ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ; ಮತ್ತೆ ಟ್ರೋಲ್ ಆದ ತುಂಬು ಗರ್ಭಿಣಿ ಅನುಷ್ಕಾ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅನುಷ್ಕಾ ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಹೆಚ್ಚು ಟ್ರೋಲ್ ಆಗಿದ್ದು ಪತಿ ವಿರಾಟ್ ಕೊಹ್ಲಿಯಿಂದ. ಹೌದು, ಕ್ರಿಕೆಟ್ ಅಂಗಳದಲ್ಲಿ ವಿರಾಟ್ ಕಳಪೆ ಪ್ರದರ್ಶನ ತೋರಿದಾಗಲೆಲ್ಲಾ ನೆಟ್ಟಿಗರು ಅನುಷ್ಕಾ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಾರೆ.
ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೂ ಅನುಷ್ಕಾನೇ ಕಾರಣ ಎಂದು ಟ್ರೋಲ್ ಮಾಡಲಾಗುತ್ತಿದೆ. ಸೋಲಿನಿಂದ ಬೇಸರಗೊಂಡಿರುವ ಅಭಿಮಾನಿಗಳು, ಅನುಷ್ಕಾ ಅವರನ್ನು ದೂರುತ್ತಿದ್ದಾರೆ. ಅಲ್ಲದೆ ಅನುಷ್ಕಾ ಬಗ್ಗೆ ತರಹೇವಾರಿ ಮೀಮ್ಸ್ ಗಳು ಹರಿದಾಡುತ್ತಿವೆ.

ಟೀಂ ಇಂಡಿಯಾ ಸೋಲಿಗೆ ಅನುಷ್ಕಾ ಕಾರಣ
ಅನುಷ್ಕಾಗಾಗಿ ವಿರಾಟ್ ಬೇಗ ಔಟ್ ಆಗಿದ್ದಾರೆ, ಅನುಷ್ಕಾಗೆ ಹೆರಿಗೆ ನೋವು ಕಾಣಿಸಿಕೊಳ್ಳುವಷ್ಟೊತ್ತಿಗೆ ವಿರಾಟ್ ಅಲ್ಲಿರಬೇಕೆಂದು ಬೇಗ ಔಟ್ ಆಗಿದ್ದಾರೆ. ಟೀಂ ಇಂಡಿಯಾ ಸೋಲಿಗೆ ಕಾರಣರಾಗಿದ್ದಾರೆ. ಅನುಷ್ಕಾ ಅಲ್ಲಿ ಕೊಹ್ಲಿಗಾಗಿ ಕಾಯುತ್ತಿದ್ದಾರೆ. ಅವರನ್ನು ಕಾಯಿಸಲು ಕೊಹ್ಲಿಗೆ ಇಷ್ಟವಿಲ್ಲ. ಪರ್ಫೆಕ್ಟ್ ಗಂಡ ಎಂದು ವ್ಯಂಗ್ಯ ವಾಡುತ್ತಿದ್ದಾರೆ.

ಅನುಷ್ಕಾರನ್ನು ಹೊಣೆ ಮಾಡುವುದು ಸರಿಯಲ್ಲ
ಇನ್ನು ಕೆಲವರು ಅನುಷ್ಕಾರನ್ನು ದೂಷಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟೀಂ ಇಂಡಿಯಾ ಸೋತಾಗೆಲ್ಲ ವಿನಾಕಾರಣ ಅನುಷ್ಕಾರನ್ನು ದೂರುವುದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ಮುಂದಿನ ವರ್ಷ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ತಂದೆಯಾಗುತ್ತಿರುವ ವಿರಾಟ್ ಈಗಾಗಲೇ ಪಿತೃತ್ವ ರಜೆ ಪಡೆದುಕೊಂಡಿದ್ದಾರೆ.

ಶಿರ್ಸಾಸನ ಮಾಡ ಟ್ರೋಲ್ ಆಗಿದ್ದ ಅನುಷ್ಕಾ
ಅಂದಹಾಗೆ ಅನುಷ್ಕಾ ಇತ್ತೀಚಿಗಷ್ಟೆ ಶಿರ್ಸಾಸನ ಮಾಡಿ ಟ್ರೋಲ್ ಗೆ ಗುರಿಯಾಗಿದ್ದರು. ತುಂಬು ಗರ್ಭಿಣಿ ಅನುಷ್ಕಾ ಶಿರ್ಸಾಸನ ಮಾಡಲು ವಿರಾಟ್ ಕೊಹ್ಲಿ ಸಹ ಸಹಾಯ ಮಾಡಿದ್ದರು. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಅನುಷ್ಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
Recommended Video

7 ಜಾಹೀರಾತಿನಲ್ಲಿ ಅನುಷ್ಕಾ ನಟನೆ
ಇತ್ತೀಚಿಗೆ ಅನುಷ್ಕಾ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದರು. ತಿಂಗಳ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅನುಷ್ಕಾ ಬರೋಬ್ಬರಿ 7 ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಗಳ ನಡುವೆ ಅನುಷ್ಕಾ ಯಶಸ್ವಿಯಾಗಿ ಜಾಹೀರಾತು ಚಿತ್ರೀಕರಣ ಮುಗಿಸಿದ್ದಾರೆ.


Click it and Unblock the Notifications











