ಒಳ್ಳೆಯದನ್ನೇ ಹೇಳಿದರೂ ಅನುಷ್ಕಾ ಕೆಟ್ಟವಳು: ಟ್ರೋಲಿಗರಿಗೆ ಶೇಮ್ ಎಂದ ವಿರಾಟ್.!

By Harshitha

''ಒಳ್ಳೆಯದಕ್ಕೆ ಕಾಲ ಇಲ್ಲ'' ಅಂತಾರಲ್ಲ. ಆ ಮಾತು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಷಯದಲ್ಲಿ ಸತ್ಯ ಆಗಿದೆ.

ಐಷಾರಾಮಿ ಕಾರ್ ನಲ್ಲಿ ಕೂತು ಪ್ರಯಾಣ ಮಾಡುತ್ತಿದ್ದ ಓರ್ವ ವ್ಯಕ್ತಿ ಬೇಜವಾಬ್ದಾರಿಯಿಂದ ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದ್ದನ್ನ ನೋಡಿದ ಅನುಷ್ಕಾ, ಆ ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡಿದ್ದರು. ''ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಕಬೇಡಿ. ದಯವಿಟ್ಟು ಕಸದ ಬುಟ್ಟಿ ಬಳಸಿ'' ಎಂದು ಅನುಷ್ಕಾ ಶರ್ಮಾ ಕೇಳಿಕೊಂಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅನುಷ್ಕಾ ಶರ್ಮಾ ರವರ ಸಾಮಾಜಿಕ ಕಳಕಳಿಗೆ ಆ ವಿಡಿಯೋ ಸಾಕ್ಷಿ ಆಗಿದ್ದರೂ, ಹಲವರು ಮಾತ್ರ ಅನುಷ್ಕಾ ಶರ್ಮಾ ಕಾಲೆಳೆಯುತ್ತಿದ್ದಾರೆ. ವಿಚಿತ್ರ ಅಂದ್ರೆ, ಇದೇ ವಿಚಾರಕ್ಕೆ ಅನುಷ್ಕಾ ಶರ್ಮಾ ಟ್ರೋಲ್ ಆಗುತ್ತಿದ್ದಾರೆ.

ಅನುಷ್ಕಾ ಶರ್ಮಾ ಮಾಡಿದ ಕೆಲಸಕ್ಕೆ ಕೆಲವರು ಭೇಷ್ ಎನ್ನುತ್ತಿದ್ದರೆ, ಹಲವರು ಇದೆಲ್ಲ 'ಪಬ್ಲಿಸಿಟಿ ಸ್ಟಂಟ್' ಅಂತ ಲೇವಡಿ ಮಾಡುತ್ತಿದ್ದಾರೆ. ಬೇಕಾದ್ರೆ, ಕೆಲ ಟ್ವೀಟ್ ಗಳನ್ನ ನೀವೇ ನೋಡಿ...

ಮೊದಲು ಈ ವಿಡಿಯೋ ನೋಡ್ಬಿಡಿ....

ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಓರ್ವ ವ್ಯಕ್ತಿ ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದ್ದನ್ನ ನೋಡಿದ್ಮೇಲೆ, ''ರಸ್ತೆ ಮೇಲೆ ಕಸವನ್ನ ಯಾಕೆ ಎಸೆಯುತ್ತಿದ್ದೀರಾ.? ಪ್ಲಾಸ್ಟಿಕ್ ನ ರಸ್ತೆಗೆ ಯಾಕೆ ಎಸೆಯುತ್ತಿದ್ದೀರಾ.? ದಯವಿಟ್ಟು ಹುಷಾರಾಗಿರಿ. ರಸ್ತೆ ಮೇಲೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ಕಸದ ಬುಟ್ಟಿ ಉಪಯೋಗಿಸಿ'' ಎಂದು ನಟಿ ಅನುಷ್ಕಾ ಶರ್ಮಾ ಬುದ್ಧಿ ಹೇಳಿದ ವಿಡಿಯೋನ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದರು. ಜೊತೆಗೆ, ''ರಸ್ತೆ ಮೇಲೆ ಕಸ ಎಸೆಯುತ್ತಿದ್ದ ವ್ಯಕ್ತಿಗೆ ಬುದ್ಧಿ ಹೇಳಿದ್ದೇವೆ. ಐಷಾರಾಮಿ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರೂ ತಲೆಯಲ್ಲಿ ಬುದ್ಧಿ ಇರುವುದಿಲ್ಲ. ಇಂತಹ ಜನ ನಮ್ಮ ದೇಶವನ್ನ ಹೇಗೆ ಸ್ವಚ್ಛವಾಗಿ ಇಡುತ್ತಾರೆ.? ಇದೇ ತರಹ ನಿಮ್ಮ ಅಕ್ಕ-ಪಕ್ಕದಲ್ಲಿ ಆಗುತ್ತಿದ್ದರೆ, ಹೀಗೇ ಬುದ್ಧಿ ಹೇಳಿ ಜನರಲ್ಲಿ ಅರಿವು ಮೂಡಿಸಿ'' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು.

ಕಾಲೆಳೆಯುವ ಕಾಲ ಶುರು ಆಯ್ತು

ಕಾಲೆಳೆಯುವ ಕಾಲ ಶುರು ಆಯ್ತು

''ಪತ್ನಿಯ ವೀರತ್ವವನ್ನ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಉದ್ದೇಶ ಏನಿತ್ತು.? ಕಾರಿನಿಂದ ಪ್ಲಾಸ್ಟಿಕ್ ಕವರ್ ಎಸೆಯುವವರನ್ನ ನೀವು ಇದೇ ಮೊದಲ ಬಾರಿಗೆ ನೋಡುತ್ತಿದ್ದೀರಾ.? ಆ ವ್ಯಕ್ತಿಗೆ ಬುದ್ಧಿ ಹೇಳುವುದೇ ನಿಮ್ಮ ಉದ್ದೇಶ ಆಗಿದ್ದರೆ, ಮೆಲು ಧ್ವನಿಯಲ್ಲಿ ಮಾತನಾಡಬೇಕಿತ್ತು'' ಅಂತ ಕೆಲವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಜಾಸ್ತಿ ಆಗುತ್ತೆ

ಇನ್ನೂ ಜಾಸ್ತಿ ಆಗುತ್ತೆ

''ಕಾರಿನ ಕಿಟಕಿಯನ್ನು ಕೆಳಗೆ ಇಳಿಸಿ, ಜನರ ಜೊತೆಗೆ ವಿರಾಟ್-ಅನುಷ್ಕಾ ಮಾತನಾಡುತ್ತಾರೆ ಅಂದ್ರೆ, ಜನ ಇನ್ನೂ ಹೆಚ್ಚು ಪ್ಲಾಸ್ಟಿಕ್ ಎಸೆಯುತ್ತಾರೆ'' ಅಂತೆಲ್ಲ ಕೆಲವರು ಲೇವಡಿ ಮಾಡಿದ್ದಾರೆ.

ಎಲ್ಲವೂ ಪಬ್ಲಿಸಿಟಿ

ಎಲ್ಲವೂ ಪಬ್ಲಿಸಿಟಿ

''ವೀರತ್ವವನ್ನು ಪ್ರದರ್ಶಿಸುವ ಬದಲು ಸ್ನೇಹದಿಂದ ಹೇಳಬೇಕಿತ್ತು. ಒಬ್ಬ ವ್ಯಕ್ತಿಗೆ ಅವಮಾನ ಮಾಡಿ, ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು ಸರಿಯಲ್ಲ. ಇಂತಹ ಪಬ್ಲಿಸಿಟಿ ಖಂಡಿತ ತಪ್ಪು'' ಎಂಬುದು ಕೆಲವರ ಅಭಿಪ್ರಾಯ.

ಸರಿಯಾಗಿಯೇ ಮಾಡಿದ್ದಾರೆ.!

ಸರಿಯಾಗಿಯೇ ಮಾಡಿದ್ದಾರೆ.!

''ವಿರಾಟ್ ಹಾಗೂ ಅನುಷ್ಕಾ ಸರಿಯಾಗಿಯೇ ಮಾಡಿದ್ದಾರೆ. ಇದು ಎಲ್ಲರ ಗಮನ ಸೆಳೆಯಬೇಕು ನಿಜ. ರಸ್ತೆ ಮೇಲೆ ಕಸ ಎಸೆಯುವವರಿಗೆ ಖಂಡಿತ ಇದು ಪಾಠ'' ಅಂತ ವಿರಾಟ್-ಅನುಷ್ಕಾ ಪರ ಬ್ಯಾಟಿಂಗ್ ಮಾಡುವವರೂ ಇದ್ದಾರೆ.

ಶೇಮ್ ಎಂದ ವಿರಾಟ್ ಕೊಹ್ಲಿ

''ಈ ತರಹ ಕೆಲಸ ಮಾಡುವ ಗಟ್ಟಿ ಗುಂಡಿಗೆ ಇಲ್ಲದವರು ಇದನ್ನು ಕೇವಲವಾಗಿ ಪರಿಗಣಿಸುತ್ತಿದ್ದಾರೆ. ಇತ್ತೀಚೆಗಂತೂ ಜನರಿಗೆ ಎಲ್ಲವೂ ಮೀಮ್ ಕನ್ಟೆಂಟ್ ಆಗಿದೆ. ಶೇಮ್'' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

More from Filmibeat

English summary
Bollywood Actress Anushka Sharma gets trolled for scolding a man who littered on the road. Have a look at few tweets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X