For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಮತ್ತು ಅನುಷ್ಕಾ ದಂಪತಿ ಮನೆಯಲ್ಲಿ ಮನೆಗೆಲಸದವರನ್ನು ಇಟ್ಟುಕೊಂಡಿಲ್ಲವಂತೆ

  By ಫಿಲ್ಮ್ ಡೆಸ್ಕ್
  |

  ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜಗತ್ತಿನ ಪವರ್ ಫುಲ್ ಕಪಲ್ ಗಳಲ್ಲಿ ಒಬ್ಬರು. ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿನ ತಂದೆ-ತಾಯಿಯಾಗಿರುವ ವಿರುಷ್ಕಾ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

  ಪವರ್ ಫುಲ್ ಕಪಲ್, ದೇಶದ ಶ್ರೀವಂತ ದಂಪತಿಗಳಲ್ಲಿ ಒಬ್ಬರಾಗಿರುವ ವಿರುಷ್ಕಾ ಮನೆಯಲ್ಲಿ ಮನೆತುಂಬಾ ಕೆಲಸದವರಿರುತ್ತಾರೆ, ಎಲ್ಲಾ ಕೆಲಸವನ್ನು ಮಾಡಿಕೊಡುತ್ತಾರೆ ಅಂತ ಅಂದುಕೊಂಡಿರುವವರೇ ಹೆಚ್ಚು. ಆದರೆ ಅಚ್ಚರಿಕರ ಸಂಗತಿ ಎಂದರೆ ವಿರುಷ್ಕಾ ಮನೆಯಲ್ಲಿ ಕೆಲಸದವರೇ ಇಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಭಾರತದ ಮಾಜಿ ಸೆಲೆಕ್ಟರ್ ಸರಂದೀಪ್ ಸಿಂಗ್ ಬಹಿರಂಗ ಪಡಿಸಿದ್ದಾರೆ.

  ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ನಾಮಕರಣ, ಹೆಸರೇನು?ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ನಾಮಕರಣ, ಹೆಸರೇನು?

  ಮೈದಾನಲ್ಲಿ ವಿರಾಟ್ ಅಗ್ರೆಸಿವ್ ಆಗಿ ಇರುತ್ತಾರೆ. ಮೈದಾನದಲ್ಲಿ ತೋರಿಸುವ ಸಿಟ್ಟು ಅನೇಕರಿಗೆ ಇಷ್ಟವಾಗುವುದಿಲ್ಲ. ವಿರಾಟ್ ಬಗ್ಗೆ ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದರೆ ಅವರು ತುಂಬಾ ಸರಳ ವ್ಯಕ್ತಿ. ಅವರ ಮನೆಯಲ್ಲಿ ಕೆಲಸದವರನ್ನು ಸಹ ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.

  ಇತ್ತೀಚಿಗೆ ಅವರ ಮನೆಗೆ ಭೇಟಿ ನೀಡಿದ್ದ ಸರಂದೀಪ್ ಸಿಂಗ್ ಅವರಿಗೆ ವಿರುಷ್ಕಾ ದಂಪತಿ ಅದ್ದೂರಿ ಆತಿಥ್ಯ ನೀಡಿದ್ದಾರೆ. ಮನೆಗೆ ಭೇಟಿ ನೀಡಿದ ಅತಿಥಿಗಳಿಗೆ ವಿರಾಟ್ ಮತ್ತು ಅನುಷ್ಕಾ ಅವರೆ ಊಟ ಬಡಿಸುತ್ತಾರೆ. ವಿರಾಟ್ ಬಗ್ಗೆ ಎಲ್ಲಾ ಆಟಗಾರರು ಗೌರವ ಹೊಂದಿದ್ದಾರೆ. ಕೊಹ್ಲಿ ತುಂಬಾ ವಿನಮ್ರ ವ್ಯಕ್ತಿ ಎಂದು ಹೇಳಿದ್ದಾರೆ.

  ವಿರಾಟ್ ಮತ್ತು ಅನುಷ್ಕಾ ಇಬ್ಬರು ದುಬಾರಿ ಮನೆಯಲ್ಲಿ ನೆಲೆಸಿದ್ದಾರೆ. 34 ಕೋಟಿ ಬೆಲೆ ಬಾಳುವ ಮನೆಯಲ್ಲಿ ಇಬ್ಬರು ವಾಸವಾಗಿದ್ದಾರೆ. ತಮ್ಮ ಕೆಲಸಗಳನ್ನು ತಾವೆ ಮಾಡಿಕೊಳ್ಳುತ್ತಾರೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಚಾರ. ಅಂದಹಾಗೆ ಜನವರಿ ತಿಂಗಳಲ್ಲಿ ಹೆಣ್ಣು ಮಗುವನ್ನು ಸ್ವಾಗತ ಮಾಡಿರುವ ಈ ಜೋಡಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

  ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು | Filmibeat Kannada

  ಅನುಷ್ಕಾ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ವೆಬ್ ಸೀರಿಸ್ ನಲ್ಲಿ ಮಿಂಚಿದ್ದ ಅನುಷ್ಕಾ ಒಟಿಟಿ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಸದ್ಯದಲ್ಲೇ ಬಣ್ಣ ಹಚ್ಚುವ ಸಾಧ್ಯತೆ ಇದೆ.

  English summary
  Actress Anushka Sharma and Virat Kohli have no Servants at house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X