ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿರಾಟ್-ಅನುಷ್ಕಾರ 'ಈ' ಫೋಟೋ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಶೇರ್ ಮಾಡಿರುವ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಲಾಕ್ ಡೌನ್ ನಡುವೆಯೂ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅನುಷ್ಕಾ ಅಭಿನಯದ ಪಾತಾಳ್ ಲೋಕ್ ವೆಬ್ ಸರಣಿ ರಿಲೀಸ್ ಆಗಿದೆ. ಅನುಷ್ಕಾರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದೆ ಖುಷಿಯಲ್ಲಿ ಅನುಷ್ಕಾ ಶರ್ಮಾ ಮನೆಯಲ್ಲಿ ಪಾತಾಳ್ ಲೋಕ್ ಮೊದಲ ಭಾಗ ವೀಕ್ಷಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ವೆಬ್ ಸರಣಿ ವೀಕ್ಷಿಸುತ್ತಿರುವ ಫೋಟೋ ಜೊತೆಗೆ ಲಿವಿಂಗ್ ಹಾಲ್ ನ ಟಿವಿ ಕೆಳಗೆ ಇಟ್ಟಿರುವ ಅನುಷ್ಕಾ ಮತ್ತು ವಿರಾಟ್ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

Anushka Sharma And Virat Kohli Wedding Sketch Portrait Viral

ಇಬ್ಬರ ಮದುವೆ ಫೋಟೋ ಇದಾಗಿದೆ. ಕೈಯಲ್ಲಿ ಬಿಡಿಸಿರುವ ಇಬ್ಬರ ಫೋಟೋ ವ್ಯಂಗ್ಯ ಚಿತ್ರದ ರೂಪದಲ್ಲಿದೆ. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ ಹರಿದು ಬರುತ್ತಿವೆ.

ಅನುಷ್ಕಾ ಮತ್ತು ವಿರಾಟ್ 2017 ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಅನುಷ್ಕಾ ಸಿನಿಮಾ ತೆರೆ ಕಾಣದೆ ಎರಡು ವರ್ಷದ ಮೇಲಾಗಿದೆ. ಸದ್ಯ ಪಾತಾಳ್ ಲೋಕ್ ವೆಬ್ ಸಿರೀಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

More from Filmibeat

English summary
Actress Anushka Sharma and Virat Kohli wedding sketch portrait viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X