ಗರ್ಭಿಣಿ ವದಂತಿಗಳೆಲ್ಲಾ 'ಸಿಲ್ಲಿ' ಎಂದ ಅನುಷ್ಕಾ ಶರ್ಮಾ

ಇನ್ನು ಕೆಲವೇ ಕೆಲವು ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಾರೆ. ಕಳೆದ ವರ್ಷದ ಡಿಸೆಂಬರ್ 11 ರಂದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿವಾಹ ಮಹೋತ್ಸವ ಇಟಲಿಯಲ್ಲಿ ನಡೆದಿತ್ತು.

ಹೀಗಿರುವಾಗಲೇ, ಅನುಷ್ಮಾ ಶರ್ಮಾ ಗರ್ಭಿಣಿ ಎಂಬ ವದಂತಿ ಆಗಾಗ ಹರಿದಾಡುತ್ತಲೇ ಇದೆ. ಪದೇ ಪದೇ ಪ್ರೆಗ್ನೆನ್ಸಿ ರೂಮರ್ ಗಳನ್ನು ಕೇಳಿ ಕೇಳಿ ಕಿರಿಕಿರಿಗೊಂಡ ಅನುಷ್ಕಾ ಶರ್ಮಾ 'ಸಿಲ್ಲಿ' ಎಂದಿದ್ದಾರೆ.

Anushka Sharma breaks silence on Pregnancy rumors

''ಇಂತಹ ರೂಮರ್ ಗಳು ಸಿಲ್ಲಿ. ತಿಂಗಳು ಉರುಳಿದರೆ ಯಾರೂ ಅದನ್ನ ಬಚ್ಚಿಡಲು ಸಾಧ್ಯವಿಲ್ಲ. ಯಾರು ಏನು ಬೇಕಾದರೂ ಬರೆದುಕೊಳ್ಳಲಿ, ಕೆಲ ದಿನ ಆದ್ಮೇಲೆ ಅವರೇ ಫೂಲ್ ಆಗುತ್ತಾರೆ'' ಅಂತ ಹೇಳಿದ್ದಾರೆ ಅನುಷ್ಕಾ ಶರ್ಮಾ.

ಹಾಗ್ನೋಡಿದ್ರೆ, ಈ ವರ್ಷ ಅನುಷ್ಕಾ ಶರ್ಮಾ ಹೆಚ್ಚು ಬಿಜಿಯಾಗಿದ್ದು ಸಿನಿಮಾಗಳಲ್ಲಿ. ಅನುಷ್ಕಾ ಅಭಿನಯದ 'ಪರಿ', 'ಸಂಜು', 'ಸುಯ್ ಧಾಗಾ' ಚಿತ್ರಗಳು ಈ ವರ್ಷ ಬಿಡುಗಡೆ ಆದ್ವು. ಇನ್ನೂ ಅನುಷ್ಕಾ ನಟಿಸಿರುವ 'ಝೀರೋ' ಇದೇ ತಿಂಗಳು ರಿಲೀಸ್ ಆಗಲಿದೆ.

ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ಅನುಷ್ಕಾ ಶರ್ಮಾ ತಾಯಿ ಆಗುವ ಬಗ್ಗೆ ಇನ್ನೂ ಮನಸ್ಸು ಮಾಡಿದ ಹಾಗೆ ಕಾಣುತ್ತಿಲ್ಲ.

More from Filmibeat

English summary
Bollywood Actress Anushka Sharma breaks silence on Pregnancy rumors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X