For Quick Alerts
  ALLOW NOTIFICATIONS  
  For Daily Alerts

  ಕೊಹ್ಲಿಗೆ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಹಾಕಿದ ಅನುಷ್ಕಾ ಶರ್ಮಾ

  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ಒಂದೇ ಬೆರಳಲ್ಲಿ ಬ್ಯಾಟ್ ಬ್ಯಾಲೆನ್ಸ್ ಮಾಡುವ ಚಾಲೆಂಜ್‌ನಲ್ಲಿ ವಿರಾಟ್ ಎದುರು ಅನುಷ್ಕಾ ಸ್ಪರ್ಧಿಸಿದ್ದಾರೆ. ಆದರೆ, ಅಂತಿಮವಾಗಿ ಯಾರು ಜಯಗಳಿಸಿದರು ಎನ್ನುವುದು ಕುತೂಹಲವಾಗಿ ಉಳಿದುಕೊಂಡಿದೆ.

  ಕೊನೆಯವರೆಗೂ ಅನುಷ್ಕಾ ಮತ್ತು ಕೊಹ್ಲಿ ಇಬ್ಬರು ಬ್ಯಾಟ್ ಬ್ಯಾಲೆನ್ಸ್‌ನಲ್ಲಿ ನಿಯಂತ್ರಣ ತಪ್ಪಲಿಲ್ಲ. ಹಾಗಾಗಿ, ವಿನ್ನರ್ ಯಾರೆಂದು ನಿರ್ಧರಿಸಲು ಸಾಧ್ಯವಾಗಿಲ್ಲ.

  ಉಟ್ಟಿದ್ದ ಬಟ್ಟೆ ಮಾರಾಟಕ್ಕಿಟ್ಟ ಅನುಷ್ಕಾ ಶರ್ಮಾಉಟ್ಟಿದ್ದ ಬಟ್ಟೆ ಮಾರಾಟಕ್ಕಿಟ್ಟ ಅನುಷ್ಕಾ ಶರ್ಮಾ

  ಅಂದ್ಹಾಗೆ, ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್‌ನ್ನು ಅಭಿಮಾನಿಗಳು ಸಹ ಮುಂದುವರಿಸಬಹುದು ಎಂದು ವಿರುಷ್ಕಾ ಕರೆ ನೀಡಿದ್ದಾರೆ.

  ಇಂಗ್ಲೆಂಡ್‌ನಲ್ಲಿ ಅನುಷ್ಕಾ-ಕೊಹ್ಲಿ

  ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ಗಾಗಿ ಪತಿ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸಹ ತಮ್ಮ ಮಗುವಿನೊಂದಿಗೆ ಇಂಗ್ಲೆಂಡ್ ತೆರಳಿದ್ದರು. ಈಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯಲಿದ್ದು, ಮುಗಿಯುವರೆಗೂ ಯುಕೆಯಲ್ಲಿ ಉಳಿಯಲಿದ್ದಾರೆ.

  ಜೀರೋ ಕೊನೆಯ ಸಿನಿಮಾ

  ಅನುಷ್ಕಾ ಶರ್ಮಾ ಕೊನೆಯದಾಗಿ 2018ರಲ್ಲಿ ತೆರೆಕಂಡ 'ಜೀರೋ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದಾದ ಬಳಿಕ ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡ ನಟಿ ನಿರ್ಮಾಪಕಿಯಾಗಿ ವೆಬ್ ಸಿರೀಸ್, ಸಿನಿಮಾ ನಿರ್ಮಿಸಿದರು.

  ಮಗಳಿಗೆ ವಮಿಕಾ ಎಂದು ಹೆಸರು

  Recommended Video

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada

  ಅನುಷ್ಕಾ ಶರ್ಮಾ ಜನವರಿ 11, 2021ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಫೆಬ್ರವರಿ 1 ರಂದು ಮಗಳಿಗೆ ನಾಮಕರಣ ಮಾಡಿದರು. ಅನುಷ್ಕಾ-ವಿರಾಟ್ ಪುತ್ರಿಗೆ ವಮಿಕಾ ಎಂದು ಹೆಸರಿಟ್ಟರು.

  English summary
  Bollywood actress Anushka Sharma and Virat Kohli takes on Bat Balance Challenge; See Who Wins.
  Saturday, July 3, 2021, 9:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X