ಶಿವಮೊಗ್ಗ, ತುಮಕೂರು, ಶೃಂಗೇರಿಯ ರಸ್ತೆಗಳಲ್ಲಿ ವಿರಾಟ್ ಅನುಷ್ಕಾ ಸುತ್ತಾಟ!
Recommended Video

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಡಿಸೆಂಬರ್ 11ಕ್ಕೆ ನಡೆದಿದೆ. ಮದುವೆ ಆದ ಮೇಲೆ ಸಾಮಾನ್ಯವಾಗಿ ಎಲ್ಲರೂ ಹನಿಮೂನ್ ಗೆ ಹೋಗುವ ಹಾಗೆ ವಿರಾಟ್ ಮತ್ತು ಅನುಷ್ಕಾ ಕೂಡ ಹೋಗಿದ್ದರು. ಜೊತೆಗೆ ಹನಿಮೂನ್ ಫೋಟೋವನ್ನು ಅನುಷ್ಕಾ ತಮ್ಮ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ 'ಇದು ಅಕ್ಷರಶಃ ಸ್ವರ್ಗ' ಅಂತ ಬರೆದುಕೊಂಡಿದ್ದರು.
ಇಟಲಿಯಲ್ಲಿ ಮದುವೆ ಆದ ಅನುಷ್ಕಾ - ವಿರಾಟ್ ಈಗ ವಿದೇಶ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅದರಲ್ಲಿಯೂ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡುತ್ತಿದ್ದಾರೆ. ಶಿವಮೊಗ್ಗ, ತುಮಕೂರು, ಶೃಂಗೇರಿಯ ಬೀದಿಗಳಲ್ಲಿ ಈ ನವ ಜೋಡಿ ವಿಹರಿಸುತ್ತಿದೆ. ಈ ವಿಷಯ ಕೇಳಿದರೆ ಇದು ನಿಜವೇ ಎಂದು ಆಶ್ಚರ್ಯ ಆಗುತ್ತದೆ. ಆದರೆ ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮಗೂ ಈ ಸುದ್ದಿ ಕೇಳಿ ಸಣ್ಣ ಕುತೂಹಲ ಹುಟ್ಟಿರಬಹುದು.. ಸೋ, ಅದೇ ಕುತೂಹಲದಿಂದ ಮುಂದೆ ಓದಿ....

ಫೋಟೋ ಟ್ರೋಲ್
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹನಿಮೂನ್ ನಲ್ಲಿ ಒಂದು ಫೋಟೋ ತೆಗೆದುಕೊಂಡಿದ್ದರು. ಸುತ್ತ ಮಂಜಿನ ನಡುವೆ ಇಬ್ಬರು ಒಟ್ಟಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಆದರೆ ಈಗ ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯ ಸುಂದರ ಫೋಟೋಗಳನ್ನು ನೋಡಲು ಈ ಲಿಂಕ್ ಕ್ಲಿಕ್ಕಿಸಿ

ಶಿವಮೊಗ್ಗದಲ್ಲಿ ವಿರಾಟ್ ಅನುಷ್ಕಾ
ಶಿವಮೊಗ್ಗ ನಗರದಲ್ಲಿರುವ ಪ್ರಸಿದ್ಢ ದೇವಸ್ಥಾನ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಕೂಡ ಒಂದು. ಈ ದೇವಾಲಯಕ್ಕೆ ಈಗ ವಿರಾಟ್ ಅನುಷ್ಕಾ ಬೇಟಿ ನೀಡಿರುವ ರೀತಿಯ ಫೋಟೋ ಎಡಿಟ್ ಮಾಡಲಾಗಿದೆ.

ತುಮಕೂರಿನಲ್ಲಿ ನವ ಜೋಡಿ
ತುಮಕೂರಿನಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಕೊಹ್ಲಿ ಅನುಷ್ಕಾ ಫೋಟೋ ತೆಗೆದುಕೊಂಡಿರುವ ರೀತಿಯಲ್ಲಿ ಅಭಿಮಾನಿಗಳು ಈ ಫೋಟೋವನ್ನು ಟ್ರೋಲ್ ಮಾಡಿದ್ದಾರೆ.

ಪುನೀತ್ ಸಿನಿಮಾ ನೋಡೋಕ್ಕೆ ಬಂದ್ರು
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ನಾಳೆ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ನೋಡುವುದಕ್ಕೆ ಅನುಷ್ಕಾ ಮತ್ತು ವಿರಾಟ್ ಬಂದಿದ್ದಾರೆ ಎಂಬ ಶೈಲಿಯ ಫೋಟೋ ವೈರಲ್ ಆಗಿದೆ.

ಶಾರದಾಂಬೆಯ ದರ್ಶನ
ಶೃಂಗೇರಿಯ ದೇವಾಲಯಕ್ಕೆ ಹೋಗಿ ಶಾರದಾಂಬೆಯ ದರ್ಶನ ಪಡೆದು ವಿರಾಟ್ ಅನುಷ್ಕಾ ಬಂದಿದ್ದಾರೆ ಎಂಬ ರೀತಿಯ ಒಂದು ಫೋಟೋ ಗಮನ ಸೆಳೆಯುತ್ತಿದೆ.

ಪ್ಯಾಟೆ ಮಂದಿ ಹಳ್ಳಿಗೆ ಬಂದ್ರು
ಮದುವೆಯ ನಂತರ ತುಮಕೂರಿನ ಆಂಜನೇಯ ದೇವಸ್ಥಾನ ಮತ್ತು ನಾಮದಚಿಲುವೆ ಎಂಬ ಹಳ್ಳಿಗೆ ಈ ನವ ಜೋಡಿ ಬಂದಿದ್ದಾರೆ ಎಂಬ ಫೋಟೋ ಸಖತ್ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

'ಬಾನಲ್ಲೆ ಬಾನಲ್ಲೆ ಮಧುಚಂದ್ರಕೆ'
'ಬಾನಲ್ಲೆ ಬಾನಲ್ಲೆ ಮಧುಚಂದ್ರಕೆ' ಸಿನಿಮಾ ನವ ಜೋಡಿಗಳ ಹನಿಮೂನ್ ಬಗ್ಗೆ ಚಿತ್ರೀಸಲಾಗಿರುವ ಕನ್ನಡ ಸಿನಿಮಾ. ಈ ಸಿನಿಮಾದ ಪಾರ್ಟ್ 2 ಅನುಷ್ಕಾ ಮತ್ತು ವಿರಾಟ್ ಎಂದು ಅವರ ಹನಿಮೂನ್ ದಿನವನ್ನು ಕೆಲವರು ಬಣ್ಣಿಸಿದ್ದಾರೆ.

1.5 ಮಿಲಿಯನ್ ಮೆಚ್ಚುಗೆ
ಅನುಷ್ಕಾ ಶರ್ಮಾ ತಮ್ಮ ಹನಿಮೂನ್ ಫೋಟೋವನ್ನು ಅವರ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಫೇಸ್ ಬುಕ್ ನಲ್ಲಿ 1.5 ಮಿಲಿಯನ್ ಅಭಿಮಾನಿಗಳು ಈ ಫೋಟೋವನ್ನು ಮೆಚ್ಚಿದ್ದಾರೆ.

ಆರತಕ್ಷತೆ ಸಂಭ್ರಮ
ಇಟಲಿಯಲ್ಲಿ ವಿವಾಹವಾದ ನಂತರ ಈಗ ದೆಹಲಿಯಲ್ಲಿ ನಾಳೆ (ಡಿಸೆಂಬರ್ 21) ಹಾಗೂ ಮುಂಬೈನಲ್ಲಿ ಡಿಸೆಂಬರ್ 26ಕ್ಕೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications











