ಆಮೀರ್ ಖಾನ್ '3 ಈಡಿಯಟ್ಸ್'ಗೆ ಆಡಿಷನ್ ನೀಡಿದ್ದ ಅನುಷ್ಕಾ: ವಿಡಿಯೋ ವೈರಲ್
ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅನುಷ್ಕಾ ತೆರೆಮೇಲೆ ಬರದೆ ಮೂರು ವರ್ಷಗಳ ಮೇಲಾಗಿದೆ. ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ನಟಿ ಅನುಷ್ಕಾ 2009ರಲ್ಲಿ 3 ಈಡಿಯಟ್ಸ್ ಸಿನಿಮಾಗಾಗಿ ನೀಡಿದ ಆಡಿಷನ್ ವಿಡಿಯೋ ಈಗ ವೈರಲ್ ಆಗಿದೆ.
ಅನುಷ್ಕಾ ಈ ಆಡಿಷನ್ ನಲ್ಲಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ಡೈಲಾಗ್ ಅನ್ನು ಹೇಳಿದ್ದಾರೆ. ಹಸಿರು ಬಣ್ಣದ ಟಾಪ್ ಧರಿಸಿರುವ ಯಂಗ್ ಅನುಷ್ಕಾ ಅವರ ಈ ವಿಡಿಯೋ ಈಗ ಅವರ ಫ್ಯಾನ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
3 ಈಡಿಯಟ್ಸ್ ನಲ್ಲಿ ಆಮೀರ್ ಖಾನ್, ಮಾಧವನ್ ಮತ್ತು ಶರ್ಮನ್ ಜೋಶಿ ಮುಖ್ಯ ಭೂಮಿಕೆಯಲ್ಲಿದ್ದರು. ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಆದರೆ ಅನುಷ್ಕಾ ಆಯ್ಕೆಯಾಗಿರಲಿಲ್ಲ. ಅನುಷ್ಕಾ ಜಾಗದಲ್ಲಿ ಕರೀನಾ ಮಿಂಚಿದ್ದರು.

5 ವರ್ಷಗಳ ಬಳಿಕ ಅನುಷ್ಕಾ, ರಾಜ್ ಕುಮಾರ್ ಹಿರಾನಿ ಅವರ ಪಿಕೆ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಆಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅನುಷ್ಕಾ ನಾಯಕಿಯಾಗಿ ಮಿಂಚಿದ್ದರು.
ನಟಿ ಅನುಷ್ಕಾ ಶರ್ಮಾ ರಬ್ ದೇ ಬನಾದಿ ಜೋಡಿ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಸೂಪರ್ ಸ್ಟಾರ್ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಗೆಟ್ಟಿಸಿಕೊಳ್ಳುವ ಮೂಲಕ ಮೊದಲ ಚಿತ್ರದಲ್ಲೇ ಸ್ಟಾರ್ ಆಗಿ ಹೊರಹೊಮ್ಮುತ್ತಾರೆ. ಬಳಿಕ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಸಿನಿಮಾದಿಂದ ಬ್ರೇಕ್ ಪಡೆದಿರುವ ಅನುಷ್ಕಾ ಯಾವಾಗ ವಾಪಸ್ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











