ್ತು ಬಹಳಷ್ಟು ಪ್ರೀತಿಸುತ್ತೇನೆ, ಅದನ್ನು ಒಪ್ಪುತ್ತೇನೆ ಸಹ'' ಎಂದು ಟ್ವೀಟ್ ಮಾಡಿದ್ದಾರೆ.

  ಹಿಂದಿ ಸಿನಿಮಾರಂಗಕಿಂತ ತೆಲುಗು ಸಿನಿಮಾರಂಗ ಗ್ರೇಟ್ ಎಂದ ನಟಿ ಕಂಗನಾಹಿಂದಿ ಸಿನಿಮಾರಂಗಕಿಂತ ತೆಲುಗು ಸಿನಿಮಾರಂಗ ಗ್ರೇಟ್ ಎಂದ ನಟಿ ಕಂಗನಾ

  ನಾನು ಈ ರೀತಿ ವರ್ತಿಸುವುದಿಲ್ಲ

  ನಾನು ಈ ರೀತಿ ವರ್ತಿಸುವುದಿಲ್ಲ

  ''ನನ್ನ ಮೊದಲ ಹೆಂಡತಿ ಅಥವಾ ಎರಡನೆ ಪತ್ನಿ ಆಗಲಿ, ಇನ್ನಾವುದೇ ಪ್ರೇಮಿ, ಅಥವಾ ನನ್ನ ಜೊತೆ ಕೆಲಸ ಮಾಡಿದ ನಟಿಯರಾಗಲಿ ಅಥವಾ ಯಾವಾಗಲೂ ನನ್ನೊಂದಿಗೆ ಕೆಲಸ ಮಾಡುತ್ತಿರುವ ಯುವತಿಯರು ಮತ್ತು ಮಹಿಳೆಯರ ತಂಡ, ಅಥವಾ ನಾನು ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಭೇಟಿಯಾದ ಅನೇಕ ಮಹಿಳೆಯರು ಹೀಗೆ ಯಾರ ಜೊತೆಯಲ್ಲೂ ನಾನು ಈ ರೀತಿ ವರ್ತಿಸುವುದಿಲ್ಲ ಮತ್ತು ಇಂತಹವುದಕ್ಕೆ ನಾನು ಪ್ರೋತ್ಸಾಹಿಸುವುದಿಲ್ಲ'' ಎಂದು ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ.

  ಮುಂದೆ ನೋಡೋಣ

  ಮುಂದೆ ನೋಡೋಣ

  ''ಏನಾಗುತ್ತದೆಯೋ ಅದನ್ನು ನಾವು ನೋಡೋಣ. ಇದು ನಿಮ್ಮ ವೀಡಿಯೊದಲ್ಲಿ ಗೋಚರಿಸುತ್ತದೆ, ಅದು ಎಷ್ಟು ನಿಜ, ಅದು ಎಷ್ಟು ಅಲ್ಲ. ನಿಮಗೆ ಆಶೀರ್ವಾದ ಮತ್ತು ಪ್ರೀತಿ. ನಿಮ್ಮ ಇಂಗ್ಲಿಷ್‌ಗೆ ನಾನು ಹಿಂದಿಯಲ್ಲಿ ಉತ್ತರಿಸಿದಕ್ಕೆ ಕ್ಷಮೆಯಾಚಿಸುತ್ತೇನೆ'' ಎಂದಿದ್ದಾರೆ.

  ಲೈಂಗಿಕ ದೌರ್ಜನ್ಯ ಪ್ರಕರಣ: 'ಐರಾವತ' ನಟಿ ಊರ್ವಶಿ, ಮಹೇಶ್ ಭಟ್‌ಗೆ ನೋಟಿಸ್ಲೈಂಗಿಕ ದೌರ್ಜನ್ಯ ಪ್ರಕರಣ: 'ಐರಾವತ' ನಟಿ ಊರ್ವಶಿ, ಮಹೇಶ್ ಭಟ್‌ಗೆ ನೋಟಿಸ್

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ದೂರು ದಾಖಲಿಸುವಂತೆ ಸೂಚನೆ

  ದೂರು ದಾಖಲಿಸುವಂತೆ ಸೂಚನೆ

  ಪಾಯಲ್ ಘೋಷ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ರೇಖಾ ಶರ್ಮಾ ''ಇದಕ್ಕೆ ಸೂಕ್ತ ವಿವರಗಳನ್ನು ನೀಡಿ, ದೂರು ದಾಖಲಿಸಿ, ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಸೂಚಿಸಿದ್ದಾರೆ. ನಟಿ ಕಂಗನಾ ಸಹ ನಟಿ ಪಾಯಲ್ ಘೋಷ್‌ಗೆ ಬೆಂಬಲವಾಗಿ ನಿಂತಿದ್ದಾರೆ.

  English summary
  Bollywood actress Payal ghosh made sexual harassment allegations on director Anurag kashyap. now, Anurag kashyap respond to Payal ghosh allegation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X