ಅನುಷ್ಕಾಗೆ ಇಂತಹ ಸ್ಥಿತಿ ಬರಬಾರದಿತ್ತು: ಕೊಹ್ಲಿ ಪತ್ನಿಯನ್ನ ಕಿಚಾಯಿಸಿದ ಚಹಾಲ್.!
ವಿರಾಟ್ ಕೊಹ್ಲಿ ಜೊತೆ ವೆಸ್ಟ್ ಇಂಡೀಸ್ ನಲ್ಲಿರುವ ಅನುಷ್ಕಾ ಶರ್ಮಾ ಇತ್ತೀಚಿಗಷ್ಟೆ ಬಿಕಿನಿ ಫೋಟೋವೊಂದು ಹಂಚಿಕೊಂಡಿದ್ದರು. ಈ ಫೋಟೋಗೆ 'Sunkissed and blessed' ಎಂಬ ಅಡಿಬರಹ ಹಾಕಿದ್ದ ಅನುಷ್ಕಾಗೆ ಪತಿ ವಿರಾಟ್ ಕೊಹ್ಲಿ ಹಾರ್ಟ್, ಲವ್ ಎಮೋಜಿ ಹಾಕಿದ್ದರು.
ಈ ಫೋಟೋಗೆ ಅನುಷ್ಕಾ ಇನ್ಸ್ಟಾಗ್ರಾಂನಲ್ಲಿ 23 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಇನ್ಸ್ಟಾದಲ್ಲಿ ಮಾತ್ರವಲ್ಲ ಟ್ವಿಟ್ಟರ್ ನಲ್ಲೂ ಈ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ.
Recommended Video
ಮೇಮ್ಸ್ ಮೇಕರ್ಸ್ ಗೆ ಅಚ್ಚುಮೆಚ್ಚಾಗಿರುವ ಅನುಷ್ಕಾ ಶರ್ಮಾ ಅವರ ಈ ಫೋಟೋ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು, ಕ್ರಿಕೆಟಿಗ ಚಹಾಲ್, ರೋಹಿತ್, ನಟಿ ಪ್ರಿಯಾಂಕಾ ಚೋಪ್ರ ಎಲ್ಲರೂ ಅನುಷ್ಕಾ ಜೊತೆ ಟ್ರೋಲ್ ಆಗ್ತಿದ್ದಾರೆ. ಚಿತ್ರಗಳ ಸಮೇತ ಮುಂದೆ ನೋಡಿ...

ಕೊಹ್ಲಿ ಪತ್ನಿಯನ್ನ ಗುರಾಯಿಸಿದ ಚಹಾಲ್
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯಜುವೇಂದ್ರ ಚಹಾಲ್, ವಿರಾಟ್ ಕೊಹ್ಲಿ ಪತ್ನಿಯನ್ನ ಗುರಾಯಿಸುವ ರೀತಿ ಮೇಮ್ಸ್ ವೈರಲ್ ಆಗಿದೆ. ಚಹಾಲ್ ಅವರ ವರ್ಲ್ಡ್ ಕಪ್ ಟೂರ್ನಿ ವೇಳೆ ಕ್ಲಿಕ್ಕಿಸಿರುವ ಫೋಟೋ ಬಳಸಿ, ಅನುಷ್ಕಾ ಬಿಕಿನಿ ಫೋಟೋಗೆ ಟ್ರೋಲ್ ಮಾಡಲಾಗಿದೆ. ಇದು ನೋಡಲು ಬಹಳ ಮಜಾ ಕೊಡ್ತಿದೆ.

ಕೆಲಸ ಪ್ರಗತಿಯಲ್ಲಿದೆ
ಸಾಮಾನ್ಯವಾಗಿ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದರೇ ಅಲ್ಲಿ ರಸ್ತೆಗೆ ಅಡ್ಡವಾಗಿ ಇಡುವ ವಸ್ತುವನ್ನ ಗಮನಿಸಿರಬಹುದು. ಅನುಷ್ಕಾ ಶರ್ಮಾ ಅವರ ಬಿಕಿನಿ ಕಲರ್ ಮತ್ತು ಕಾಮಗಾರಿ ವೇಳೆ ಬಳಕೆಯಾಗುವ ಆ ವಸ್ತುವೂ ಒಂದೇ ರೀತಿಯಾಗಿದೆ ಎಂದು ಟ್ರೋಲ್ ಆಗಿದೆ.

ವಿ.ಎಲ್.ಸಿ ಪ್ಲೇಯರ್
ಮೊಬೈಲ್, ಕಂಪ್ಯೂಟರ್ ಗಳಲ್ಲಿ ಯಾವುದೇ ವಿಡಿಯೋ ಪ್ಲೇ ಮಾಡಿದಾಗ ಸಹಜವಾಗಿ ವಿ.ಎಲ್.ಸಿ ಪ್ಲೇಯರ್ ಬಳಕೆ ಮಾಡುತ್ತಾರೆ. ವಿ.ಎಲ್.ಸಿ ಚಿಹ್ನೆಯಂತೆ ಅನುಷ್ಕಾ ಶರ್ಮಾ ಅವರ ಬಿಕಿನಿ ಬಣ್ಣ ಮತ್ತು ಅವರು ಕೂತಿರುವ ಶೈಲಿ ಇದೆ ಎಂದು ಟ್ರೋಲ್ ಆಗಿದೆ.

ಮೋದಿ ಫೋಟೋಶೂಟ್
ನರೇಂದ್ರ ಮೋದಿ ಅವರು, ಬೀಚ್ ಬಳಿ ಬಿಕಿನಿಯಲ್ಲಿ ಕುಳಿತುಕೊಂಡಿರುವ ಅನುಷ್ಕಾ ಶರ್ಮಾ ಅವರ ಫೋಟೋಶೂಟ್ ಮಾಡುತ್ತಿದ್ದಾರೆ. ಇಂತಹದೊಂದು ಮೇಮ್ಸ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಪ್ರಿಯಾಂಕಾ ಡ್ರೆಸ್ ಮೇಲೆ ಅನುಷ್ಕಾ
ಈ ಹಿಂದೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಅವರ ಡ್ರೆಸ್ ಭಾರಿ ಟ್ರೋಲ್ ಆಗಿತ್ತು. ಇದೀಗ, ಆ ಡ್ರೆಸ್ ಮೇಲೆ ಅನುಷ್ಕಾ ಶರ್ಮಾ ಕುಳಿತುಕೊಂಡಿದ್ದಾರೆ ಎಂಬಂತೆ ಟ್ರೋಲ್ ಮಾಡಲಾಗಿದೆ.


Click it and Unblock the Notifications











