ದೀಪಿಕಾ-ಅನುಷ್ಕಾ ಮುನಿಸು ಮುಗಿತಾ.? ಡಿಪ್ಪಿಗೆ ಅನುಷ್ಕಾ ಮಾಡಿದ ಕಾಮೆಂಟ್.?

By Bharath Kumar

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಇಬ್ಬರಿಗೂ ಆಗಬರಲ್ಲ. ಇಬ್ಬರ ಸಂಬಂಧವೂ ಸರಿಯಲ್ಲ ಎಂಬ ಮಾತು ಇಂಡಸ್ಟ್ರಿಯಲ್ಲಿದೆ.

ಹೀಗಾಗಿಯೇ, ಒಬ್ಬರ ಸಿನಿಮಾದ ಬಗ್ಗೆ ಮತ್ತೊಬ್ಬರು ಮಾತಾಡಲ್ಲ. ಒಬ್ಬರ ಸಿನಿಮಾವನ್ನ ಮತ್ತೊಬ್ಬರ ನೋಡಲ್ಲ ಎಂಬ ಆರೋಪವೂ ಇದೆ. ಆದ್ರೀಗ, ಈ ಸುದ್ದಿ, ವದಂತಿ ಎಲ್ಲವನ್ನೂ ನಟಿ ಅನುಷ್ಕಾ ಶರ್ಮಾ ಮುರಿದು ಹಾಕಿದ್ದಾರೆ.

in pics: ಕೇನ್ಸ್ ಚಿತ್ರೋತ್ಸವದಲ್ಲಿ ದೀಪಿಕಾ ಮಿಂಚು

ನಮ್ಮಿಬ್ಬರ ಮಧ್ಯೆ ಏನೂ ಮುನಿಸು ಇಲ್ಲ. ಜಗಳವೂ ಇಲ್ಲ. ನಾವಿಬ್ಬರು ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಹಾಗಿದ್ರೆ, ದಿಢೀರ್ ಅಂತಾ ಇವರಿಬ್ಬರ ಮಧ್ಯೆ ನಡೆದಿದ್ದೇನು.? ದೀಪಿಕಾ ಮತ್ತು ಅನುಷ್ಕಾ ಅವರ ವಿಷ್ಯ ಚರ್ಚೆಯಾಗಲು ಕಾರಣವೇನು.? ಮತ್ತೆ ದೀಪಿಕಾ ಬಗ್ಗೆ ವಿರಾಟ್ ಪತ್ನಿ ಮಾಡಿದ ಕಾಮೆಂಟ್ ಏನು.? ಮುಂದೆ ಓದಿ.....

ಕೇನ್ ಚಿತ್ರೋತ್ಸವದಲ್ಲಿ ದೀಪಿಕಾ ಮಿಂಚು

ಕೇನ್ ಚಿತ್ರೋತ್ಸವದಲ್ಲಿ ದೀಪಿಕಾ ಮಿಂಚು

ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಖತ್ ಆಗಿ ಮಿಂಚುತ್ತಿದ್ದಾರೆ. ಸ್ಟೈಲಿಶ್ ಕಾಸ್ಟ್ಯೂಮ್ ತೊಟ್ಟು ಮೋಹಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನೋಡುಗರಿಗೆ, ಅಭಿಮಾನಿಗಳಿಗೆ ಸಹಜವಾಗಿ ಇಷ್ಟವಾಗಿದೆ.

ದೀಪಿಕಾಗೆ ಮೆಚ್ಚುಗೆ ಸೂಚಿಸಿದ ಅನುಷ್ಕಾ

ದೀಪಿಕಾಗೆ ಮೆಚ್ಚುಗೆ ಸೂಚಿಸಿದ ಅನುಷ್ಕಾ

ಹೀಗೆ, ಕೇನ್ಸ್ ಚಿತ್ರೋತ್ಸವದಲ್ಲಿ ಕಂಗೊಳಿಸುತ್ತಿರುವ ದೀಪಿಕಾ ಪಡುಕೋಣೆಗೆ ನಟಿ ಅನುಷ್ಕಾ ಶರ್ಮಾ ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪೋಸ್ಟ್ ಮಾಡಿರುವ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ಬಿ-ಟೌನ್ ಮಂದಿಯಲ್ಲಿ ಆಶ್ಚರ್ಯ ಉಂಟು ಮಾಡಿದ್ದಾರೆ.

ದೀಪಿಕಾ ಚೆಂದದ ಬಗ್ಗೆ ಮೆಚ್ಚುಗೆ

ದೀಪಿಕಾ ಚೆಂದದ ಬಗ್ಗೆ ಮೆಚ್ಚುಗೆ

ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿರುವ ದೀಪಿಕಾ ಪಡುಕೋಣೆ ವಿಡಿಯೋಗೆ ಕಾಮೆಂಟ್ ಮಾಡಿರುವ ಅನುಷ್ಕಾ ''ದೀಪಿಕಾ ರೆಡ್ ಕಾರ್ಪೆಟ್ ನಲ್ಲಿ ನಮ್ಮನ್ನು ಬೆರಗುಗೊಳಿಸಿದ್ದೀರಿ'' ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ದೀಪಿಕಾ ''ಥ್ಯಾಂಕ್ ಯೂ ಸೋ ಮಚ್ ಅನುಷ್ಕಾ ಶರ್ಮಾ'' ಎಂದು ಪ್ರತಿಕ್ರಿಯಿಸಿದ್ದಾರೆ.

ಮುನಿಸು ಇಲ್ಲ, ಕೋಲ್ಡ್ ವಾರ್ ಕೂಡ ಇಲ್ಲ

ಮುನಿಸು ಇಲ್ಲ, ಕೋಲ್ಡ್ ವಾರ್ ಕೂಡ ಇಲ್ಲ

ಇದನ್ನ ಗಮನಿಸಿದ ಬಾಲಿವುಡ್ ಮಂದಿ ಇವರಿಬ್ಬರ ಮಧ್ಯೆ ಮುನಿಸು ಇಲ್ಲ, ಕೋಲ್ಡ್ ವಾರು ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಇಬ್ಬರು ಒಂದೇ ವೇದಿಕೆ ಅಥವಾ ಒಂದೇ ಸಿನಿಮಾದಲ್ಲೂ ಕಾಣಿಸಿಕೊಂಡರು ಅಚ್ಚರಿಯಿಲ್ಲ.

More from Filmibeat

English summary
Anushka Sharma Ends Cold War With Deepika Padukone? Praises Her Cannes Look Leaving Fans Surprised.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X