Don't Miss!
- Sports
ಟೋಕಿಯೋ ಒಲಿಂಪಿಕ್ಸ್: ಫೈನಲ್ ಪ್ರವೇಶಿಸುವಲ್ಲಿ ಅರ್ಜುನ್ ಮತ್ತು ಅರವಿಂದ್ ವಿಫಲ - Automobiles
ಮಾರುತಿ ಸುಜುಕಿ ಸ್ವಿಫ್ಟ್ ಮತ್ತಷ್ಟು ದುಬಾರಿ- ವರ್ಷದಲ್ಲಿ ನಾಲ್ಕನೇ ಬಾರಿಗೆ ದರ ಏರಿಕೆ! - News
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಫ್ಲಿಪ್ಕಾರ್ಟ್ - Education
CLAT Results 2021 : ಫಲಿತಾಂಶ ವೀಕ್ಷಿಸುವುದು ಹೇಗೆ ಇಲ್ಲಿ ತಿಳಿಯಿರಿ - Finance
ಸೆನ್ಸೆಕ್ಸ್ 500 ಪಾಯಿಂಟ್ಸ್ ಕುಸಿತ: ನಿಫ್ಟಿ 160 ಪಾಯಿಂಟ್ಸ್ ಇಳಿಕೆ - Lifestyle
ಶ್ರಾವಣ ಮಾಸ 2021: ಯಾವಾಗ ಪ್ರಾರಂಭ? ಈ ತಿಂಗಳ ಮಹತ್ವ ಹಾಗೂ ಪೂಜಾ ವಿಧಿಗಳೇನು? - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾ ಸಂಕಷ್ಟಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿನ ಹಸ್ತ
ಮೇ 1 ರಂದು ಅನುಷ್ಕಾ ಶರ್ಮಾ ಹುಟ್ಟುಹಬ್ಬ. ಕೊರೊನಾ ಸಂಕಷ್ಟಕ್ಕೆ ಸಿಲುಕಿ ದೇಶವೇ ದುಃಖದಲ್ಲಿರುವಾಗ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡವೆಂಬ ನಿರ್ಣಯ ತಳೆದು ಆಚರಣೆಯಿಂದ ದೂರ ಉಳಿದರು ನಟಿ ಅನುಷ್ಕಾ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ''ದೇಶವೇ ನೋವು ಮತ್ತು ಸಂಕಷ್ಟದ ಸ್ಥಿತಿಯಲ್ಲಿದೆ ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸಾಗಲಿಲ್ಲ. ಆದರೆ ಹಲವರು ನನ್ನ ಹುಟ್ಟುಹಬ್ಬಕ್ಕೆ ವಿಶೇಷ ಸಂದೇಶ ಕಳುಹಿಸಿದ್ದೀರಿ, ಅವರಿಗೆಲ್ಲ ಧನ್ಯವಾದಗಳು'' ಎಂದಿದ್ದಾರೆ.
ಮುಂದುವರೆದು, 'ನಾನು ಮತ್ತು ವಿರಾಟ್ ಕೊಹ್ಲಿ ಕೊರೊನಾದ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನಿರ್ಣಯಿಸಿದ್ದೇವೆ. ನಾವೊಂದು ಅಭಿಯಾನ ಆರಂಭಿಸಲಿದ್ದೇವೆ, ನೀವು ಸಹ ಆ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳುತ್ತೇವೆ' ಎಂದಿದ್ದಾರೆ ಅನುಷ್ಕಾ ಶರ್ಮಾ.
'ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇರಬೇಕು. ನಾವೆಲ್ಲರೂ ಜಾಗೃತರಾಗಿರಬೇಕು. ದೇಶದ ಜೊತೆಗೆ ನಾವು ನಿಲ್ಲಬೇಕು. ಸಂಕಷ್ಟದಲ್ಲಿರುವವರಿಗೆ ನಾವು ಜೊತೆಯಾಗಬೇಕು. ಎಲ್ಲರೂ ಜಾಗೃತೆಯಾಗಿರಿ, ಸುರಕ್ಷತೆಯಿಂದಿರಿ' ಎಂದು ಅನುಷ್ಕಾ ಶರ್ಮಾ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಇದೇ ವರ್ಷಾರಂಭದಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.
ಅನುಷ್ಕಾ ಶರ್ಮಾ ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಆದರೆ ವೆಬ್ ಸರಣಿ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡುತ್ತಿದ್ದಾರೆ. ಆದರೆ ಐಪಿಎಲ್ ಮೇಲೆಯೂ ಕೊರೊನಾ ಕರಿಛಾಯೆ ಕಾಣಿಸಿಕೊಂಡಿದ್ದು, ಪಂದ್ಯಾವಳಿ ಮುಂದೂಡಲ್ಪಡುವ ಸಾಧ್ಯತೆ ಇದೆ.


Click it and Unblock the Notifications

































