ಮದುವೆ ನಂತರ ವಿರಾಟ್ ಅನುಷ್ಕಾ ಆರತಕ್ಷತೆಗೆ ಭರ್ಜರಿ ತಯಾರಿ

By Pavithra

ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಹಾಗೂ ಇಂಡಿಯನ್ ಕ್ರಿಕೆಟ್ ಟೀಂ ನ ಹ್ಯಾಂಡ್ ಸಮ್ ಹಂಕ್ ವಿರಾಟ್ ಕೋಹ್ಲಿ ಮದುವೆ ಇತ್ತೀಚಿಗಷ್ಟೇ ನಡೆದಿದೆ. ಇಟಲಿಯಲ್ಲಿ ಸ್ನೇಹಿತರು ಹಾಗೂ ಆಪ್ತ ಸಂಬಂಧಿಕರ ಮಧ್ಯೆ ನಡೆದ ಮದುವೆಯ ನಂತರ ಇಬ್ಬರೂ ಹನಿಮೂನ್ ಗಾಗಿ ರೋಮ್ ಗೆ ಹಾರಿದ್ದಾರೆ.

Anushka Sharma and Virat Kohli wedding reception card becoming viral

ಇತ್ತ ಅನುಷ್ಕಾ ಹಾಗೂ ವಿರಾಟ್ ಫ್ಯಾಮಿಲಿಯವರು ಇಬ್ಬರ ಆರತಕ್ಷತೆಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರು ಸ್ಟಾರ್ ಗಳಾಗಿರುವುದರಿಂದ ಎರಡು ದಿನಗಳು ರಿಸೆಪ್ಷನ್ ನಡೆಸಲು ಪ್ಲಾನ್ ಮಾಡಿದ್ದಾರೆ. ಡಿ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈ ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಎರಡು ದಿನಗಳ ಅದ್ದೂರಿ ಸಮಾರಂಭದಲ್ಲಿ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ಸೆಲಬ್ರೆಟಿಗಳು ಭಾಗಿಯಾಗಲಿದ್ದಾರೆ.

Anushka Sharma and Virat Kohli wedding reception card becoming viral

2017ರ ಅದ್ದೂರಿ ವೈಭವದ ಮದುವೆ ಇದಾಗಿದ್ದು ಹೊಸ ಜೋಡಿಯನ್ನು ಕಂಣ್ತುಂಬಿಕೊಳ್ಳಲು ಇಬ್ಬರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅನುಷ್ಕಾ ಹಾಗೂ ವಿರಾಟ್ ಆರತಕ್ಷತೆಯ ಆಮಂತ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸದಾಗಿ ಮದುವೆಯಾಗಿರುವ ಜೋಡಿಹಕ್ಕಿಗಳಿಗೆ ಟ್ವಿಟ್ಟರ್ ನಲ್ಲಿ ಶುಭಾಷಯಗಳ ಸುರಿಮಳೆ ಹರಿದು ಬರ್ತಿದೆ. ವಿಷ್ ಮಾಡಿದ ಎಲ್ಲರಿಗೂ ಅನುಷ್ಕಾ ಶರ್ಮಾ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

Anushka Sharma and Virat Kohli wedding reception card becoming viral

ಈಗಾಗಲೇ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಎಲ್ಲಾ ಸೆಲಬ್ರೆಟಿಗಳು, ಆಪ್ತರಿಗೂ ಹಾಗೂ ಸ್ನೇಹಿತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಅನುಷ್ಕಾ ಮತ್ತು ವಿರಾಟ್. ಕ್ರೀಮ್ ಕಲರ್ ಬಣ್ಣವಿರುವ ರಿಸೆಪ್ಷನ್ ಕಾರ್ಡ್ ಮೇಲೆ ಫ್ಲವರ್ ಪ್ರಿಂಟ್ ಮಾಡಿಸಲಾಗಿದೆ. ಸುಂದರ ಆಮಂತ್ರಣ ಪತ್ರಿಕೆಯ ಜೊತೆಯಲ್ಲಿ ಅರ್ಥ ಪೂರ್ಣ ಸಂದೇಶ ಹಾಗೂ ಇಂದು ಸಸಿಯನ್ನ ನೀಡಿ ವಿವಾಹದ ಆರತಕ್ಷತೆಗೆ ಆಹ್ವಾನ ಮಾಡುತ್ತಿದ್ದಾರೆ .

More from Filmibeat

English summary
Actress Anushka Sharma and Virat Kohli wedding reception card becoming viral in twitter, December 21st and 26 two days reception are held in delhi and mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X