Don't Miss!
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
ಪಿಗ್ಗಿ-ನಿಕ್ಗೆ ನಿದ್ದೆ ಇಲ್ಲದ ರಾತ್ರಿ ಅನುಭವಿಸಲು ಸಿದ್ಧರಾಗಿ ಎಂದು ಅನುಷ್ಕಾ ಶರ್ಮಾ!
ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತಾಯಿಯಾಗಿದ್ದು, ಪ್ರಿಯಾಂಕಾ ಅವರ ಪತಿ ನಿಕ್ ಜೋನಾಸ್ ಅವರು "ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದು ಅಭಿಮಾನಿಗಳಿಗೆ ಸಂತೋಷದ ಜೊತೆಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಆದರೆ ವಾಸ್ತವವಾಗಿ, ಸ್ವತಃ ಪ್ರಿಯಾಂಕಾ ಚೋಪ್ರಾ ತಮ್ಮ ಮಗುವಿಗೆ ಜನ್ಮ ನೀಡಲಿಲ್ಲ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯಿಯ ಮೂಲಕ ತಮ್ಮ ಮಗುವನ್ನು ಪಡೆದಿದ್ದಾರೆ. ಪಿಗ್ಗಿ ಮತ್ತು ನಿಕ್ ಮಗುವಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಬಳಿಕ ಚಿತ್ರರಂಗದ ಹಲವರು ಸೇರಿದಂತೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇದೀಗ ಕೊಂಚ ದಿನಗಳ ನಂತರ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರಿಯಾಂಕಾ ಮತ್ತು ನಿಕ್ಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಸ್ಟೋರೀಯ ಪೋಸ್ಟ್ ನಲ್ಲಿ ಅನುಷ್ಕಾ ಹೀಗೆ ಬರೆದಿದ್ದಾರೆ, ''ಅಭಿನಂದನೆಗಳು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್. ನಿದ್ದೆಯಿಲ್ಲದ ರಾತ್ರಿಗಳು ಮತ್ತು ಸಾಟಿಯಿಲ್ಲದ ಸಂತೋಷ ಮತ್ತು ಪ್ರೀತಿಗಾಗಿ ಸಿದ್ಧರಾಗಿ. ಮಗುವಿಗೆ ಬಹಳಷ್ಟು ಪ್ರೀತಿ.'' ಎಂದು ಹೇಳುವ ಮೂಲಕ ಪಿಗ್ಗಿ ಮತ್ತು ನಿಕ್ ದಂಪತಿಗೆ ಶುಭ ಕೋರಿದ್ದಾರೆ. ಮಗುವಾಗಿ ಕೆಲ ದಿನಗಳ ನಂತರ ಅನುಷ್ಕಾ ಶರ್ಮಾ ವಿಶ್ ಮಾಡಿದ್ದಾರೆ. ಇನ್ನು ಕಳೆದ ವರ್ಷ ನಟಿ ಅನುಷ್ಕಾ ಶರ್ಮಾ ಮತ್ತು ಪತಿ ವಿರಾಟ್ ಕೋಹ್ಲಿಗೆ ಹೆಣ್ಣು ಮಗು ಜನನವಾಗಿತ್ತು. ಆಗ ಪ್ರಿಯಾಂಕಾ ಛೋಪ್ರ ತನ್ನ ಸ್ನೇಹಿತಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದರು. ನಿಮ್ಮ ಜೀವನ ಸಂತಸಕರವಾಗಿರಲಿ ಎಂದು ಹರಸಿದ್ದರು.
ಇತ್ತೀಚೆಗೆ ಪಿಗ್ಗಿಯ ಆತ್ಮೀಯ ಗೆಳತಿ ನತಾಶಾ ಪೂನಾವಾಲಾ ಕೂಡ ಪಿಗ್ಗಿ-ನಿಕ್ ದಂಪತಿಗಳಿಗೆ ಶುಭಾಷಯಗಳನ್ನು ತಿಳಿಸಿದ್ದರು. ನತಾಶಾ ಬರೆದಿದ್ದ ಸಾಲುಗಳು ಹೀಗಿದ್ದವು. "ಅಭಿನಂದನೆಗಳು ಪಿಗ್ಗಿ ಮತ್ತು ನಿಕ್ . ಪಿಗ್ಗಿ ಈ ಸುದ್ದಿ ಕೇಳಿ ನನಗೆ ರೋಮಾಂಚನವಾಗಿದೆ. ಜೀವನದ ಶ್ರೇಷ್ಠ ಸಂತೋಷಕ್ಕಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ! ಈ ಹೊಸ ಅಧ್ಯಾಯಕ್ಕಾಗಿ ನಿಮಗೆ ಎಲ್ಲಾ ಪ್ರೀತಿ ಮತ್ತು ಶಕ್ತಿಯನ್ನು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಿದ್ದೆಯಿಲ್ಲದ ಪಾರ್ಟಿ ರಾತ್ರಿಗಳಿಂದ ನಿದ್ದೆಯಿಲ್ಲದ ಪೋಷಕರ ರಾತ್ರಿಯವರೆಗೆ! - ನಿಮ್ಮೊಂದಿಗೆ ಎಲ್ಲಾ ರೀತಿಯಲ್ಲಿ ನಾವಿದ್ದೇವೆ." ಎಂದು ಬರೆಯುವ ಮೂಲಕ ಹರಸಿದ್ದರು. ಆತಿಯಾ ಶೆಟ್ಟಿ, ವಿಕ್ಕಿ ಕೌಶಲ್, ಅರ್ಜುನ್ ಕಪೂರ್, ಪೂಜಾ ಹೆಗ್ಡೆ, ನೇಹಾ ಧೂಪಿಯಾ ಸೇರಿದಂತೆ ಅನೇಕರು ಪ್ರಿಯಾಂಕಾ-ನಿಕ್ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಜನವರಿ 21ರ ತಡರಾತ್ರಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಈ ವಿಷಯ ಹಂಚಿಕೊಂಡರು. ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿರುವ ಅವರು ಮಗುವಿನ ಫೋಟೋ ತೋರಿಸಿಲ್ಲ. 'ಬಾಡಿಗೆ ತಾಯಿ ಮೂಲಕ ನಾವು ಮಗು ಪಡೆದಿದ್ದೇವೆ ಎಂಬುದನ್ನು ತಿಳಿಸಲು ತುಂಬಾ ಖುಷಿ ಆಗುತ್ತಿದೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವ ಈ ವಿಶೇಷ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಅಂತ ಕೇಳಿಕೊಳ್ಳುತ್ತೇನೆ' ಎಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಸ್ಟ್ ಮಾಡಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವೆ 10 ವರ್ಷಗಳ ವಯಸ್ಸಿನ ಅಂತರ ಇದೆ. 2018ರಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆ ಬಳಿಕ ಪ್ರಿಯಾಂಕಾ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ. ಬಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಹಾಲಿವುಡ್ ಪ್ರಾಜೆಕ್ಟ್ಗಳನ್ನೇ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಅವರ ವೃತ್ತಿ ಜೀವನಕ್ಕೆ ಪತಿ ನಿಕ್ ಜೋನಸ್ ಬೆಂಬಲವಾಗಿ ನಿಂತಿದ್ದಾರೆ.

ಈ ಹಿಂದೆ ನಿಕ್ ಜೋನಸ್ ಹೆಸರನ್ನು ಪಿಗ್ಗಿ ತನ್ನ ಇನ್ಸ್ಟಾಗ್ರಾಮ್ನಿಂದ ತೆಗೆದುಹಾಕಿದ್ದರಿಂದ ವಿಚ್ಛೇದನದ ಊಹಾಪೋಹಗಳು ಕೇಳಿಬಂದವು. ಮದುವೆಯ ನಂತರ ಪ್ರಿಯಾಂಕಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪ್ರಿಯಾಂಕಾ ಚೋಪ್ರಾ ಜೋನಸ್ ಎಂದು ಬದಲಾಯಿಸಿದ್ದರು. ಇತ್ತೀಚೆಗೆ, ಪ್ರಿಯಾಂಕಾ ತನ್ನ ಹೆಸರಿನಿಂದ ಜೋನಸ್ ಹೆಸರನ್ನು ತೆಗೆದುಹಾಕಿದ್ದರು, ನಂತರ ಅವರ ವಿಚ್ಛೇದನದ ಬಗ್ಗೆ ಊಹಾಪೋಹಗಳು ಜೋರಾಗಿ ಕೇಳಿ ಬರಲು ಆರಂಭಿಸಿತ್ತು. ನಂತರ ಸ್ವತಃ ಪ್ರಿಯಾಂಕಾ ಛೋಪ್ರಾ ತಾನು ನಿಕ್ನಿಂದ ಬೇರೆಯಾಗುತ್ತಿಲ್ಲ ಎಂದು ಬಹಿರಂಗ ಪಡಿಸಿದ್ದರು. ತದನಂತರ ಇಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದು ಸುಂದರ ಜೀವನ ನಡೆಸುತ್ತಿರೋದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೇ ಮಗು ಪಡೆಯುವ ಬಗ್ಗೆಯೂ ಪಿಗ್ಗಿ ಇಂಗಿತ ವ್ಯಕ್ತಪಡಿಸಿದ್ದರು. 'ದಿ ಜೊನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್' ಕಾರ್ಯಕ್ರಮದಲ್ಲಿ ನಿಕ್ ಜೊತೆ ಮಗುವಿನ ಕುರಿತು ಮಾತನಾಡಿದರು. ನಿಕ್ ಸಹೋದರರ ಉದಾಹರಣೆಯನ್ನು ನೀಡುತ್ತಾ, ಕಾರ್ಯಕ್ರಮದಲ್ಲಿ ತಮಾಷೆಯಾಗಿ ಹೇಳಿದರು, "ಇನ್ನೂ ಮಕ್ಕಳಾಗದ ದಂಪತಿಗಳು ನಾವಿಬ್ಬರೇ. ಅದಕ್ಕಾಗಿಯೇ ಇಂದು ನಿಕ್ ಮತ್ತು ನಾನು ಮಗುವನ್ನು ಪಡೆಯುವ ಬಗ್ಗೆ ಯೋಜಿಸುತ್ತಿದ್ದೇವೆ ಎಂದು ಎಲ್ಲರ ಮುಂದೆ ಹೇಳಲು ಬಯಸುತ್ತೇನೆ." ಎಂದಿದ್ದರು.