For Quick Alerts
  ALLOW NOTIFICATIONS  
  For Daily Alerts

  ಈ ಕಾರಣಕ್ಕಾಗಿ ಸಿನಿಮಾಗಳಿಂದ ರಿಜೆಕ್ಟ್ ಆಗುತ್ತಿದ್ದರು ನಟಿ ಅನುಷ್ಕಾ ಶರ್ಮಾ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾ ಸದ್ಯ ಮಗಳು ವಮಿಕಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್ ಗೆ ಪ್ರವಾಸ ಬೆಳೆಸಿದ ಅನುಷ್ಕಾ, ಮಗಳನ್ನು ಎತ್ತಿಕೊಂಡು ಏರ್ ಪೋರ್ಟ್ ಒಳಗೆ ಎಂಟ್ರಿಯಾಗುತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ಮದುವೆ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ಅನುಷ್ಕಾ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈಗಲೂ ಬಹುಬೇಡಿಕೆಯ ನಟಿಯಾಗಿರುವ ಅನುಷ್ಕಾ ಸಿನಿಮಾದಿಂದ ದೂರ ಇದ್ದರೂ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.

  ಮಗಳು ವಮಿಕಾ ಹೆಸರಿನ ಅರ್ಥ ಹೇಳಿದ ವಿರಾಟ್ ಕೊಹ್ಲಿಮಗಳು ವಮಿಕಾ ಹೆಸರಿನ ಅರ್ಥ ಹೇಳಿದ ವಿರಾಟ್ ಕೊಹ್ಲಿ

  2017ರಲ್ಲಿ ಅನುಷ್ಕಾ ಸಂದರ್ಶನವೊಂದರಲ್ಲಿ ನಿರಾಕರಣೆ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗುತ್ತಿವೆ. ಇಂದು ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ಅನುಷ್ಕಾ ಈ ಸ್ಥಾನಕ್ಕೆ ಬರಲು ಪ್ರಾರಂಭದಲ್ಲಿ ಅವರ ಪಟ್ಟ ಶ್ರಮ, ಅಪಮಾನ, ನಿರಾಕರಣೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇಂದು ಅನುಷ್ಕಾ ಕಾಲ್ ಶೀಟ್ ಗಾಗಿ ನಿರ್ಮಾಪಕರು, ಜಾಹಿರಾತು ಕಂಪನಿಗಳು ಕ್ಯೂ ನಿಂತಿರುತ್ತವೆ. ಆದರೆ ಪ್ರಾರಂಭದ ದಿನಗಳಲ್ಲಿ ಅನುಷ್ಕಾ ಸಿನಿಮಾ, ಶೋ, ಜಾಹಿರಾತುಗಳಿಂದ ನಿರಂತರವಾಗಿ ರಿಜೆಕ್ಟ್ ಆಗುತ್ತಿದ್ದರು. ಇದರಿಂದ ಅನುಭವಿಸಿದ ಮಾನಸಿಕ ಯಾತನೆ ಬಗ್ಗೆ ಮಾತನಾಡಿದ್ದಾರೆ.

  ಅನುಷ್ಕಾ 15ನೇ ವಯಸ್ಸಿನಿಂದ ನಿರಾಕರಣೆ ಅನುಭವಿಸಿದ್ದರು. ನಿರಂತರವಾಗಿ ಶೋಗಳಿಂದ ಹೊರ ಉಳಿಯುತ್ತಿದ್ದರು. ಜಾಹಿರಾತುಗಳಿಗೆ ಮೊದಲು ಆಯ್ಕೆಯಾಗಿದ್ದರೂ ಬಳಿಕ ಅವರ ಜಾಗಕ್ಕೆ ಬೇರೆಯವರು ಆಯ್ಕೆಯಾಗಿರುತ್ತಿದ್ದರು. ಇದು ಸಾಮಾನ್ಯವಾಗಿ ಉದ್ಯಮ ಮತ್ತು ಜೀವನದ ಒಂದು ಅವಿಭಾಜ್ಯ ಅಂಗವೆಂದು ಈಗ ಅರ್ಥವಾಗಿದೆ ಎಂದು ಅನುಷ್ಕಾ ಹೇಳಿದ್ದಾರೆ.

  15ನೇ ವಯಸ್ಸು, ಚಿಕ್ಕ ವಯಸ್ಸಿನಲ್ಲಿ ಹೇಗೆ ಕಾಣುತ್ತೀರಿ ಎನ್ನುವುದರ ಮೇಲೆ ಎಲ್ಲಾ ನಿರ್ಣಯವಾಗಿತ್ತು. ಇದು ಮಾನಸಿಕವಾಗಿ ತುಂಬಾ ಘಾಸಿಗೊಳಿಗೊಳಿಸಿತ್ತು ಎಂದು ಅನುಷ್ಕಾ ಹೇಳಿದ್ದಾರೆ.

  ಇನ್ನು ಕೆಲವು ನಿರ್ದೇಶಕರು ಮತ್ತು ಕಾಸ್ಟಿಂಗ್ ನಿರ್ದೇಶಕರು ಚಿತ್ರೀಕರಣ ಸೆಟ್ ಗಳಲ್ಲಿ ಪರೋಕ್ಷವಾಗಿ ಮಾಡುವ ಟೀಕೆಗಳ ಬಗ್ಗೆಯೂ ಮಾತನಾಡಿದ್ದಾರೆ. 'ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ದಿವಂತಳಾಗಿದ್ದೇನೆ. ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಅವರು ಹೇಳಬಹುದು. ಆದರೆ ಅದು ದೇಹದ ಬಗ್ಗೆ ಮಾತನಾಡುವ ಪರೋಕ್ಷ ಮಾರ್ಗ' ಎಂದು ಹೇಳಿದ್ದಾರೆ.

  Prashanth Neel, Yash ಈ ರೀತಿ ಮಾಡ್ತಾರೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ | Filmibeat Kannada

  ಅನುಷ್ಕಾ ಸದ್ಯ ಪತಿಯ ಕ್ರಿಕೆಟ್ ಜೀವನ ಮತ್ತು ಮಗಳ ಆರೈಕೆ ಕಡೆ ಗಮನ ಹರಿಸಿದ್ದಾರೆ. ನಟನೆ ಜೊತೆ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅನುಷ್ಕಾ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Actress Anushka Sharma faced rejection from the age of 15 based on her look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X